ಸಮಾಜ ಸೇವೆ ರಕ್ತದಿಂದಲೇ ಬಂದಿದ್ದು- ರಾಗಿಣಿ ಖಡಕ್ ಮಾತು.

ರಾಜಕೀಯಕ್ಕೆ ಹೋಗ್ತೀರಾ ಅಂದ್ರೆ , ಕಾದು ನೋಡಿ ಅಂತಾರೆ ತುಪ್ಪದ ಬೆಡಗಿ

………………………….

ನಟನೆ ಎನ್ನುವುದು ರಕ್ತದಿಂದಲೇ ಬಂದಿದ್ದು ಅಂತ ಅದೆಷ್ಟೋ ಕಲಾವಿದರಿಗೆ ಜನ ಮೆಚ್ಚುಗೆ ಹೇಳುವುದು ಸರ್ವೇ ಸಾಮಾನ್ಯ. ಹಾಗೆಯೇ ನಟನೆಯಲ್ಲೂ ಮೆಚ್ಚುಗೆ ಪಡೆದುಕೊಂಡಿರುವ ಕನ್ನಡದ ಗ್ಲಾಮರಸ್ ನಟಿ ರಾಗಿಣಿ ಅವರಿಗೆ ಜನಸೇವೆ ಕೂಡ ರಕ್ತಗತವಾಗಿಯೇ ಬಂದಿದ್ದಂತೆಅದ್ಹೇಗೆ ಅಂತ ನೋಡ ಹೊರಟರೆ ಕೊರೋನಾ ನಂತರ ಅವರು ಸಮಾಜ ಸೇವೆ ಅಂತ ಸದಾ ಸುದ್ದಿಯಲ್ಲಿದಿದ್ದೇ ಸಾಕ್ಷಿ.

………………………………………..


‘ ನಾನ್ಯಾವುದು ಸುಮ್ನೆ ಮಾಡ್ತಿಲ್ಲ.‌ ಅದ್ರಿಂದ ನಂಗೆ ಪಬ್ಲಿಸಿಟಿ ಕೂಡ ಬೇಡ. ಪ್ರಾಮಾಣಿಕವಾಗಿ ಜನರ ಸೇವೆ ಮಾಡ್ಬೇಕು ಅನ್ನೋದು ನನ್ನೊಳಗಿನ ತುಡಿತ.‌ ಅದು ರಕ್ತದಿಂದಲೇ ಬಂದಿದೆ. ಯಾಕಂದ್ರೆ, ಅಪ್ಪ ಅರ್ಮಿಯಲ್ಲಿದ್ದು ಬಂದವರು.‌ ಅವರಿಂದ ಕಲಿತಿದ್ದು ಈ ಸಮಾಜ ಸೇವೆಯ ಕೆಲಸ. ಅವರೇ ಇದಕ್ಕೆಲ್ಲ ಪ್ರೇರಣೆ…..’

ಯಾಕಿಷ್ಟು ಕಾಳಜಿ, ಯಾಕಾಗಿ ಈ ಸಮಾಜ ಸೇವೆಯ ಓಡಾಟ ಎನ್ನುವ ನೇರಾನೇರಾ ಪ್ರಶ್ನೆಗೆ ನಟಿ‌ ರಾಗಿಣಿ ಕೊಟ್ಟ ದಿಟ್ಟ ಉತ್ತರ ಹೀಗಿತ್ತು. ಪ್ರಚಾರಕ್ಕಾ…..ಅಯ್ಯೂ .. ಚಿನ್ನ….ನಂಗೆ ಅದೆಲ್ಲ ಬೇಕಿಲ್ಲ….ಮಾತು‌ ನಿಲ್ಲಿಸಿ ಜೋರಾಗಿ ನಕ್ಕರು. ಯಾರಾದ್ರೂ ರಾಗಿಣಿ ಬಗ್ಗೆ ರಾಗಿಣದುಕೊ‌ಂಡಿದ್ದರೆ ಈಗಲೇ ಕರೆಕ್ಷನ್ ಮಾಡಿಕೊಳ್ಳಿ ಅಂತ‌ ಸಲಹೆ ಕೊಟ್ಟರು. ಮುಂದೆ ಕೊರೋನಾ ಕಾಲದ ದಿನಗಳಲ್ಲಿ ಜೀವದ ಹಂಗು ತೊರೆದು ಕಾಲಿಗೆ ಚಕ್ರ ‌ಕಟ್ಟಿಕೊಂಡು ಗಲ್ಲಿ ಗಲ್ಲಿ ಸುತ್ತಿದ ಕ್ಷಣಗಳನ್ನು ಮೆಲಕು ಹಾಕಿದರು. ಹೆಂಗಿತ್ತು ಆ ಜರ್ನಿ, ಮುಂದೇನು‌? ವಿವರಿಸುತ್ತಾ ಹೋದರು.

