ಸಂಚಾರಿ ವಿಜಯ್ ಅಭಿನಯದ ʻಮೇಲೊಬ್ಬ ಮಾಯಾವಿʼ ಚಿತ್ರದ ಮೊದಲ ವಿಡಿಯೋ ಸಾಂಗ್ ʻನಿಂತು ಹೋಯಿತೇ ಜೀವಗಾನ..ʼ ರಿಲೀಸ್ ಆಗಿದ್ದು, ಈಗಾಗಲೇ ಅದಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಈಗ ಚಿತ್ರತಂಡ ಎರಡನೇ ವಿಡಿಯೋ ಸಾಂಗ್ ಬಿಡುಗೊಡೆಗೊಳಿಸಿದೆ.
ಚಿತ್ರಕ್ಕೆ ಎಲ್.ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ರಚಿಸಿದ್ದಾರೆ. ರಾಜೇಶ್ ಕೃಷ್ಣನ್ ಮತ್ತು ಅನುರಾಧಾ ಭಟ್ ಹಾಡಿರುವ ಈ ಲವ್ ಸಾಂಗ್ ಗೆ ರಾಮು ನೃತ್ಯ ಸಂಯೋಜಿಸಿದ್ದಾರೆ. ಇನ್ನುಳಿದಂತೆ ಬಿ.ನವೀನ್‌ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಿಸಿದ್ದಾರೆ.
ಕೆ.ಗಿರೀಶ್ ಕುಮಾರ್ ಸಂಕಲನಕಾರರಾಗಿರುವ ʻಮೇಲೊಬ್ಬ ಮಾಯಾವಿʼಗೆ, ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ವೆತಾ ಕುಮ್ಟ ಅವರ ವಸ್ತ್ರವಿನ್ಯಾಸವಿದೆ.
ಸಂಚಾರಿ ವಿಜಯ್, ಅನನ್ಯಾ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಎಮ್.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್ ಲಕ್ಷ್ಮೀ ಅರ್ಪಣ್, ನವೀನ್‌ಕುಮಾರ್, ಪವಿತ್ರಾ ಜಯರಾಮ್, ಮುಖೇಶ್, ಡಾ. ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ.