ನಟ ಸಂಚಾರಿ ವಿಜಯ್ ಈಗಿಲ್ಲ. ಅವರೇನಿದ್ದರೂ ಈಗ ನೆನಪು ಮಾತ್ರ. ಈಗ ಅವರ ಆಂತರಿಕ ಬದುಕಿನ ರೋಚಕ ಗಳು ಬಯಲಿಗೆ ಬರುತ್ತಿದ್ದು, ಅವೆಲ್ಲ ಅವರನ್ನು ಬೆಚ್ಚಿ ಬೀಳಿಸುತ್ತಿವೆ. ವಿಚಿತ್ರ ಅಂದ್ರೆ, ಕನ್ನಡ ಚಿತ್ರ ರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟನೊಬ್ಬ ಜಾತಿಯ ಅವಮಾನದ
ತೀವ್ರವಾಗಿ ನೊಂದಿದ್ದರು ಎನ್ನುವ ಸಂಗತಿಯನ್ನು ವಿಜಯ್ ಆತ್ಮೀಯರು ಆದ ನಟ ಸತೀಶ್ ನೀನಾಸಂ ಬಹಿರಂಗಪಡಿಸಿದ್ದಾರೆ. ಗೆಳೆಯ ವಿಜಯ್ ಅವರ ನಟನೆಯ ಜರ್ನಿ ಹಾಗೂ ಅನುಭವಿಸಿದ ಅವಮಾನಗಳ ಕುರಿತು ‘ಕನ್ನಡ ಪಿಕ್ಚರ್” ಯೂಟ್ಯೂಬ್ ಚಾನಲ್ನಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
‘ವಿಜಯ್ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟರೂ ಸಮಾಜದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದರು. ಕಷ್ಟಗಳು ಎನ್ನುವುದಕ್ಕಿಂತ ನೋವು ಅನುಭವಿಸಿದ್ದರು. ಈ ಸಮಾಜದ ವ್ಯವಸ್ಥೆಯಿಂದ ಜೀವನದಲ್ಲಿ ನೊಂದಿದ್ದರು. ಪ್ರಾಣಿಗಳ ಮೇಲೆ ತೋರುವ ಮನುಷ್ಯತ್ವ, ಮನುಷ್ಯರ ಮೇಲೆ ಏಕಿಲ್ಲ ಎಂದು ಹಲವು ಬಾರಿ ಸಂಕಟ ಪಟ್ಟಿದ್ದರು” ಎಂದು ನಟ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.
‘ಸಂಚಾರಿ ವಿಜಯ್ ಈಗಿಲ್ಲ ಅಂತ ಕಣ್ಣೀರು ಹಾಕುವ ಜನ, ಅವರಿದ್ದಾಗ ನೀವು ಕೊಟ್ಟ ನೋವುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಕರ್ನಾಟಕದ ಹೆಮ್ಮೆ ಅಂತ ಕೊಂಡಾಡಿದ ಮಂದಿ ಎಷ್ಟು ನೋವು ಕೊಟ್ಟಿದ್ದೀರಾ ಅಂತ ನೋಡ್ಕೊಳ್ಳಿ. ಎಲ್ಲವೂ ಸರಿ ಇದೆ, ಎಲ್ಲವೂ ಚೆನ್ನಾಗಿದೆ ಅಂತ ಎಷ್ಟು ದಿನ ಮುಚ್ಚಿಟ್ಟುಕೊಂಡು ಹೋಗ್ತೀರಾ, ಜಾತಿ ಯಾವುದು, ಊರು ಯಾವುದು, ಕೆಲಸ ಯಾವುದು ಅಂತ ನೋಡದೆ ಒಬ್ಬ ಮನುಷ್ಯ ಎಂದು ನೋಡುವುದು ಯಾವಾಗ” ಎಂದು ಬೇಸರ ಹೊರಹಾಕಿದರು.
”ಕಾಜಿ’ ಅಂತ ಸಾಕ್ಷ್ಯಚಿತ್ರ ಮಾಡಿದೆ. ಆ ಸಮಯದಲ್ಲಿ ಒಬ್ಬರು ಕಾಮೆಂಟ್ ಮಾಡಿದರು. ‘ಈ ರೀತಿ ಸಿನಿಮಾದಲ್ಲಿ ತೋರಿಸಬೇಡಿ, ಅಮೆರಿಕಾದಲ್ಲಿ ನಮ್ಮ ಬಡತನ ನೋಡಿದ್ರೆ ಅವಮಾನ ಆಗುತ್ತೆ’ ಅಂದ್ರು. ಹಾಗಾದ್ರೆ, ಇಲ್ಲಿರೋ ಬಡತನ, ಸಮಸ್ಯೆ, ಜಾತಿ ಸಮಸ್ಯೆ ಮುಚ್ಚಾಕ್ತೀರಾ ನೀವು. 21ನೇ ಶತಮಾನದಲ್ಲಿ ಎಲ್ಲವೂ ಅಭಿವೃದ್ದಿ ಹೊಂದಿದೆ, ವಿಮಾನ, ವಿಜ್ಞಾನ, ಆವಿಷ್ಕಾರ ಎಷ್ಟೇ ಅಗಿದ್ದರೂ ಮನುಷ್ಯತ್ವದಲ್ಲಿ ಮನುಷ್ಯರು ಬಹಳ ಹಿಂದೆ ಇದ್ದಾರೆ. ಪ್ರಾಣಿಗಿಂತ ಹೀನಾಯವಾಗಿದ್ದಾರೆ” ಎಂದು ಸತೀಶ್ ಅಸಮಾಧಾನ ವ್ಯಕ್ತಪಡಿಸಿದರು.
”ಸಂಚಾರಿ ವಿಜಯ್ಗೂ ಈ ಜಾತಿ ಅವಮಾನ ಆಗಿತ್ತು. ಅನೇಕ ಬಾರಿ ನನ್ನೊಂದಿಗೆ ಈ ವಿಚಾರ ಚರ್ಚಿಸಿದ್ದರು. ಸಮಯ ಬಂದಾಗ, ಎಲ್ಲವನ್ನು ವಿವರವಾಗಿ ಹೇಳ್ತೀನೆ, ತುಂಬಾ ಜನ ಅದನ್ನು ಮುಚ್ಚಿಟ್ಟಿದ್ದಾರೆ, ನಾನು ಹೇಳ್ತೇನೆ. ಅವನಿಗೆ ಈ ಸಮಾಜ ಕೊಟ್ಟ ಅಪಮಾನ ಎಂತಹದ್ದು ಎಂದು ಎಲ್ಲರೂ ತಿಳಿಯಲಿ” ಎಂದು ಸತೀಶ್ ಆಕ್ರೋಶವಾಗಿ ಮಾತನಾಡಿದರು.






