ಪುನೀತ್ ರಾಜಕುಮಾರ್ ಅವರು ಪ್ರೀತಿಯಿಂದಲೇ ನಿರ್ಮಾಣ ಮಾಡಿದ “ಗಂಧದ ಗುಡಿ” ಎಂಬ ವಿಶೇಷ ಡಾಕ್ಯುಮೆಂಟರಿ ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಟೈಟಲ್ ಟೀಸರ್ ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ನಟ,ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೂಡ ಟೀಸರ್ ನೋಡಿ ಪ್ರತಿಕ್ರಿಯಿಸಿದ್ದು ಹೀಗೆ.
“ಅಪ್ಪು ಮಾಡಿರುವ ಗಂಧದ ಗುಡಿ ಟೀಸರ್ ತುಂಬಾನೇ ಚೆನ್ನಾಗಿದೆ. ಒಂದು ಡಿಫರೆಂಟ್ ಫಾರ್ಮೆಟ್ನಲ್ಲಿದೆ. ಕಾಡಿನ ಅಮೂಲ್ಯತೆ ಬಗ್ಗೆ ಡಾಕ್ಯುಮೆಂಟರಿ ಇದೆ. ಈಗಿನ ಕಾಲಕ್ಕೆ ತುಂಬ ಸೂಕ್ತ ಎನಿಸುತ್ತೆ. ಕಾಡು ಸೇವ್ ಮಾಡಬೇಕೆಂಬ ವಿಷಯ ಅದರದ್ದು. ಅಪ್ಪು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲಿ. ಸ್ಟಾರ್ಡಮ್ ಬಿಟ್ಟು ಬೇರೆ ರೀತಿ ತೊಡಗಿಸಿಕೊಳ್ಳುವುದಿದೆಯಲ್ಲ ಅದೊಂದು ವಿಶೇಷ. ಈ ಕುರಿತಂತೆ ಹಿಂದೆಯೇ, ಗಂಧದ ಗುಡಿ ಕುರಿತು ನನ್ನ ಬಳಿ ಅಪ್ಪು ಹೇಳಿದ್ದರು. ನಾನೂ ಕೂಡ ಅದನ್ನ ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ.
ಅಲ್ಲಿ ಕಾಡಿನ ರಕ್ಷಣೆ ಬಗ್ಗೆ ಹೇಳಲಾಗಿದೆ. ಒಂದೊಳ್ಳೆಯ ಜಾಗೃತಿ ಮೂಡಿಸುವ ಸಿನಿಮಾ ಅದು. ಕರ್ನಾಟಕ ಅರಣ್ಯ ಕುರಿತಂತೆ ಅಪ್ಪು ಮಾಡಿರುವುದು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಕೂಡ ಎಂ.ಪಿ.ಶಂಕರ್, ಕೂಡ ಕಾಡಿನ ಕುರಿತಂತೆ ಸಿನಿಮಾ ಮಾಡಿದ್ದರು. ಪ್ರಭಾಕರ್ ಅವರು ಸಹ ಕಾಡಿನರಾಜ ಸಿನಿಮಾ ಮಾಡಿದ್ದರು. ನಾನು ಸಿನಿಮಾ ನೋಡೋಕೆ ಕಾಯುತ್ತಿದ್ದೇನೆʼ ಎಂದಿದ್ದಾರೆ. ಪಿಆರ್ಕೆ ಮೂಲಕ ೨೦೨೨ರಲ್ಲಿ ಥಿಯೇಟರ್ನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.