ಕನ್ನಡ ಚಿತ್ರರಂಗದಲ್ಲಿ ಹೊಸಬರು ತಮ್ಮ ಕನಸು ನನಸು ಮಾಡಿಕೊಳ್ಳುವ ಮೂಲಕ ಗಟ್ಟಿ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಹೊಸಬರೇ ಸೇರಿ ಕಟ್ಟಿಕೊಂಡ ಕನಸೊಂದು ಈಡೇರಿದೆ. ಅಂದರೆ ಹೊಸಬರ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ಹೌದು,”ಕನಸು ಮಾರಾಟಕ್ಕಿದೆ” ಸಿನಿಮಾ 11ನೇ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗಿ, ಪ್ರಶಸ್ತಿ ಪಡೆದುಕೊಂಡಿದೆ.
ಈ ವಿಷಯವನ್ನು ನಿರ್ದೇಶಕ ಬೆಳ್ತಂಗಡಿಯ ಸ್ಮಿತೇಶ್ ಎಸ್. ಬಾರ್ಯ ಸ್ಪಷ್ಟಪಡಿಸಿದ್ದಾರೆ.
‘ಹಲವು ರಾಷ್ಟ್ರಗಳ ಸಿನಿಮಾಗಳ ಜೊತೆ ಕನ್ನಡದಿಂದ ಈ ಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಪ್ರತಿವರ್ಷ ದೆಹಲಿಯಲ್ಲಿ ನಡೆಯುವ ಈ ಚಲನಚಿತ್ರೋತ್ಸವ ಈ ಬಾರಿ ಕೋವಿಡ್ ಕಾರಣದಿಂದಾಗಿ ಆನ್ಲೈನ್ ಮೂಲಕ ಅವಾರ್ಡ್ ಘೋಷಿಸಲಾಗಿದೆ. ವಿಶೇಷ ವಿಭಾಗದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ’ ಎಂದು ನಿರ್ದೇಶಕರು ಖುಷಿ ಹಂಚಿಕೊಂಡಿದ್ದಾರೆ.
ಈ ಚಿತ್ರಕ್ಕೆ ಶಿವಕುಮಾರ್ ಬಿ. ನಿರ್ಮಾಪಕರು. ನಾಯಕರಾಗಿ ಪ್ರಜ್ಞೇಶ್ ಕಾಣಿಸಿಕೊಂಡರೆ ನಾಯಕಿರಾಗಿ ಸ್ವಸ್ತಿಕಾ, ನವ್ಯಾ ಪೂಜಾರಿ ನಟಿಸಿದ್ದಾರೆ. ಅಲ್ಲದೆ, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಜಿ.ಜಿ, ಅನೀಶ್ ಪೂಜಾರಿ, ಧೀರಜ್, ಚಿದಂಬರ,
ಹಿರಿಯ ನಟ ಸಿದ್ಲಿಂಗು ಶ್ರೀಧರ್, ಮೋಹನ್ ಶೇಣಿ, ಆಥಿರ ಸೇರಿದಂತೆ ಇತರರು ನಟಿಸಿದ್ದಾರೆ.