ಕಿರಣ್ ಅಲಿಯಾಸ್ ಶಿವಕುಮಾರ್ ಬದುಕಲ್ಲಿ ಇದು ಸಂಭ್ರಮದ ದೀಪಾವಳಿ; ನಿರ್ದೇಶಕನಾಗುವ ಅವರ ಸಾಹಸದಲ್ಲಿ ಹಬ್ಬಕ್ಕೆ ಸಿಡೀತು ‘1000 ವಾಲಾ’ ಪಟಾಕಿ !

ದೇಶಾದ್ರಿ ಹೊಸ್ಮನೆ

ಸಿನಿಮಾವೇ ಬದುಕು ಎನ್ನುವ ಗೆಳೆಯ ಹಾಗೂ ಒಡನಾಡಿ ಕಿರಣ್ ಅಲಿಯಾಸ್ ಶಿವಕುಮಾರ್ ಅವರ ಬದುಕಲ್ಲಿ ಇದು ನಿಜವಾದ ದೀಪಾವಳಿ. ಯಾಕಂದ್ರೆ ಚಿತ್ರ ನಿರ್ದೇಶಕನಾಗಬೇಕೆನ್ನುವ ಅವರ ಬಹು ದಿನದ ಕನಸು ಈಗ ಈಡೇರುತ್ತಿದೆ. ಗೆಳೆಯರಾದ ಅಶೋಕ್ ಅವರ ಬೆಂಬಲದ ಮೂಲಕ ಶಿವಕುಮಾರ್ ಅವರ ಬಹು ದಿನದ ಕನಸು ನನಸಾಗುತ್ತಿದೆ. ಆ ಮೂಲಕ ಈ ವರ್ಷದ ದೀಪಾವಳಿ ಹಬ್ಬ ಅವರ ಬದುಕಿನಲ್ಲೂ ಹೊಸ ಬೆಳಕು ಮೂಡಿಸಿದೆ. ಆ ಪ್ರಯತ್ನದ ಫಲವಾಗಿ ದೀಪಾವಳಿ ಹಬ್ಬಕ್ಕೆ ಶಿವಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಆಗಿದೆ.


‘1000 ವಾಲಾ ‘ ಎನ್ನುವುದು ಆ ಚಿತ್ರದ ಶೀರ್ಷಿಕೆ. ‘ದಿ ಸೌಂಡ್ ಆಫ್ ಮಾಸ್’ ಎನ್ನುವುದು ಇದರ ಟ್ಯಾಗ್ ಲೈನ್. ಟೈಟಲ್ ಹಾಗೂ ಅದರ ಟ್ಯಾಗ್ ಲೈನ್ ತುಂಬಾ ಆಕರ್ಷಕವಾಗಿವೆ. ಹಾಗೆಯೇ ಕೈ ಗೆ ಪಟಾಕಿ ಸುತ್ತಿಕೊಂಡಿರುವ ಪೋಸ್ಟರ್ ಫಸ್ಟ್ ಲುಕ್ ಕೂಡ ಕುತೂಹಲಕಾರಿಯಾಗಿದೆ. ಇನ್ನು ‘ ತೌಜಂಡ್ ವಾಲಾ’ ಅಂದ್ರೇನು ಅನ್ನೋದು ಎಲ್ಲರಿಗೂ ಗೊತ್ತು. ಇದೊಂದು ಪಟಾಕಿ ಹೆಸರು. ಇದು ಸಿಕ್ಕಾಪಟ್ಟೆ ಸದ್ದು ಮಾಡುವ ಪವರ್ ಫುಲ್ ಪಟಾಕಿ. ಅದನ್ನೇ ಚಿತ್ರದ ಟೈಟಲ್ ಆಗಿಸಿಕೊಂಡಿರುವ ಯುವ ನಿರ್ದೇಶಕ ಶಿವಕುಮಾರ್ ಕನ್ಮಡಕ್ಕೊಂಡು ಪವರ್ ಫುಲ್ ಕಂಟೆಂಟ್ ನ ಸಿನಿಮಾ ಕೊಡುವ ಉತ್ಸಾಹದಲ್ಲಿದ್ದಾರೆ. ಅಂದ ಹಾಗೆ, ಈ ಸಿನಿಮಾ ಕೆಲಸ ಈಗಷ್ಟೇ ಶುರುವಾಗಿದೆ. ಕೆಲಸದ ಮೊದಲ ಸೌಂಡ್ ಗೆ ಅಂತ ದೀಪಾವಳಿ ಹಬ್ಬಕ್ಕೆ ಟೈಟಲ್ ಲಾಂಚ್ ಮಾಡಿರುವ ನಿರ್ದೇಶಕ ಶಿವಕುಮಾರ್, ಶೀಘ್ರವೇ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೊರಡುವ ತಯಾರಿಯಲ್ಲಿದ್ದಾರೆ.


