ಬರಹ: ವಿಶಾಲಾಕ್ಷಿ
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ನಿಗೆ ಜೊತೆಯಾಗೋಕೆ ಶ್ರೀಲಂಕಾ ಸುಂದರಿ ಬರ್ತಾಳೆನ್ನುವ ಸುದ್ದಿ ಕಳೆದೊಂದು ವಾರದಿಂದ ಟೂಪೀಸ್ ಹಾಕಿಕೊಂಡು ಇಡೀ ಗಾಂಧಿನಗರದ ತುಂಬೆಲ್ಲಾ ಕುಣಿಯುತ್ತಿತ್ತು. ಹೀಗೆ ಟೂಪೀಸ್ ನಲ್ಲಿ ಡ್ಯಾನ್ಸ್ ಮಾಡಿದ ಸುದ್ದಿಗೆ ಮೈಲೇಜ್ ಸಿಕ್ಕಿದೆ. ವಿಕ್ರಾಂತ್ ರೋಣನ ಜೊತೆಯಾಗೋದಕ್ಕೆ ಬಿಟೌನ್ ಬ್ಯೂಟಿ ಫ್ಲೈಟ್ ಏರಿ ಬೆಂಗಳೂರಿಗೆ ಬಂದಿಳಿದಾಗಿದೆ.
ಮುಂಬೈನಲ್ಲಿ ಬ್ರೇಕ್ ಫಾಸ್ಟ್ ಮುಗಿಸಿಕೊಂಡು ಮಧ್ಯಾಹ್ನ ಲಂಚ್ ಟೈಮ್ ಅಷ್ಟರಲ್ಲಿ ಬಿಟೌನ್ ಬ್ಯೂಟಿ ಬೆಂಗಳೂರಿಗೆ ಬಂದಿಳಿದರು. ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕರಾದ ಜಾಕ್ ಮಂಜು ಅವರು ರೆಡ್ ರೋಸ್ ಬೊಕ್ಕೆ ಕೊಟ್ಟು
ಶ್ರೀಲಂಕಾ ಚೆಲುವೆಯನ್ನ ವೆಲ್ ಕಮ್ ಮಾಡಿಕೊಂಡರು. ಕೂಲ್ ಡ್ರಿಂಕ್ಸ್ ಕುಡಿಯುತ್ತಾ ಒಂದಿಷ್ಟು ಮಾತುಕತೆ ನಡೆಸಿದ ಜಾಕ್ವೆಲಿನ್, ಲೈಟಾಗಿ ಮಧ್ಯಾಹ್ನ ಲಂಚ್ ಮುಗಿಸಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡೋದಕ್ಕೆ ಫ್ಲೋರ್ ಗಿಳಿದರು.
ವಿಕ್ರಾಂತ್ ರೋಣ ಮೇಕಿಂಗ್ ಕಂಡು ಜಾಕ್ವೆಲಿನ್ ಕ್ಲೀನ್ ಬೋಲ್ಡ್!
ಶನಿವಾರ ಸಂಜೆ ಅಷ್ಟರಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಪ್ರೋಗ್ರಾಂ ಮುಗಿಸಿದ ಜಾಕ್ವೆಲಿನ್, ವಿಲಿಯಂ ಡೇವಿಡ್ ಅವರ ಕ್ಯಾಮೆರಾ ಕೈಚಳಕದ ಮೇಕಿಂಗ್ ದೃಶ್ಯಗಳನ್ನು ಕಣ್ತುಂಬಿಕೊಂಡರು. ಕಣ್ಣು ಕುಕ್ಕುವಂತಿದ್ದ ದೃಶ್ಯಗಳನ್ನು ನೋಡಿ ಕಿಕ್ ಸುಂದರಿ ಕ್ಲೀನ್ ಬೋಲ್ಡ್ ಆಗಿಬಿಟ್ಟರು.
ಕಿಚ್ಚನ ಜೊತೆ ಕಿಕ್ಕೇರಿಸಲಿದ್ದಾಳೆ ಕಿಕ್ ಸುಂದರಿ !
ಅಂದ್ಹಾಗೇ ಇದೇ ಮೊದಲ ಭಾರಿಗೆ ಜಾಕ್ವೆಲಿನ್ ಗಂಧದಗುಡಿಗೆ ಕಾಲಿಟ್ಟಿದ್ದಾರೆ. ಆರಡಿ ಕಟೌಟ್, ಬಾದ್ ಷಾ ಕಿಚ್ಚನ ಜೊತೆ ಲೆಗ್ ಶೇಕ್ ಮಾಡೋದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕಿಚ್ಚ ಕೂಡ ಕಿಕ್ ಸುಂದರಿ ಜೊತೆ ಕಿಕ್ಕೇರಿಸೋದಕ್ಕೆ ಕೊಂಚ ಎಕ್ಸೈಟ್ ಆಗಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿಯನ್ನ ನೋಡೋದಕ್ಕೆ ಫ್ಯಾನ್ಸ್ ಕಣ್ಣರಳಿಸಿಕೊಂಡೇ ಕಾಯ್ತಿದ್ದಾರೆ.
