ಸ್ಟಾರ್ ನಿರ್ದೇಶಕ ಅಂದ್ರೆ ಇದು. ‘ ಬಾಹು ಬಲಿ’ ಖ್ಯಾತಿಯ ರಾಜಮೌಳಿ ಅವರ ರೇಂಜ್ ಹೆಂಗೈತಿ ಅಂತ ಕೇಳಿದ್ರೆ ನೀವು ದಂಗಾಗಿ ಹೋಗ್ತಿರಾ. ಯಾಕಂದ್ರೆ ನಾವೆಲ್ಲ ಸ್ಟಾರ್ ನಟರ ಹೈ ಪೈ ನೋಡಿದವರಷ್ಟೇ. ಬದಲಿಗೆ ಸ್ಟಾರ್ ನಿರ್ದೇಶಕರ ಹೈ ಪೈ ರೇಂಜ್ ನೋಡಿಲ್ಲ. ಅಷ್ಟೇ ಯಾಕೆ, ಕನ್ನಡದಲ್ಲಿ ನೂರಿನ್ನೂರು ಕೋಟಿ ಸಿನಿಮಾ ಮಾಡಿದ ನಿರ್ದೇಶಕರು ಕೂಡ ಯಾರು ಇಲ್ಲ. ಆದರೆ ನಿರ್ದೇಶಕ ರಾಜ ಮೌಳಿ ಹಾಗಲ್ಲ, ಇವತ್ತು ಅವರ ಸಿನಿಮಾಗಳ ಬಡ್ಜೆಟ್ ಏನೇ ಆದ್ರು 200 ಕೋಟಿ ಮೇಲೆಯೇ.
ಸದ್ಯಕ್ಕೆ ಭಾರೀ ನಿರೀಕ್ಷೆಯೊಂದಿಗೆ ಸಖತ್ ಸೌಂಡ್ ಮಾಡುತ್ತಿರುವ ಆರ್ ಆರ್ ಆರ್ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ರಾಜಮೌಳಿ , ಶುಕ್ರವಾರ ಬೆಂಗಳೂರಿಗೆ ಸ್ಪೆಷಲ್ ವಿಮಾನದಲ್ಲಿ ಬಂದಿದ್ದರು ಅಂದ್ರೆ ಅವರ ರೇಂಜ್ ಏನು ಅಂತ ನೀವೇ ಊಹಿಸಿಕೊಳ್ಳಿ. ನಟರು ಬಿಡಿ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಮೀರ್ ಖಾನ್, ರಜನೀಕಾಂತ್, ಮುಮ್ಮುಟ್ಟಿ, ಮೊಹನ್ ಲಾಲ್, ಚಿರಂಜೀವಿ ಕುಟುಂಬವೂ ಸೇರಿದಂತೆ ಅನೇಕರು ತಮಗಿರುವ ಸ್ಟಾರ್ ವಾಲ್ಯೂ ಆಧರಿಸಿ ವಿಶೇಷ ವಿಮಾನಗಳಲ್ಲಿ ಯೇ ಓಡಾಡುವುದೇನು ವಿಶೇಷ ಅಲ್ಲ, ಆದರೆ ಒಬ್ಬ ನಿರ್ದೇಶಕ ನಾಗಿ ರಾಜಮೌಳಿ ಸ್ಪೆಷಲ್ ಪ್ಲೈಟ್ ನಲ್ಲಿ ಓಡಾಡುವ ಮೂಲಕ ನಿರ್ದೇಶಕನ ಹುದ್ದೆಗೂ ಒಂದು ಸ್ಟಾರ್ ವ್ಯಾಲೂ ತಂದು ಕೊಟ್ಟಿದ್ದಾರೆಂದರೆ ನಿರ್ದೇಶಕ ರ ಬಳಗ ಹೆಮ್ಮೆ ಪಡಬೇಕು.
ಹಳೇ ಏರ್ ಪೋರ್ಟ್ ಬಳಿ ರಾಜಮೌಳಿ ಜೊತೆ ಸುಪ್ರೀತ್
ಅಂತಹದೊಂದು ಘಟನೆಗೆ ಶುಕ್ರವಾರ ಬೆಂಗಳೂರಿನಲ್ಲಿ ಜರುಗಿದ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಕಾರ್ಯಕ್ರಮ ಸಾಕ್ಷಿಯಾಯಿತು.
ಬಾಹುಬಲಿ ಸರಣಿಯ ನಂತರ ರಾಜ ಮೌಳಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಆರ್ ಅರ್ ಆರ್. ತೆಲುಗು , ಹಿಂದಿ, ಕನ್ನಡ , ತಮಿಳು ಸೇರಿದಂತೆ ಭಾರತದ ಅಷ್ಟು ಭಾಷೆ ಹಾಗೆಯೇ ಜಗತ್ತಿನ ಇತರ ಭಾಷೆಗಳಿಗೂ ಡಬ್ ಆಗಿ ಬರುತ್ತಿದೆ ಈ ಚಿತ್ರ. ಸದ್ಯಕ್ಕೆ ಕನ್ನಡದ ಅದರ ಅವತರಣಿಕೆಯ ಹಕ್ಕುಗಳನ್ನು ಕೆವಿಎನ್ ಸಂಸ್ಥೆ ಪಡೆದುಕೊಂಡಿದೆ.
ಶುಕ್ರವಾರ ಅದೇ ಸಂಸ್ಥೆ ಆರ್ ಆರ್ ಆರ್ ಚಿತ್ರದ ಥೀಮ್ ಸಾಂಗ್ ಜನನಿ ವಿಡಿಯೋ ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಅಂದು ಚೆನ್ನೈ ನಲ್ಲೂ ಇದೇ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಮೌಳಿ, ಅಲ್ಲಿಂದ ಪತ್ನಿ ಸಮೇತ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಬೆಂಜ್ ಕಾರಿನಲ್ಲಿ ಒರಾಯನ್ ಮಾಲ್ ಗೆ ಬಂದಿದ್ದರು. ಇದು ಬಾಹುಬಲಿ ಚಿತ್ರದ ನಂತರ ಬದಲಾದ ರಾಜಮೌಳಿ ಅವರ ಕಾಸ್ಟ್ಲಿ ಬದುಕಿನ ಒಂದು ಕಥೆ.