ಇನ್ನು, ಈ ಚಿತ್ರಕ್ಕೆ ನಾಯಕ, ನಾಯಕಿ ಸೇರಿದಂತೆ ಕಲಾವಿದರು‌ ಹಾಗೂ‌ ತಂತ್ರಜ್ಞರು ಫೈನಲ್ ಆಗಿಲ್ಲ. ನಿರ್ದೇಶಕ ಶಿವಕುಮಾರ್ ಹೇಳುವ ಪ್ರಕಾರ ಅದಕ್ಕೊಂದಷ್ಟು ಸಮಯ‌ಬೇಕಿದೆ. ಆದರೂ‌ ಈಗ ನಾಯಕರ ಹುಡುಕಾಟ‌ ನಡೆದಿದೆಯಂತೆ. ಕಥೆಗೆ ಸೂಕ್ತ ಎನಿಸುವುದರ ಜತೆಗೆ ಜನರಿಗೂ‌ ಪರಿಚಯ ಇರುವ ನಟರನ್ನೇ ಚಿತ್ರದ ನಾಯಕರನ್ನಾಗಿ ಆಯ್ಕೆ‌ ಮಾಡಿಕೊಳ್ಳಬೇಕೆನ್ನುವ ಇಚ್ವಾಸಕ್ತಿ ಹೊಂದಿದ್ದೇನೆ. ಆ‌‌ ನಿಟ್ಟಿನಲ್ಲಿ ‌ಒಂದಿಬ್ಬರು‌ ನಾಯಕರನ್ನು ಭೇಟಿ ಮಾಡಿ‌ ಮಾತುಕತೆ ನಡೆಸಿದ್ದೇನೆ. ಆದರೆ ಅದ್ಯಾರು ಕೂಡ ಫೈನಲ್ ಆಗಿಲ್ಲ.‌ಇಷ್ಟರಲ್ಲಿಯೇ ಒಂದು ನಿರ್ಧಾರಕ್ಕೆ ಬಂದ ನಂತರ ಉಳಿದ ಕಲಾವಿದರ ಆಯ್ಕೆಯ ಕಡೆ ಗಮನ ಹರಿಲಾಗುವುದು ಎನ್ನುತ್ತಾರೆ ಯುವ ನಿರ್ದೇಶಕ ಶಿವಕುಮಾರ್.
ಹಾಗೆನೆ, ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರವಾದರೂ, ಸಿನಿಮಾ‌ ಪಯಣ ಸಾಕಷ್ಟು ವರ್ಷಗಳದ್ದು.‌‌ ಕನ್ನಡ ಹಾಗೂ ತಮಿಳು ಭಾಷೆಯ ಚಿತ್ರಗಳಿಗೆ ಸಹಾಯಕ‌ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಶಿವಕುಮಾರ್ ಅವರಿಗೆ ಕನ್ನಡದ‌ ಮೂಲಕವೇ ನಿರ್ದೇಶಕರಾಗಿ ಗುರುತಿಸಿಕೊಳ್ಳುವ ಕನಸು ಹೊತ್ತಿದ್ದರಂತೆ.ಆ ಕನಸು ಈಗ ನನಸಾಗುತ್ತಿದೆ ಎನ್ನುವ ಸಂಭ್ರಮದಲ್ಲಿಯೇ ಹಬ್ಬಕ್ಕೆ 1000ವಾಲಾ ಪಟಾಕಿ ಸಿಡಿಸಿದ್ದಾರೆ. ಆಲ್ ದಿ ಬೆಸ್ಟ್ ಶಿವಕುಮಾರ್ ಅಂಡ್ ಟೀಮ್.

Related Posts

error: Content is protected !!