ಸುದೀಪ್ ಹಾಗೂ ಜಾಕ್ವೆಲಿನ್
ಜೊತೆಯಾಗಿ ಕುಣಿಯೋ ಸ್ಪೆಷಲ್ ಹಾಡಿಗೆ ನಿರ್ಮಾಪಕರಾದ ಜಾಕ್ ಮಂಜು ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ.
ಎರಡು ಕೋಟಿ ವೆಚ್ಚದಲ್ಲಿ
ಕಲಾ ನಿರ್ದೇಶಕ ಶಿವಕುಮಾರ್ ಅದ್ದೂರಿ ಸೆಟ್ ನಿರ್ಮಿಸಿಕೊಟ್ಟಿದ್ದಾರೆ.
ಅಜನೀಶ್ ಲೋಕನಾಥ್ ಟ್ಯೂನ್ ಹಾಕಿಕೊಟ್ಟಿರುವ ಡ್ಯಾನ್ಸ್ ನಂಬರ್ ನ
ಜಾನಿ ಮಾಸ್ಟರ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ವಿಶೇಷ ಹಾಡು ಸೆರೆಯಾಗಲಿದೆ. ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ.
ಕಿಚ್ಚನ ಜೊತೆ ಕುಣಿದು ಕೋಟಿ ಪಡೆಯಲಿದ್ದಾಳೆ ಶ್ರೀಲಂಕಾ ಸುಂದರಿ ಜಾಕ್ವೆಲಿನ್ !
ಸ್ಯಾಂಡಲ್ ವುಡ್ ಬಾದ್ ಷಾ ಜೊತೆ ಕಾಸ್ಟ್ಲೀ ಸೆಟ್ ನಲ್ಲಿ ಕುಣಿಯಲು ಬಂದಿರುವ ಬಾಲಿವುಡ್ ಬೊಂಬೆ ಜಾಕ್ವೆಲಿನ್ ಗೆ ಒಂದು ಕೋಟಿ ಸಂಭಾವನೆ ಕೊಡಬೇಕಂತೆ. ಸನ್ನಿಲಿಯೋನ್ ಗೆ ಸೈಡಿಗೆ ತಳ್ಳಿ ಸುದೀಪ್ ಜೊತೆ
ಜಿರೋ ಸೈಜ್ ಸೊಂಟ ಬಳುಕಿಸೋಕೆ ಬಂದಿರುವ ಕಿಕ್ ಕಿನ್ನರಿ, ವಿಕ್ರಾಂತ್ ರೋಣ ಚಿತ್ರದ ಹೈಪ್ ನ ಒಂದು ತೂಕ ಜಾಸ್ತಿ ಮಾಡಲಿದ್ದಾರಂತೆ. ಹೈಟ್- ವೇಯ್ಟ್ ಎಲ್ಲದರಲ್ಲೂ ಕಿಚ್ಚನಿಗೆ ಪಕ್ಕಾ ಮ್ಯಾಚೋ ಆಗುವ ಜಾಕ್ವೆಲಿನ್ ಕಿಕ್ಕೇರಿಸೋದು ಖಚಿತ ಎನ್ನಲಾಗ್ತಿದೆ.
ವಿಕ್ರಾಂತ್ ರೋಣ ಟೈಟಲ್ ನಿಂದಲೇ ಹೈಪ್ ಕ್ರಿಯೇಟ್ ಮಾಡಿಕೊಂಡಿರುವ ಚಿತ್ರ. ಆಕ್ಷನ್ ಅಡ್ವೆಂಚರ್ಸ್ ಫ್ಯಾಂಟಸಿ ಲೋಕವನ್ನು ತ್ರೀಡಿಯಲ್ಲಿ ತೋರಿಸುವ ಸಾಹಸಕ್ಕೆ ಚಿತ್ರತಂಡ ಕೈಹಾಕಿರುವುದರಿಂದ, ‘ವಿಕ್ರಾಂತ್ ರೋಣ’ನ ಮೇಲಿನ ನಿರೀಕ್ಷೆ ಗರಿಗೆದರಿವೆ. ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್ ಮೊದಲ ಸಲ ಒಟ್ಟಾಗಿದ್ದು ಕೂತೂಹಲ ಕೆರಳಿಸಿದೆ.
ಐದು ದಿನದ ಹಾಡಿನ ಚಿತ್ರೀಕರಣ ಮುಗಿದರೆ ವಿಕ್ರಾಂತ್ ರೋಣ ಶೂಟಿಂಗ್ ಕಂಪ್ಲೀಟ್ ಆಗುತ್ತೆ. ಕೆಲವೇ ದಿನಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಅಂತಿಮವಾಗುತ್ತೆ.
ನಂತರ ಪ್ರಮೋಷನ್ ಮುಗಿಸಿ ‘ವಿಕ್ರಾಂತ್ ರೋಣ’ನನ್ನು ಪ್ರೇಕ್ಷಕ ಮಹಾಷಯರಿಗೆ ಒಪ್ಪಿಸಲಾಗುತ್ತೆ. ನ್ಯಾಷನಲ್ ಮಾತ್ರವಲ್ಲ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸಿನಿಮಾ ಬಿಡುಗಡೆ ಪ್ಲ್ಯಾನ್ ಇದೆ.