ಕೊರೋನಾ‌ ಕಾಲದಲ್ಲಿ ಯಾರು, ಎಷ್ಟೇಲ್ಲ ಆ್ಯಕ್ಟಿವ್ ಆಗಿದ್ದರೂ, ಏನೆಲ್ಲ‌ ಮಾಡಿದರೂ‌ ?‌ಅದೀಗ ತೆರೆದಿಟ್ಟ ಪುಸ್ತಕ.
ನಾಡು- ನುಡಿ, ಜನ-ಮನ ಅಂತೆಲ್ಲ ತೆರೆ ಮೇಲೆ ಅಬ್ಬರಿಸಿ, ಬೊಬ್ಬಿರಿದು ಅಪಾರ ಅಭಿಮಾನಿ‌ ಬಳಗ ಕಟ್ಟಿಕೊಂಡವರೆಲ್ಲ ಕೊರೋನಾ‌ಕ್ಕೆ ಹೆದರಿ ತಲೆ ಮರೆಸಿಕೊಂಡಾಗ ಚಿತ್ರ ರಂಗ‌ದ ಕೆಲವರು ಜೀವದ ಹಂಗು ತೊರೆದು ಜನರ‌ ನೆರವಿಗೆ ನಿಂತರು.‌ ಆ‌ ಪೈಕಿ ರಾಗಿಣಿ ಕೂಡ ಒಬ್ಬರು. ‌

ಕೊರೋನಾ ನಂತರದ ಇದುವೆರೆಗಿನ ದಿನಗಳಲ್ಲಿ ನಟಿ ರಾಗಿಣಿ ಏನೆಲ್ಲ ಸಮಾಜ ಸೇವೆ ಮಾಡಿದರು, ಯಾರಿಗೆಲ್ಲ ನೆರವಾದರು, ಏನೆಲ್ಲ ಹಂಚಿದರು ಅದು ಗೊತ್ತಿರುವ ಸಂಗತಿ.‌ದಿನ‌ನಿತ್ಯ ಮಾಧ್ಯಮದಲ್ಲಿ‌ ಸುದ್ದಿ ಆಗುತ್ತಲೆ ಇದ್ದರು.‌ಆದರೆ ಕುತೂಹಲ ಇದಿದ್ದು ಇದು ಯಾಕಾಗಿ, ಯಾಕಿಷ್ಟು ಕಾಳಜಿ ಅಂತ. ಅದೇ ಪ್ರಶ್ನೆಗಳಿಗಿಲ್ಲಿ‌ ಉತ್ತರ ವಾದರು ರಾಗಿಣಿ.

ನಾನೊಬ್ಬ ನಟಿ ಆಗುವುದಕ್ಕಿಂತ ಮುಂಚೆ, ಸೋಷಲ್ ಆ್ಯಕ್ಟಿವಿಸ್ಟ್ ಆಗ್ಬೇಕು ಅಂತಲೇ ಇತ್ತು. ಅದಕ್ಕೆ ಕಾರಣ ಅಪ್ಪ.‌ ಅವ್ರು ಆರ್ಮಿನಲ್ಲಿದ್ರು. ಅವರದು ನಿತ್ಯ ಗಡಿ ಕಾಯೋ ಕೆಲಸ. ಅವರ ಪರಿಸ್ಥಿತಿ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತು.‌ಅದರಲ್ಲೂ ನನ್ನಪ್ಪ ಬಾರ್ಡರ್ ನಲ್ಲಿದ್ದು ದೇಶದ ಗಡಿ ಕಾಯುತ್ತಿದ್ರು. ನಿತ್ಯ ದೇಶ ಸೇವೆ ಅಂತಿಂದ್ರು. ಅವರ ಕೆಲಸ, ದೇಶದ ಬಗೆಗಿನ ಕಾಳಜಿ ನೋಡಿಕೊಂಡೆ ಬೆಳೆದ ನನಗೆ ಅವರ ಹಾಗೆಯೇ ಆಗ್ಬೇಕು ಅಂತಿತ್ತು. ಅದ್ರೆ ಅರ್ಮಿಗೆ ಹೋಗ್ಲಿಕ್ಕೆ ಆಗ್ಲಿಲ್ಲ.‌ಬಟ್, ಅದ್ನ ಒಬ್ಬ ಸೋಷಲ್ ಆ್ಯಕ್ಟಿವಿಸ್ಟ್ ಆಗಿ ಮಾಡ್ಬೇಕು ಅಂತ ಅನ್ಕೊಂಡೆ. ಏನ್ ಮಾಡ್ಲಿ, ಫಸ್ಟ್ ಒಬ್ಬ ಆ್ಯಕ್ಟರ್ ಆಗಿ ಪರಿಚಯವಾದೆ. ಅದನ್ನೇ ಬಳಸಿಕೊಂಡು ಈಗ ಸೋಷಲ್ ಆ್ಯಕ್ಟಿವಿಸ್ಟ್ ಆಗಿದ್ದೇನೆ ಎನ್ನುತ್ತಾ ತಮ್ಮಗಿರುವ ಸಮಾಜ ಸೇವಾ ಮನೋಭಾವದ ಹಿಂದಿನ‌ ಪ್ರೇರಕ ಶಕ್ತಿಯನ್ನು ತಮ್ಮದೇ ಭಾಷೆಯಲ್ಲಿ ತೆರೆದಿಟ್ಟರು ರಾಗಿಣಿ.

