ಈ ಕೋವಿಡ್ ಸಂಕಷ್ಟದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗಯ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ಸೇರಿಕೊಂಡು, ತಾವು ನೆಲೆಸಿರೋ ನಾಗಾವರ ಏರಿಯಾದಲ್ಲಿ ಪ್ರತಿನಿತ್ಯ 500 ಜನರಿಗೆ ಊಟ, ತಿಂಡಿ ,ಹಾಗೂ ಟೀ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ. ಈ ಸೇವೆಗೆಂದೇ ಶಿವಣ್ಣ ಬೊಲೇರೋ ಕ್ಯಾಂಟ್ರೋನ ಅರೇಂಜ್ ಮಾಡಿದ್ದು, ಈ ವಾಹನದಲ್ಲೇ ನಿತ್ಯ ಊಟ ತಿಂಡಿ ಸರಬರಾಜಾಗುತ್ತಿದೆ.
“ಆಸರೆ” ಹಸಿದ ಹೊಟ್ಟೆಗೆ ಕೈ ತುತ್ತು… ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮ, ಸದ್ಯ 10ದಿನದವರೆಗೂ ಮುಂದುವರೆಯಲಿದೆ.
ಲಾಕ್ ಡೌನ್ ಹೀಗೆ ಮುಂದುವರೆದಲ್ಲಿ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಯೋಜನೆಯನ್ನೂ ಶಿವಣ್ಣ, ಗೀತಕ್ಕ ಹಾಗೂ ಶಿವಣ್ಣ ಬಾಯ್ಸ್ ರೂಪಿಸಿಕೊಂಡಿದ್ದಾರೆ.