ಕನ್ನಡ ಚಿತ್ರೋದ್ಯಮಕ್ಕೆ ಕೊರೊನಾ ಕಲಿಸಿದ ಮಾನವೀಯತೆಯ ಪಾಠ; ಅಸಹಾಯಕರ ಬೆನ್ನಿಗೆ ನಿಂತ ಸಮಾನ ಮನಸ್ಕ ಗೆಳೆಯರು

ಕಳೆದ ಒಂದು ವರ್ಷದಿಂದಲೂ ಕೊರೊನಾದಿಂದ ಚಿತ್ರರಂಗ ನಿಜಕ್ಕೂ ತತ್ತರಿಸಿ ಹೋಗಿದೆ.
ಎಲ್ಲವೂ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಚಿತ್ರೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳು ಇಂದು ಅಕ್ಷರಶಃ ನಲುಗಿವೆ. ಕೈಯಲ್ಲಿ ಕೆಲಸವಿಲ್ಲ, ಅತ್ತ ಕೂಲಿಯೂ ಇಲ್ಲ ಬದುಕು ಬೀದಿಪಾಲಾಗುವ ಪರಿಸ್ಥಿತಿ ಇದೆ. ಸ್ವಾಭಿಮಾನದಿಂದ ಬೇರೆಯವರ ಬಳಿ ಸಹಾಯ ಕೇಳೋಕೆ ಸಂಕೋಚ ಪಡುವ ಅದೆಷ್ಟೋ ಮಂದಿ ಸಂಕಷ್ಟದಲ್ಲೇ ದಿನ‌ ಸವೆಸುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಹೆಚ್ಚಾದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಂತಹವರ ನೆರವಿಗೆ ಧಾವಿಸಲು “ಕರ್ನಾಟಕ ಚಿತ್ರೋದ್ಯಮ”ನಿರ್ಮಾಪಕ
ನಾಗೇಶ್ ಕುಮಾರ್ ಯು .ಎಸ್, ನಿರ್ದೇಶಕ
ನಾಗೇಂದ್ರ ಅರಸ್, ಜೆ.ಜೆ.ಶ್ರೀನಿವಾಸ್ ,
“ಕುಮಾರ್ ಎಸ್, ಅವರ ನೇತೃತ್ವದಲ್ಲಿ ಒಂದಷ್ಟು ಸಮಾನ ಮನಸ್ಕ ಗೆಳೆಯರನ್ನ ಒಟ್ಟುಗೂಡಿಸಿ, ಅವರ ಸಹಾಯವನ್ನು ಪಡೆದು ಕಳೆದೊಂದು ವರ್ಷದಿಂದ ಅತಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದವರಿಗೆ “ಮೆಡಿಸಿನ್ ಕಿಟ್” ಕೊರೊನಾ ಪೀಡಿತರ ಉಸಿರಾಟದ ತೊಂದರೆ ಆದವರಿಗೆ “ಆಕ್ಸಿಜನ್ ಕಿಟ್” “ದಿನಸಿ ಕಿಟ್” ಮತ್ತು ದೂರದ ಊರುಗಳಿಗೆ ಹೋಗಲಾಗದ ಪರಿಸ್ಥಿತಿ ಬಂದಾಗ ಅವರಿಗೆ ಧನಸಹಾಯ ಮಾಡುತ್ತಾ ಬರುತ್ತಿದ್ದಾರೆ.

ಅದರಂತೆ ಈ ಕೊರೊನಾ ಎರಡನೆ ಅಲೆಯಲ್ಲಿಯೂ ಸಹ ಸಂಕಷ್ಟದಲ್ಲಿರುವ ಚಿತ್ರೋದ್ಯಮ ಬಂಧುಗಳಿಗೆ 1000 ( ಒಂದು ಸಾವಿರ ) ದಿನಸಿ ಕಿಟ್ ಗಳನ್ನು ಕೊಡುವ ಗುರಿ ಹೊಂದಿದ್ದಾರೆ. ಈಗಾಗಲೇ ಈ ಕಾರ್ಯ ಶುರುವಾಗಿದ್ದು, ನೇರ ಸಂತ್ರಸ್ಥರಿಗೆ ಕರೆ ಮಾಡಿ ಅವರಿಗೆ ಕಿಟ್ ತಲುಪಿಸುವ ವ್ಯವಸ್ಥೆ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಸಂಕಷ್ಟ ಸಮಯದಲ್ಲಿ ಈ ನಾಲ್ವರ ನಿಸ್ವಾರ್ಥ ಸೇವೆಯನ್ನು ಚಿತ್ರೋದ್ಯಮದ ಮೆಚ್ಚಿದ್ದಾರೆ.


ಆದರೆ, ಇದು ಪ್ರಚಾರದ ಉದ್ದೇಶದಿಂದ ಕೈಗೆತ್ತಿಕೊಂಡ ಕಾರ್ಯವಲ್ಲ, ಮನುಷ್ಯತ್ವ ಇಟ್ಟುಕೊಂಡು ರೂಪಿಸಿದ ಕೆಲಸ‌ ಅನ್ನೋದನ್ನು ಅರಿಯಲೇಬೇಕು. ಅಂದಹಾಗೆ,
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಚಿತ್ರೋದ್ಯಮದ ಮೂಲಕ ಸೇವೆ ಸಲ್ಲಿಸುತ್ತಿರುವವರ ಈ
9845208000 ಸಂಖ್ಯೆ ಮೂಲಕ ಅಗತ್ಯ ಇರುವ ಸಿನಿಮಾ ಮಂದಿ ಸಹಾಯ ಪಡೆಯಬಹುದು.

Related Posts

error: Content is protected !!