ಚೆನ್ನೈ ಮೂಲದ ವೇಲ್ಸ್ ಗ್ರೂಪ್ ನ ಅಂಗಸಂಸ್ಥೆಯಾದ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ಇಡೀ ಕುಟುಂಬಕ್ಕೆ ಭರಪೂರ ಮನರಂಜನೆ ನೀಡುವ ಉದ್ದೇಶದಿಂದ ಬಿಡದಿ ಬಳಿ ಜಾಲಿವುಡ್ – ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಎಂಬ ಥೀಮ್ ಪಾರ್ಕ್ ಶುರು ಮಾಡಿದೆ.
ಈ ಥೀಮ್ ಪಾರ್ಕ್ ಇದೇ ಆಗಸ್ಟ್ 20ರಂದು ಅದ್ಧೂರಿಯಾಗಿ ಲೋಕಾರ್ಪಣೆ ಆಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೂ ವೇಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಡಾ. ಇಶಾರಿ ಕೆ ಗಣೇಶ್, ಸಂಸ್ಥೆಯ ನಿರ್ದೇಶಕರಾದ ಡಾ. ಪ್ರೀತಾ ಗಣೇಶ್ ಮತ್ತು ಕುಶ್ಮಿತಾ ಗಣೇಶ್ ಸ್ವಾಗತ ಕೋರಿದ್ದಾರೆ.
ಏನಿದು ಜಾಲಿವುಡ್?
ಬೆಂಗಳೂರು ಮತ್ತು ಮೈಸೂರು ನಡುವೆ ಬಿಡದಿ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮತ್ತು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಯಿಂದ 10 ನಿಮಿಷ ದೂರದಲ್ಲಿರುವ ಈ ಜಾಲಿವುಡ್ ಎಲ್ಲಾ ವಯಸ್ಸಿನವರಿಗೂ ಒಂದು ಅದ್ಭುತ ತಾಣ. ಸಿನಿಮಾ ಮತ್ತು ಸಾಹಸ ಮಿಳಿತವಾಗಿರುವ ಈ ಥೀಮ್ ಪಾರ್ಕ್ ನಲ್ಲಿ ಚಿತ್ರಗಳಲ್ಲಿ ಬಳಸಲಾಗುವ ಕೆಲವು ಸೆಟ್ ಗಳು, ಬಾಲಿವುಡ್ ನಡೆದು ಬಂದ ಹಾದಿ, ನಿಮ್ಮ ಮೆಚ್ಚಿನ ದೃಶ್ಯಗಳನ್ನು ನೋಡಬಹುದಾಗಿದೆ. ಹಾಡು-ನೃತ್ಯ ಕಾರ್ಯಕ್ರಮಗಳು, ಲೈವ್ ಪ್ರದರ್ಶನಗಳು ಸಹ ಇರಲಿವೆ. ಇದರ ಜೊತೆಗೆ ಇಡೀ ಕುಟುಂಬದವರು ಆಡಿ ಖುಷಿಪಡಬಹುದಾದ ಹಲವು ಸಾಹಸ ಕ್ರೀಡೆಗಳಿವೆ.
ಜಾಲಿವುಡ್ ನ ಹೈಲೈಟ್ ಎಂದರೆ ಜಾಲಿ ಐಲ್ಯಾಂಡ್ ಎಂಬ ವಾಟರ್ ಪಾರ್ಕ್. ಈ ಥೀಮ್ ಪಾರ್ಕ್ನ ಹೃದಯಭಾಗದಲ್ಲಿರುವ ಜಾಲಿ ಐಲ್ಯಾಂಡ್ ನಲ್ಲಿ ಸಮುದ್ರದ ಅಲೆಗಳನ್ನು ನೆನಪಿಸುವ ವೇವ್ ಪೂಲ್ ಇದೆ. ಕುಟುಂಬದ ಎಲ್ಲಾ ಸದಸ್ಯರ ಮನರಂಜನೆಗಾಗಿ ಹಲವು ವಾಟರ್ ಸ್ಲೈಡ್ ಗಳು, ಸ್ಪ್ಲಾಶ್ ಜೋನ್ ಗಳು ಮತ್ತು ಆಟ ಆಡಿ ಸುಸ್ತಾದಾಗ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳು ಸಹ ಇವೆ.
ಸಿನಿಮಾ, ಮನರಂಜನೆ ಮತ್ತು ಸಾಹಸವಲ್ಲದೆ ನಿಮಗಿಷ್ಟವಾದ ಮತ್ತು ಸ್ವಾಧಿಷ್ಟವಾದ ಉತ್ತರ ಭಾರತ, ದಕ್ಷಿಣ ಭಾರತ, ಚೈನೀಸ್, ಕಾಂಟಿನೆಂಟಲ್ ಮುಂತಾದ ತಿಂಡಿ-ತಿನಿಸುಗಳನ್ನು ಉಣಬಡಿಸುವ ರೆಸ್ಟೋರೆಂಟ್ ಗಳು ನಿಮ್ಮ ಹೊಟ್ಟೆ ತುಂಬಿಸುವುದಕ್ಕೆ ಸದಾ ಸಿದ್ದವಾಗಿರುತ್ತವೆ.
ಈ ಥೀಮ್ ಪಾರ್ಕ್ ನ ಪ್ರವೇಶ ದರ, ಮಾರ್ಗ ಮುಂತಾದ ಹಲವು ವಿಷಯಗಳಿಗೆ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಆದ www.jollywood.co.in ಲಾಗಿನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.