ಮಾರ್ಚ್ ತಿಂಗಳಿನಿಂದಲೇ ಕೊರೋನಾ‌ ಬಂತು. ಇಡೀ ಜಗತ್ತೇ ಅಲ್ಲೋಲ ಕಲ್ಲೋಲ ಆಯ್ತು. ಸಿನಿಮಾ ಸೇರಿ‌ ಎಲ್ಲಾ ಉದ್ಯಮಗಳು ಬಂದ್ ಆದವು. ಕೆಲಸ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ಬಂತು. ನಿತ್ಯದ ದುಡಿಮೆಯೇ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಸೇರಿದಂತೆ ಅಸಹಾಯಕ ಜನರ ನೆರವಿಗೆ ಸೆಲೆಬ್ರಿಟಿ ಗಳು ಧಾವಿಸಿದ ಹೊತ್ತಲ್ಲಿ ರಾಗಿಣಿ ಕೂಡ ಆಖಾಡಕ್ಕೆ ಇಳಿದರು.

ಆಗಿನ ಪರಿಸ್ಥಿತಿ ಭಯಾನಕವಾಗಿತ್ತು. ಜೀವ ಉಳಿದರೆ ಸಾಕು ಅಂತ ಕೆಲವರು ಮನೆ ಹಿಡಿದು ಕುಳಿತಾಗ ಪ್ರಾಣದ ಹಂಗು ತೊರೆದು ಜನ ನೆರವಿಗೆ ಬಂದರು ರಾಗಿಣಿ.ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ಗಿರ ಗಿರ ತಿರುಗಿದ್ದಾರು.‌ ಅಲ್ಲಿ, ಇಲ್ಲಿ ಎಲ್ಲೆಲ್ಲೂ ಎನ್ನುವ ಹಾಗೆ ಬೆಂಗಳೂರಿನ‌ ಗಲ್ಲಿ ಗಲ್ಲಿಗ ಹೋಗಿ
ಪೊಲೀಸ್ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಮೂಲಕ ಜನರಿಗೆ ಆಹಾರ ಪದಾರ್ಥ ಸೇರಿದಂತೆ ಅಗತ್ಯ ಸಾಮಾಗ್ರಿ ಕೊಟ್ಟರು. ಆ ಮೂಲಕ ಸದಾ ಒಂದಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಹಾಗಾದ್ರೆ ರಾಗಿಣಿಗೆ ಎಲ್ಲಿಂದ ಬಂತು ಈ ಮಟ್ಟದ ಸೋಷಲ್ ಕಮಿಟ್ ಮೆಂಟ್? ತೆರೆ ಮೇಲೆ‌ ಅವರನ್ನು ಗ್ಲಾಮರಸ್ ಪಾತ್ರಗಳ‌ಮೂಲಕ‌ ನೋಡಿದ ಸಿನಿಮಾ‌ ಪ್ರೇಕ್ಷಕರಿಗೆ ಆ‌ ಬಗ್ಗೆ ಹಲವು ಪ್ರಶ್ನೆಗಳಿರಬಹುದು, ಆದರೆ ರಾಗಿಣಿ ಅವರಿಗೆ ಅದು ರಕ್ತದಿಂದಲೇ ಬಂದ ಬಳುವಳಿ. ಅದರ ಪ್ರತಿಫಲ ಎಂಬಂತೆ ಅವರಿಗೆ ಯುನೈಟೆಡ್ ನೊಬೆಲ್ ರೆಸ್ಕ್ಯೂ ಸರ್ವೀಸ್ ಸಂಸ್ಥೆ ‘ಅಂತಾರಾಷ್ಟ್ರೀಯ ನೊಬೆಲ್ ಅಂಬಾಸಿಡರ್ ‘ ಗೌರವ ನೀಡಿದೆ. ಇದೇ ಸಂಭ್ರಮ ಹಾಗೂ ಪ್ರೇರಣೆ ಯಿಂದ ತಮ್ಮ ಸಮಾಜ ಸೇವೆಯ ಕೆಲಸವನ್ನು ಮತ್ತೊಂದು‌ ಘಟ್ಟಕ್ಕೆ ವಿಸ್ತರಿಸಿದ್ದಾರೆ.


