ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸೊಂಟ ಬಳುಕಿಸಿದ `ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?’ ಹಾಡು ಸಂಕಷ್ಟಕ್ಕೆ ಸಿಲುಕಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸಿ, ಯೂಟ್ಯೂಬ್ ಲೋಕದಲ್ಲಿ ಹಾಡು ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಪುರುಷರ ಸಂಘದ ಸದಸ್ಯರುಗಳು ಸ್ಟೇಷನ್ ಮೆಟ್ಟಿಲೇರಿ ಕಂಪ್ಲೆಂಟ್ ದಾಖಲಿಸಿದ್ದಾರೆ. ಮಾತ್ರವಲ್ಲ ಸಾಂಗ್ ಬ್ಯಾನ್ ಮಾಡುವಂತೆ ಆಂಧ್ರ ಪ್ರದೇಶದ ಕೋರ್ಟ್ ಮೊರೆ ಹೋಗಿರುವುದಾಗಿ ಸುದ್ದಿಯಾಗಿದೆ.
ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?'
ಪುಷ್ಪ’ ಚಿತ್ರದ ಐಟಂ ಹಾಡು. ಪುಷ್ಪ' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿದೆ. ಅದರಂತೇ,
ಪುಷ್ಪ’ ಸ್ಪೆಷಲ್ ಸಾಂಗ್ನ ಏಕಕಾಲಕ್ಕೆ ಬಿಡುಗಡೆ ಮಾಡಿದ್ದು, ಕನ್ನಡದಲ್ಲೂ ಕೂಡ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ.
“ಉದ್ದ ಉದ್ದ ಇದ್ದರೆ ಒಬ್ಬ ಹಾರಿ ಹಾರಿ ಬರುತ್ತಾನೆ. ಗಿಡ್ಡ ಗಿಡ್ಡ ಇದ್ದರೆ ಒಬ್ಬ ಜಾರಿ ಜಾರಿ ಬೀಳ್ತಾನೆ… ಉದ್ದ ಅಲ್ಲ, ಗಿಡ್ಡ ಅಲ್ಲ ನಿಮ್ಮ ಸತ್ಯ ಹೇಳಲೇನು, ಸಿಕ್ಕಿದ್ದೆಲ್ಲ ಸೀರುಂಡೇನೇ ನಿಮ್ಮ ಬುದ್ದಿ ಇಲ್ಲ ಶುದ್ದಿ…. ಹ್ಞೂಂ ಅಂತೀಯಾ ಮಾವ? ಹ್ಞೂಂ ಅಂತೀಯಾ ಮಾವ?..” ಈ ರೀತಿಯಾದ ಸಾಲುಗಳು ಕನ್ನಡ ವರ್ಷನ್ನಲ್ಲಿವೆ. ಅದೇ ರೀತಿ ತೆಲುಗು-ತಮಿಳು ವರ್ಷನ್ನಲ್ಲಿ ಕ್ಯಾಚಿ ಲಿರಿಕ್ಸ್ ಪೋಣಿಸಿ `ಹ್ಞೂಂ ಅಂಟಾವ ಮಾವ? ಹ್ಞೂಂ ಅಂಟಾವ ಮಾವ?’ ಸಾಂಗ್ ರಚನೆ ಮಾಡಲಾಗಿದೆ.
ಪುಷ್ಪ' ಚಿತ್ರದ ಐಟಂ ಹಾಡಿನಲ್ಲಿ
ಗಂಡುಮಕ್ಕಳು ಕಾಮಭರಿತರು’ ಎನ್ನುವಂತೆ ಬಿಂಬಿಸಲಾಗಿದೆ. ಈ ಕಾರಣವನ್ನು ನೀಡಿರುವ ಪುರುಷರ ಸಂಘದ ಸದಸ್ಯರುಗಳು ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರಂತೆ. `ಪುಷ್ಪ’ ಚಿತ್ರದಿಂದ ಸಾಂಗ್ ಬ್ಯಾನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರಂತೆ. ಈಗೊಂದು ಸುದ್ದಿ ಭರ್ಜರಿಯಾಗಿ ಸದ್ದುಮಾಡ್ತಿದೆ.
ಈ ಬ್ರೇಕಿಂಗ್ ನ್ಯೂಸ್ನಿಂದ ಪಡ್ಡೆಹುಡುಗರಿಗೆ ಹಾಗೂ ಅಲ್ಲು ಅರ್ಜುನ್-ಸಮಂತಾ ಅಭಿಮಾನಿಗಳು ಬೇಸರಗೊಂಡರ್ತಾರೆ. ನಶೆಯೇರಿಸೋ ಸಾಂಗ್ನ ಥಿಯೇಟರ್ನಲ್ಲಿ ಕುಳಿತು ಫೀಲ್ ಮಾಡೋದಕ್ಕೆ ಆಗಲ್ಲ ಎನ್ನುವ ಕಾರಣಕ್ಕೆ ನಿರಾಶೆಗೊಂಡಿರುತ್ತಾರೆ. ಸದ್ಯಕ್ಕೆ, ಕೋರ್ಟ್ ಮೆಟ್ಟಿಲೇರಿರುವ ಸುದ್ದಿ ಫ್ಯಾನ್ಸ್ಗೆ ಸಿಹಿಸುದ್ದಿ ಕೊಡುತ್ತಾ ಅಥವಾ ಕಹಿಸುದ್ದಿ ನೀಡುತ್ತಾ ಗೊತ್ತಿಲ್ಲ?ಡಿಸೆಂಬರ್ 17 ರಂದು ಪುಷ್ಪ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