- ವಿಶಾಲಾಕ್ಷಿ
ಇಡೀ ಜಗತ್ತು ಕಣ್ಣರಳಿಸಿ ನೋಡುತ್ತಿರುವ ಸಿನಿಮಾಗಳಿಗೆ ಕೋಟಿ ಕೋಟಿ ಸುರಿದು ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಕೊಂಡುಕೊಂಡಿದೆ. ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ 7.6 ಕೋಟಿ ಕೊಟ್ಟು ಆಡಿಯೋ ರೈಟ್ಸ್ ಪಡೆದ ಲಹರಿ ಸಂಸ್ಥೆ, ಬರೋಬ್ಬರಿ 25 ಕೋಟಿ ಕೊಟ್ಟು ರಾಜಮೌಳಿಯ ಆರ್ ಆರ್ ಆರ್ ಚಿತ್ರದ ಹಾಡುಗಳ ಹಕ್ಕನ್ನು ತಮ್ಮ ಪಾಲಾಗಿಸಿಕೊಂಡಿತ್ತು. ಈ ಮೂಲಕ ಮ್ಯೂಸಿಕ್ ಲೋಕದಲ್ಲಿ ನಯಾ ಮೇನಿಯಾ ಸೃಷ್ಟಿಸಿಕೊಂಡಿತ್ತು. ಇದೀಗ ಅದ್ಧೂರಿ ಜೋಡಿಯ ಅಪ್ ಕಮ್ಮಿಂಗ್ ಸಿನಿಮಾದ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸಂಗೀತ ಲೋಕದಲ್ಲಿ ಹಾಗೂ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.
ಅದ್ಧೂರಿ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎ.ಪಿ. ಅರ್ಜುನ್ ಎರಡನೇ ಬಾರಿಗೆ ಜೊತೆಯಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಮತ್ತೆ ಸೇರಿರುವ ಈ ಡೆಡ್ಲಿ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಕನ್ನಡ ಹಿಡಿದಂತೆ ಲಹರಿ ಮ್ಯೂಸಿಕ್ ಸಂಸ್ಥೆ ಅದ್ಧೂರಿ ಜುಗಲ್ ಬಂಧಿಯ ಸಿನಿಮಾದ ಆಡಿಯೋ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಖರೀದಿಸಿದೆಯಂತೆ. ಮ್ಯೂಸಿಕ್ ಮಾಂತ್ರಿಕ ಆಕ್ಷನ್ ಪ್ರಿನ್ಸ್ ಚಿತ್ರಕ್ಕೆ ಹಾಡುಗಳನ್ನು ಹೊಸೆಯುವ ಮುನ್ನವೇ ಲಹರಿ ಸಂಸ್ಥೆ ಆಡಿಯೋ ರೈಟ್ಸ್ ನ ಮುಡಿಗೇರಿಸಿಕೊಂಡಿದೆ ಅಂದರೆ ಲೆಕ್ಕಹಾಕಿ ಅದ್ಧೂರಿ ಜೋಡಿಯ ಹವಾ ಹೆಂಗೈತೆ ಅಂತ ನೀವೆ ಲೆಕ್ಕ ಹಾಕಬೇಕು.
ಆಕ್ಷನ್ ಪ್ರಿನ್ಸ್ ಹಾಗೂ ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಮಾರ್ಟಿನ್ ಹೆಸರಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆಯಾದರೂ ಇನ್ನೂ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ. ಚಿತ್ರದ ನಟಿ ಸೇರಿದಂತೆ ತಾರಾಬಳಗದ ಆಯ್ಕೆಯಾಗಬೇಕಿದೆ. ಟಾಲಿವುಡ್ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಅದ್ದೂರಿ ಜೋಡಿಯ ಎರಡನೇ ಚಿತ್ರಕ್ಕೆ ಮ್ಯೂಸಿಕ್ ಬಾರಿಸಲಿದ್ದಾರಂತೆ. ಅಷ್ಟಕ್ಕೂ, ಆ ಸಂಗೀತ ಮಾಂತ್ರಿಕ ಯಾರು ಎನ್ನುವ ಸುಳಿವು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಈಗಾಗಲೇ,ಬಹದ್ದೂರ್ ಗಂಡು ಮೈಕೊಡವಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಇಂಡಿಯಾದ ಜನಪ್ರಿಯ ಫೈಟ್ ಮಾಸ್ಟರ್ ಗಳಾದ ರಾಮ್- ಲಕ್ಷ್ಮಣ್ ಪೊಗರು ಹೈದನಿಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ಆರಂಭಿಕ ಹಂತದಲ್ಲೇ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಧ್ರುವ ಅಭಿನಯದ ಐದನೇ ಚಿತ್ರ ಅದ್ದೂರಿಯಾಗಿ ತಯ್ಯಾರಾಗಲಿದೆ. ಬೆಳ್ಳಿಪರದೆ ಬೆಚ್ಚುವಂತೆ ದುಬಾರಿ ಹುಡುಗನ ಐದನೇ ಚಿತ್ರ ಮೂಡಿಬರಲಿದೆ. ಅಂದಹಾಗೆ, ಆಗಸ್ಟ್ ೧೫ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