ಹಣ ಮನುಷ್ಯನ ಜೀವನದಲ್ಲಿ ಏನೆಲ್ಲ ಆಟ ಆಡಿಸುತ್ತೆ ಎಂದು ಹೇಳುವ ಚಿತ್ರ “13” ತೆರೆಕಂಡಿದ್ದು, ವೀಕ್ಷಕರ ಹಾಗು ಮಾದ್ಯಮಗಳ ಪ್ರಶಂಸೆಗೆ ಪಾತ್ರವಾಗಿದೆ. ಸಿನಿಮಾ ಇಷ್ಟಪಟ್ಟು ನೋಡುತ್ತಿರುವ ವೀಕ್ಷಕರಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರಾದ ಮಂಜುನಾಥ್ ಗೌಡ, ಕೇಶವಮೂರ್ತಿ, ಮಂಜುನಾಥ ಹೆಚ್.ಎಸ್. ಹಾಜರಿದ್ದು ಚಿತ್ರದ ಗೆಲುವಿನ ಸಂಭ್ರಮ ಹಂಚಿಕೊಂಡರು.
ರಾಘವೇಂದ್ರ ರಾಜಕುಮಾರ್ ಮಾತನಾಡಿ, ಮಾದ್ಯಮದವರು ಜನರಿಗೆ ಏನು ತಲುಪಿಸಬೇಕೋ ಅದನ್ನು ತಲುಪಿಸಿದ್ದೀರಿ, ಪ್ರತಿಯೊಬ್ಬರ ಕೆಲಸವನ್ನೂ ಗುರ್ತಿಸಿದ್ದೀರಿ, ಚಿತ್ರದಲ್ಲಿ ನಾವೊಬ್ಬರೇ ಕಾಣಿಸಿಕೊಂಡಾಗ ಖುಷಿಯಾಗಲ್ಲ, ನಿಮ್ಮ ಅಭಿಪ್ರಾಯ ನೋಡಿ ತೃಪ್ತಿಯಾಯಿತು. ಯಾರನ್ನೂ ಹೊಗಳದೆ ಸಿನಿಮಾ ನೋಡಿ ಅನಿಸಿದ್ದನ್ನು ಹಾಗೇ ಬರೆದಿದ್ದೀರಿ, ತಮಿಳುನಾಡಲ್ಲೂ ನನ್ನ ಫ್ರೆಂಡ್ಸ್ ಇದ್ದಾರೆ, ಅವರೆಲ್ಲ ಕಾಲ್ ಮಾಡಿ ಇಲ್ಲಿಯೂ ಸಿನಿಮಾ ಬರುತ್ತಾ ಅಂತ ಕೇಳ್ತಿದ್ದಾರೆ. ನಮ್ಮ ನಿಮ್ಮೆಲ್ಲರ ಕೆಲಸ ಆಗಿದೆ. ಇನ್ನೂ ಹೆಚ್ಚು
ಜನ ನೋಡಿ ಹರಸಬೇಕು. ಸಿನಿಮಾ ನೋಡುತ್ತಿರುವ ಎಲ್ಲಾ ಪ್ರೇಕ್ಷಕರಿಗೆ ನನ್ನ ಕೋಟಿ ನಮನಗಳು ಎಂದರು.
ನಿರ್ದೇಶಕ ನರೇಂದ್ರ ಬಾಬು ಮಾತನಾಡಿ ಒಂದೊಳ್ಳೆ ಪ್ರಯತ್ನವನ್ನು ನೀವೆಲ್ಲ ಜನರಿಗೆ ತಲುಪಿಸಿದ್ದೀರಿ, ಹೃದಯಪೂರ್ವಕ ಧನ್ಯವಾದಗಳು, ಟೆಕ್ನೀಷಿಯನ್ ಗಳ ಕೆಲಸ ಗುರ್ತಿಸಿದ್ದು ನನಗೆ ಹೆಮ್ಮೆಯೆನಿಸಿತು. ಶೃತಿ ಮೇಡಂ ಪಾತ್ರ ಸಿನಿಮಾನ ಒಂದು ಪೀಕ್ ನಲ್ಲಿ ತೆಗೆದುಕೊಂಡು ಹೋಗುತ್ತೆ ಎಂದರು.
