ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಾಮಾನ್ಯವಾಗಿ ಹೆಚ್ಚು ಅಂಕಗಳನ್ನು ತೆಗೆದುಕೊಂಡವರಿಗೆ ಸಾಕಷ್ಟು ಕಾಲೇಜುಗಳಿರುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ “ಜಸ್ಟ್ ಪಾಸ್” ಆದವರಿಗೆ ಅಂತಲೇ ಒಂದು ಕಾಲೇಜು ಇದೆ. ಆ ಕಾಲೇಜಿನ ವಿದ್ಯಾರ್ಥಿಗಳ ತರಲೆ, ತಮಾಷೆಗಳನ್ನು ನಿರ್ದೇಶಕ ರಘು ಈ ಚಿತ್ರದಲ್ಲಿ ತೋರಿಸಿದ್ದಾರೆ. ವಿದ್ಯಾರ್ಥಿಗಳಿಗಂತೂ ಅಪ್ಪಟ್ಟ ಮನೋರಂಜನೆಯ ರಸದೌತಣ ಸಿಗುವುದಂತು ಖಚಿತ. ಬರೀ ಇಷ್ಟೇ ಅಲ್ಲ. ಉತ್ತಮ ಸಂದೇಶ ಸಹ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು.
ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸುಜಯ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನವಿರುವ “ಜಸ್ಟ್ ಪಾಸ್” ಚಿತ್ರಕ್ಕೆ ಕೆ.ಎಂ.ರಘು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ನಾಯಕ ನಟರ ಆಗಮನ ಹೆಚ್ಚಾಗೆ ಇದೆ, ಈ ಸಾಲಿನಲ್ಲಿ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ನಾಯಕ ನಟ ವಿವಾನ್ ಕೆಕೆ ಕೂಡ ಒಬ್ಬರು, ಇವರು ಮೂಲತಃ ಕೋಲಾರ ಜಿಲ್ಲೆಯವರು.
ತಂದೆ ಉದ್ಯಮಿ. ವಿವಾನ್ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ನಂತರ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ನಿರ್ದೇಶಕರಿಗೆ ಪರಿಚಯವಾಗಿ ಅವರ ಗರಡಿಯಲ್ಲೇ, ಕಳೆದ 4 ವರ್ಷದಿಂದ ಅಭಿನಯ, ನೃತ್ಯ, ಸಾಹಸ, ವಿಭಾಗಗಳಲ್ಲಿ ಪರಿಣಿತಿ ಪಡೆದು, ಧೈರ್ಯಂ ಸರ್ವತ್ರ ಸಾಧನಂ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆ ಆಗಿದ್ದರ ಬಗ್ಗೆ ಹೇಳುತ್ತಾರೆ.
ಈ ನಡುವೆ ಸಿನಿಮಾದ ಆ ಪಾತ್ರಕ್ಕಾಗಿ, ಸತತ 5 ತಿಂಗಳು ಶೂಟಿಂಗ್ ಮಾಡುವ ಲೋಕೇಶನಲ್ಲೇ ವಾಸವಿದ್ದು ಅಲ್ಲಿನ, ಹಳ್ಳಿ ಜನರನ್ನು ಅರಿತು ಪಾತ್ರಕ್ಕಾಗಿ ತಯಾರಿಗೆ, ಮೇಕೆ ಮೇಯಿಸುವುದು, ಕೊಟ್ಟಿಗೆಯಲ್ಲಿ ಹಸು ಕಸ ಗುಡಿಸುವುದರಿಂದ ಹಿಡಿದು, ಕಾಡಿನಲ್ಲಿ ಅಭ್ಯಾಸಕ್ಕಾಗಿ ರಾತ್ರಿಯ ಹೊತ್ತು, ನಿರ್ದೇಶಕರ ಜೊತೆ ಕಾಡು ಪ್ರಾಣಿಗಳನ್ನು ನೋಡಲು ಹೋಗುತ್ತಿದ್ದರಂತೆ,
ಹೀಗೆ ತಯಾರಿ ನಡೆಸಿ, ಶೂಟಿಂಗ್ ಮಾಡುವಾಗ, ಅದರಲ್ಲೂ ಫೈಟಿಂಗ್ ಸೀನ್ ಮಾಡುವಾಗ ಅನೇಕ ಪೆಟ್ಟುಗಳಾಗಿ, ಸಾಕಷ್ಟು ಬಾರಿ ವಿಷ ಹಾವುಗಳಿಂದ ಪಾರಾಗಿದ್ದಾಗಿಯೂ ಹೇಳುವ ಅವರು, ಒಟ್ಟಾರೆ ಧೈರ್ಯಂ ಸರ್ವತ್ರ ಸಾಧನಂ ಚಿತ್ರಕ್ಕೆ ಧೈರ್ಯ ಮಾಡಿ ಅಭಿನಯಿಸಿ ಪಾತ್ರಕ್ಕೆ ದುಡಿದಿದ್ದಾಗಿ ನಾಯಕ ವಿವಾನ್ ತಿಳಿಸುತ್ತಾರೆ.
