ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿರುವ “ಕೆಜಿಎಫ್-೨” ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇಷ್ಟರಲ್ಲೇ ಸಿನಿಮಾ ಬಿಡುಗಡೆಯ ಅಧಿಕೃತ ಘೋಷಣೆಯಾಗಲಿದೆ. ಈ ಮಧ್ಯೆ ಚಿತ್ರತಂಡ ಸಂಜಯ್ ದತ್ ಅವರ ಮತ್ತೊಂದು ಭರ್ಜರಿ ಪೋಸ್ಟರ್ ಬಿಡುಗಡೆ ಮಾಡಿದೆ.
ಹೌದು, ಜುಲೈ ೨೯ರಂದು ಸಂಜಯ್‌ದತ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ, ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಆ ಪೋಸ್ಟರ್‌ಗೆ ಸಖತ್ ಮೆಚ್ಚುಗೆ ಸಿಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತುತ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿರುವ “ಕೆಜಿಎಫ್-೨” ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಅಂದಹಾಗೆ, ಪೋಸ್ಟರ್ ರಿಲೀಸ್ ಮಾಡಿ, “ಯುದ್ಧವು ಪ್ರಗತಿಗಾಗಿ ಆಗಿದೆ. ರಣಹದ್ದುಗಳು ಕೂಡ ನನ್ನೊಂದಿಗೆ ಒಪ್ಪುತ್ತವೆ” ಎಂಬ ಬರಹದೊಂದಿಗೆ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಸಂಜಯ್ ದತ್ ಅವರ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಪೋಸ್ಟರ್ ನೋಡಿದವರಿಗೆ ಅವರ ಪಾತ್ರ ನಿಜಕ್ಕೂ ಕುತೂಹಲ ಮೂಡಿಸೋದು ನಿಜ. ಕೈಯಲ್ಲೊಂದು ಖಡ್ಗ, ಕಣ್ಣಿಗೊಂದು ಬ್ಲಾಕ್ ಗ್ಲಾಸ್, ಕಣ್‌ಸೆಳೆಯೋ ಹೇರ್‌ಸ್ಟೈಲ್, ಪೆಪ್ಪರ್ ಸಾಲ್ಟ್ ದಾಡಿ, ಖದರ್ ಲುಕ್‌ನೊಂದಿಗಿರುವ ಪೋಸ್ಟರ್ ಸದ್ಯ ಜೋರು ಸುದ್ದಿ ಮಾಡುತ್ತಿದೆ.
ಇನ್ನು ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ” ಎಂದು ದತ್ ಹೇಳಿದ್ದಾರೆ.