ಕೊಡಗಿನ ವಿರಾಜಪೇಟೆಯ ಅಮ್ಮಾತಿ ಕೊಡವ ಸಮಾಜದಲ್ಲಿ ಆಗಸ್ಟ್ 24ರಂದು ನಟಿ ಹರ್ಷಿಕಾ ಹಾಗು ನಟ ಭುವನ್ ಅವರ ನಡೆದ ವಿವಾಹ ವಿಜೃಂಭಣೆಯಿಂದ ನೆರವೇರಿತು. ಎರಡು ದಿನಗಳ ಕಾಲ ನಡೆದ ಕೊಡವ ಶೈಲಿಯ ಅದ್ದೂರಿ ವಿವಾಹಕ್ಕೆ ಅನೇಕ ಸಿನಿಮಾ ತಾರೆಯರು ಸಾಕ್ಷಿಯಾದರು. ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆಯಿತು. ಊರು ಕೂಡವ ಶಾಸ್ತ್ರದ ದಿನವೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯಧಾರಣೆ ಆಯಿತು.
ನಂತರ ವಧು ಮತ್ತು ವರ ಇಬ್ಬರೂ ಪರಸ್ಪರ ನೋಡುವ ಆಗಿಲ್ಲ. ಎರಡನೇ ದಿನ ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನೆರವೇರಿತು.
ಬೆಳಗ್ಗೆ ಬಳೆ ಶಾಸ್ತ್ರನಂತರ ಪೊಂಬಣ ಪೂಜೆ, ಅಂದರೆ ವರ ಪೂಜೆ ರೀತಿಯ ಪೂಜೆ.ಹುಡುಗ ಮಂಟಪಕ್ಕೆ ಬಂದು ಬಾಳೆ ಕಟ್ ಮಾಡಲು ಹೊರಟು ಬಾಳೆ ಕಡೆದು ಬರುವ ಪದ್ಧತಿ ನಡೆಯಿತು. ಆಗ ಅವನನ್ನ ಹುಡುಗಿ ಮನೆಯವರು ಕರೆದುಕೊಂಡು ಹೋಗುವುದು ವಾಡಿಕೆ. ಅದೂ ಕೂಡ ವಿಶೇಷವಾಗಿ ನೆರವೇರಿತು.
ನಂತರ ಬಂದ ಹುಡುಗನಿಗೆ ಹುಡುಗಿ ಅಮ್ಮ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸುವ ಶಾಸ್ತ್ರ ನಡೆಯಿತು.
ಅದಾದ ಮೇಲೆ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತಕ್ಕೆ ಅಣಿಯಾಗುತ್ತಾರೆ.
ಮದುವೆಗೆ ಬಂದ ಅತಿಥಿಗಳೆಲ್ಲ ಹುಡುಗ ಹುಡುಗಿಗೆ ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡುತ್ತಾರೆ.
ಕೊನೆಯಲ್ಲಿ ಹುಡುಗ ಹುಡುಗಿ ಕೈ ಹಿಡಿದು ಎದ್ದು ನಿಲ್ಲುತ್ತಾರೆ.
ಬಗೆ ಬಗೆಯ ಭೋಜನ
ಕೊಡವ ಜೋಡಿಯ ಮದ್ವೆಯಲ್ಲಿ ಬಗೆ ಬಗೆಯ ಭೋಜನ ಸಿದ್ಧವಾಗಿತ್ತು.
ನಾನ್ ವೆಜ್, ವೆಜ್ ಎರಡು ಶೈಲಿಯ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು. ಕೊಡವ ಶೈಲಿಯ , ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರ್ಯಾನಿ, ಮಟನ್ ಪ್ರೈ, ಚಿಕನ್ ಪ್ರೈ ಇತ್ಯಾದಿ ರೆಡಿಯಾಗಿತ್ತು.
ವೆಜ್ ಪ್ರಿಯರಿಗೆ ವೆಜಿಟೇಬಲ್ ಪಲಾವ್ , ಅಲಸಂದೆ ಪಲ್ಯ,ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು ,ವೆಜ್ ಕುರ್ಮಾ ಇತ್ಯಾದಿ ಖಾದ್ಯ ತಯಾರಾಗಿತ್ತು.