ಆರ್ ಡಿ ವೆಲ್ ಫೇರ್ ಹೆಸರಿನ ಸಂಸ್ಥೆ ಶುರು ಮಾಡಿದ್ದಾರೆ.‌ಈ ಸಂಸ್ಥೆಯ ಮೂಲಕ ಕೌಟುಂಬಿಕ‌ ದೌರ್ಜನ್ಯಗಳಲ್ಲಿ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ.‌’ ಇದನ್ನು‌ತುಂಬಾ ಹಂಬಲ್ ಮತ್ತು ಕಾಳಜಿಯಿಂದ ಆರಂಭಿಸಿದ್ದೇನೆ.‌ ಸಮಾಜ ಸೇವೆ ಅಂತ ನಾನೇನೆ ಮಾಡಿದರೂ, ನೊಂದ ಮಹಿಳೆಯರ ಅಸಹಾಯಕ ಪರಿಸ್ಥಿತಿ ನೋಡಿದಾಗ ಕರುಳು ಹಿಂಡುತ್ತದೆ. ಅವರ ಪರವಾಗಿ ಕೆಲಸ ಮಾಡುವುದೇ ಆದ್ಯತೆ ಎನಿಸುತ್ತದೆ. ಹಾಗಾಗಿ ಆರ್ ಡಿ ವೆಲ್ ಪೇರ್ ಸಂಸ್ಥೆ ಶುರುವಾಗಿದೆ. ಈಗ ಅದರ ಒಂದು ಹಂತದ ಕೆಲಸಕ್ಕೂ ಚಾಲನೆ ಸಿಕ್ಕಿದೆ. ನಂದಿತಾ ಪಾಠಕ್ ಹೆಸರಿನ‌ ಒಬ್ಬ ನೊಂದ ಮಹಿಳೆಯ ಪರವಾಗಿ ಆರ್ ಡಿ‌ ವೆಲ್ಫೇರ್ ಧ್ವನಿ ಎತ್ತಿದೆ.‌ಈ ಕೆಲಸ ಹೀಗೆ ಮುಂದುವರೆಯುತ್ತದೆ ‘ ಎನ್ನುವಾಗ
ರಾಗಿಣಿ ಉಗ್ರರೂಪಿ ಆಗುತ್ತಾರೆ.ರಾಗಿಣಿ ಐಪಿಎಸ್ ಪಾತ್ರ ಖಡಕ್ ಲುಕ್ ಪ್ರದರ್ಶಿಸುತ್ತಾರೆ.

ನಟಿಯಾಗಿ ಬ್ಯುಸಿ ಆಗಿದ್ದವರು ಹೀಗೆಲ್ಲ ಸಮಾಜ ಸೇವೆ ಅಂತ ನಿತ್ಯ ಓಡಾಡಿಕೊಂಡಿದ್ದರೆ, ಸಿನಿಮಾ ಮಾಡುವುದ್ಯಾವಾಗ? ‘ ನಟನೆ ನನ್ನ ಮೂಲ ವೃತ್ತಿ.‌ ಕನ್ನಡಿಗರು ನನ್ನನ್ನು ಗುರುತಿಸಿದ್ದೇ ನಟಿಯನ್ನಾಗಿ.‌ಅದರಿಂದ ಹೊರಗುಳಿಯುವ ಪ್ರಶ್ನೆಯೇ ಇಲ್ಲ. ಇಷ್ಟರಲ್ಲಿಯೇ ಇನ್ನಷ್ಟು ಹೊಸ ಸಿನಿಮಾಗಳ ವಿವರ ನೀಡುತ್ತೇನೆ.‌ಕೆಲವು ಮಾತುಕತೆ ನಡೆದಿವೆ. ಒಳ್ಳೆಯ ಕತೆ, ಪಾತ್ರ ನಿರೀಕ್ಷೆ ಮಾಡುತ್ತಿದ್ದೇನೆ. ಮತ್ತೆ ಸೋಲೋ ಪಾತ್ರದಲ್ಲಿ ಬರಬೇಕಾ, ಸ್ಟಾರ್ ಜತೆಗೆ ಅಭಿನಯಿಸಬೇಕಾ‌ ಅಂತಲೂ ಯೋಚಿಸುತ್ತಿದ್ದೇನೆ’ ಎನ್ನುತ್ತಾಮುಖದಲ್ಲಿ ಹರುಷದ ನಗು ಅರಳಿಸುತ್ತಾರೆ ತುಪ್ಪದ ಬೆಡಗಿ.

Related Posts

error: Content is protected !!