‘ಚಿತ್ರದ ಬಗ್ಗೆ ಒಳ್ಳೆ ರಿವ್ಯೂಸ್ ಬಂದಿದೆ. 25 ವರ್ಷಗಳ ನಂತರ ರಾಘಣ್ಣ ಜೊತೆ ಆ್ಯಕ್ಟ್ ಮಾಡಿದ್ದು, ಅದನ್ನು ಜನ ಮೆಚ್ಚಿರುವುದು ನಿಜಕ್ಕೂ ಖುಷಿಯಾಗಿದೆ. ನಾನೇನಾದರೂ ಚೆನ್ನಾಗಿ ಪರ್ ಫಾರ್ಮ್ ಮಾಡಿದ್ದೇನೆಂದರೆ ಅದರ ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು, ರಾಘಣ್ಣ ಕೂಡ ತುಂಬಾ ಕೋ ಆಪರೇಟ್ ಮಾಡಿದರು’ ಎಂದು ಶೃತಿ ದೂರದ ಮಲೇಶಿಯಾದಿಂದಲೇ ವಾಯ್ಸ್ ಮೂಲಕ ಮಾತಾಡಿದ್ದಾರೆ.
ನಿರ್ಮಾಪಕ ಮಂಜುನಾಥ್ ಗೌಡ ಮಾತನಾಡಿ, ನಮ್ಮ ಚಿತ್ರವನ್ನು ತುಂಬಾ ಚೆನ್ನಾಗಿ ಜನರಿಗೆ ತಲುಪಿಸಿದ್ದೀರಿ, ರಿವ್ಯೂಸ್ ನೋಡಿ ಹೆಚ್ಚು ಹೆಚ್ಚು ಜನ ಥೇಟರಿಗೆ ಬರುತ್ತಿದ್ದಾರೆ. ಹಬ್ಬ ಇದ್ದರೂ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಬರುತ್ತಿದೆ. ಮುಂದಿನ ವಾರದಿಂದ 30 ಥೇಟರ್ ಗಳನ್ನು ಹೆಚ್ಚಿಸುತ್ತಿದ್ದೇವೆ. ಚಿತ್ರ ನೋಡಿದವರೆಲ್ಲ ಇಬ್ಬರಿಗಾದರೂ ಹೇಳುತ್ತಿದ್ದಾರೆ. ಹೀಗೆ ಒಬ್ಬರಿಂದ ಮತ್ತೆರಡು ಫ್ಯಾಮಿಲಿ ಸಿನಿಮಾಗೆ ಬರುತ್ತಿದ್ದಾರೆ ಎಂದು ಹೇಳಿದರು.
ಪ್ರಮೋದ್ ಶೆಟ್ಟಿ ಮಾತನಾಡಿ ಸ್ವಲ್ಪ ತೊಂದರೆ ಆದರೂ ನಿರ್ಮಾಪಕರು ಚಿತ್ರವನ್ನು ಎತ್ತಿ ಹಿಡಿಯಬೇಕು ಅಂತಿದ್ದರು. ಆದರೆ ಜನರೇ ಸಿನಿಮಾನ ಎತ್ತಿ ಹಿಡಿದಿದ್ದಾರೆ. ಕುಂದಾಪುರದಲ್ಲಿ ಹಬ್ಬದ ದಿನವೂ 70-80 % ಕಲೆಕ್ಷನ್ ಆಗಿದೆ. ರಾಘಣ್ಣ ಶೃತಿ ಅವರ ಪಾತ್ರಗಳನ್ನು ನೋಡಲೆಂದೇ ಜನ ಬರ್ತಿದ್ದಾರೆ. ಸುಮಾರು ಚಿತ್ರಗಳಲ್ಲಿ ಪೋಲಿಸ್ ಪಾತ್ರಗಳನ್ನು ಮಾಡಿದ್ದರೂ ಈ ಚಿತ್ರದಲ್ಲಿ ವಿಶೇಷವಾಗಿ ಗುರ್ತಿಸ್ತಿದಾರೆ ಎಂದರು. ’13’ ಕೋಟಿ ಹವಾಲ ಹಣದ ಸುತ್ತ ನಡೆಯುವ ಕುತೂಹಲಕರ ಕಥೆ ಈ ಚಿತ್ರದಲ್ಲಿದ್ದು, ಅದರ ಸುತ್ತ ಚಿತ್ರದ ಎಲ್ಲಾ ಪಾತ್ರಗಳು ಯಾವರೀತಿ ಕನೆಕ್ಟ್ ಆಗುತ್ತ ಹೋಗುತ್ತವೆ, ಕೊನೆಗೆ ಆ ಹಣ ಏನಾಯ್ತು ಅನ್ನೋದೇ ಈ ಚಿತ್ರದ ಕಥೆ.
ಶೋಗನ್ಬಾಬು ಅವರ ಸಂಗೀತ, ಅಜಯ್ ಮಂಜು ಅವರ ಕ್ಯಾಮೆರಾ ವರ್ಕ್, ಗಿರೀಶ್ ಕುಮಾರ್ ಅವರ ಸಂಕಲನ, ಮದನ್ ಹರಿಣಿ, ಸಶಿಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಜಯಸಿಂಹ ಸಂಭಾಷಣೆಯನ್ನು ಬರೆದಿದ್ದಾರೆ.