ಅಪ್ಪಾಜಿ ತೂಗುದೀಪ್ ಶ್ರೀನಿವಾಸ್ ಅವರು
ಸಿನಿಮಾ ಇಂಡಸ್ಟ್ರಿಗೆ ಬಂದಿರೋದು ರಾಜ್ ಕುಮಾರ್ ಅವರ ಬ್ಯಾನರ್ ನಿಂದ. ನಾನು ಕೂಡ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ಇದೇ ರಾಜ್ ಕುಮಾರ್ ಅವರ ಬ್ಯಾನರ್ ನಿಂದ.
ಜನುಮದ ಜೋಡಿ ಚಿತ್ರಕ್ಕೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೇನೆ. 175 ರೂಪಾಯಿ ಬಾಟದಿಂದ ಅವರ ಬ್ಯಾನರ್ ನಲ್ಲಿ ದುಡಿದಿದ್ದೇನೆ. ನನಗೆ ಅದರ ಬಗ್ಗೆ ಗೌರವ ಇದೆ.
ದೊಡ್ಮನೆ ಆಸ್ತಿ ಬಗ್ಗೆ ಉಮಾಪತಿಯವರು ಅದ್ಯಾಕೆ ರಾಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಕಾಣದ ಕೈಗಳು ದೊಡ್ಮನೆಯ ವಿರುದ್ದ ದರ್ಶನ್ ರನ್ನ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೋ ಏನೋ ಅದಕ್ಕೂ ಉತ್ತರ ಸಿಗುತ್ತಿಲ್ಲ. ತೆರೆಮರೆಯಲ್ಲಿ ಸಂಚು ನಡೆಯುತ್ತಿದೆಯೋ ಏನೋ ಆ ಭಗವಂತನಿಗೆ ಗೊತ್ತು ಆದರೆ ದಚ್ಚು ಮಾತ್ರ ಉಂಡ ಮನೆಗೆ ಕೇಡು ಬಯಸಲ್ಲ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ದೊಡ್ಮನೆ ಆಸ್ತಿ ಬಗ್ಗೆ ಎದ್ದಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಶಿವರಾಜ್ ಕುಮಾರ್- ಪುನೀತ್ ರಾಜ್ ಕುಮಾರ್- ರಾಘವೇಂದ್ರ ರಾಜ್ ಕುಮಾರ್ ಹುಟ್ಟುತ್ತಲೆ ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಅವರ ಆಸ್ತಿನಾ ನಾವು ಕೊಂಡುಕೊಳ್ಳೋಕೆ ಆಗುತ್ತಾ, ಅನ್ನ ತಿಂದ ಮನೆಗೆ ಕೇಡು ಬಯಸುವವರಲ್ಲ ನಾವು ಅಂತ ಮಾತನಾಡಿರುವ ದಚ್ಚು ದೊಡ್ಮನೆಯೊಂದಿಗಿನ ಅವಿನಾಭಾವ ಸಂಬಂಧ ಬಿಚ್ಚಿಟ್ಟಿದ್ದಾರೆ.
ನಮ್ಮ ಅಪ್ಪಾಜಿ ತೂಗುದೀಪ್ ಶ್ರೀನಿವಾಸ್ ಅವರು
ಸಿನಿಮಾ ಇಂಡಸ್ಟ್ರಿಗೆ ಬಂದಿರೋದು ರಾಜ್ ಕುಮಾರ್ ಅವರ ಬ್ಯಾನರ್ ನಿಂದ. ನಾನು ಕೂಡ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ಇದೇ ರಾಜ್ ಕುಮಾರ್ ಅವರ ಬ್ಯಾನರ್ ನಿಂದ. ಪೂರ್ಣಿಮಾ ಎಂಟರ್ಪ್ರೈಸಸ್ ನ
ಜನುಮದ ಜೋಡಿ ಚಿತ್ರಕ್ಕೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೇನೆ. 175 ರೂಪಾಯಿ ಬಾಟದಿಂದ ಅವರ ಬ್ಯಾನರ್ ನಲ್ಲಿ ದುಡಿದಿದ್ದೇನೆ. ನನಗೆ ಅದರ ಬಗ್ಗೆ ಗೌರವ ಇದೆ. ಇವತ್ತು ಇಷ್ಟುದ್ದ ದಪ್ಪ ಬೆಳೆದು ನಿಂತಿದ್ದೇವೆ ಅಂದರೆ ಅದಕ್ಕೆ ಕಾರಣ ಅಣ್ಣಾವ್ರ ಬ್ಯಾನರ್ ಹಾಗೂ ಅವರ ಸಂಸ್ಥೆಯಿಂದ ತಿಂದ ಅನ್ನ. ಹೀಗಾಗಿ ಅನ್ನ ಹಾಕಿದ ಸಂಸ್ಥೆಯನ್ನ ಮರೆಯೋದಿಲ್ಲ
ಇನ್ನೂ ನೂರು ವರ್ಷ ಹೋದರೂ ದೊಡ್ಮನೆ ದೊಡ್ಮನೆನೇ. ನಾವು ಅದರ ಕೆಳಗಡೆ ಇರುವ ಹುಲ್ಲು ಅಲ್ಲ ಅದರ ಕೆಳಗಡೆ ಇರುವ ಬೇರು ಅಂದ್ಕೊಳ್ಳಿ. ಹೀಗಂತ ದಚ್ಚು ದೊಡ್ಮನೆಯನ್ನ ಕೊಂಡಾಡಿದ್ದಾರೆ. ಅಣ್ಣಾವ್ರ ಮೇಲಿರುವ ಅವರ ಕುಟುಂಬದ ಮೇಲಿರುವ ಗೌರವ ಹಾಗೂ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.
ವಾಸ್ತವ ಹೀಗಿರುವಾಗ ದೊಡ್ಮನೆಯ ಆಸ್ತಿಗೆ ಕಣ್ಣಾಕಿದ್ದಾರೆ ಎನ್ನುವ ಗುಮಾನಿ ಸುದ್ದಿ ಹಬ್ಬಿಸೋದು ಎಷ್ಟು ಸರೀ? ದೊಡ್ಮನೆ ಆಸ್ತಿ ಕೇಳಿದರೂ ನಾನು ಕೊಡಲ್ಲ ಅಂದೆ ಹೀಗಂತ ರಾಬರ್ಟ್ ಪ್ರೊಡ್ಯೂಸರ್ ಉಮಾಪತಿಯವರು ಹೇಳಿಕೆ ನೀಡುವುದು ಎಷ್ಟು ಸರಿ ನೀವೇ ಯೋಚನೆ ಮಾಡಿ.