ಇದೆ ತಿಂಗಳು 23ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದ್ದು, ನಾಡಿನ ಜನತೆ ಚಿತ್ರವನ್ನು ನೋಡಿ ನಮ್ಮ ಬೆನ್ನು ತಟ್ಟಿದರೆ, ಅದೇ ನಮಗೆ ಉತ್ತಮ ಪಲಿತಾಂಶ ಎನ್ನುತ್ತಾರೆ. ಕನ್ನಡ ಚಿತ್ರರಂಗದಲ್ಲಿ ವಿವಾನ್ ಕೆಕೆ ಗಟ್ಟಿಯಾಗಿ ನಿಲ್ಲಲು ಎಲ್ಲಾ ತಯಾರಿ ನಡೆಸುತ್ತಿದ್ದು, ಒಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಇದೇ ಮೊದಲ ಸಲ ದಿಗಂತ್ ವಿಭಿನ್ನ ಪಾತ್ರದ ಮೂಲಕ ಕಾಣಿಸಿಕೊಂಡಿರುವ ಮಾರಿಗೋಲ್ಡ್ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಅದಕ್ಕೂ ಮುನ್ಮ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚಿಗೆ ಪಡೆದಿದೆ. ಅಷ್ಟೇ ಅಲ್ಲ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ, ಇದು ಆರ್.ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿ ರಘುವರ್ದನ್ ನಿರ್ಮಾಣ ಮಾಡಿ ರಾಘವೇಂದ್ರ ಎಂ. ನಾಯಕ್ ಆಕ್ಷನ್ ಕಟ್ ಹೇಳಿದ್ದಾರೆ.
ನಿರ್ಮಾಪಕ ರಘುವರ್ಧನ್, ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್, ನಾಯಕಿ ಸಂಗೀತ ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು.
ನಿರ್ದೇಶಕ ರಾಘವೇಂದ್ರ ಎಂ, ನಾಯ್ಕ್ ಮಾತನಾಡಿ, ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದವರ 4 ಜನರ ಹುಡುಗರ ಕಥೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರಿಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಬಿಸಿದ್ದೇವೆ ಎಂದು ಹೇಳಿದರು.
ಶುದ್ದ ಮನರಂಜನೆಗೆ ಒತ್ತು ನೀಡಿ ಚಿತ್ರ ಮಾಡಲಾಗಿದೆ. ಚಿತ್ರದ ಮೂಲಕ ದಿಗಂತ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ ಎಂದು ಮಾಹಿತಿ ನೀಡಿದರು.
ನಟ ದಿಗಂತ್, ಮಾತನಾಡಿ ಹೆಸರಾಂತ ನಿರ್ಮಾಪಕ. ಹಣ ನೀಡಿದ್ದು ಆದರೆ ಅದು ಅಲ್ಲಿಯೇ ನಿಂತಿದೆ. ಮಾರಿ ಗೋಲ್ಡ್ ಮೇಲೆ ನಿರ್ದೇಶಕರ ಜೊತೆ ಸಿನಿಮಾ ಮಾಡಬಹುದು, ಕಥೆ ಇಷ್ಡವಾಯಿತು, ಯಶ್ ಶೆಟ್ಟಿ,ಸಂಗೀತ ಶೆಟ್ಟಿ, ಸಂಪತ್, ಕಾಕ್ರೋಚ್ ಸುಧಿ ಇತರರುಬಿದ್ದಾರೆ. ಈ ಟೀಸರ್ ಇಷ್ಟವಾದರೆ ಎಲ್ಲರಿಗೂ ಹೇಳಿ, ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದಿದ್ದಾರೆ. ಚಿತ್ರದಲ್ಲಿ ಬುದ್ದಿವಂತ ಸ್ಕಾಮರ್ ಪಾತ್ರ ಎಂದು ಮಾಹಿತಿ ಹಂಚಿಕೊಂಡರು
ನಟಿ ಸಂಗೀತ ಶೃಂಗೇರಿ, ನಟ ದಿಗಂತ್ ನನ್ನ ಚೇಲ್ಡ್ ವುಡ್ ಕ್ರಷ್, ಅದನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ಸಾರೆ, ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ತೋರಿಸಿದ್ದಾರೆ.ಚಿತ್ರದಿಂದ ಸುಮಾರು ವರ್ಷದ ಕನಸು ಕನಸಾಗಿದೆ ಎಂದರು.
ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ, ಮಾರಿ ಗೋಲ್ಡ್ ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಕೋವಿಡ್ ಸಮಯದಲ್ಲಿ ಊರಲ್ಲಿಮೀನು ಹಿಡಿಯುತ್ತಿದ್ದೆಮಮ ಬಳಿಕ ಕಾಕ್ ರೋಚ್ ಸುಧಿ ಮಾತನಾಡಿದರು ನಂತರ ನಿರ್ದೇಶಕರು ಮಾತನಾಡಿದ ಬಳಿಕ ಮಾಹಿತಿ ಹಂಚಿಕೊಂಡರು.
ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ವಿಭಿನ್ನ ಸಂಭಾಷಣೆ ಇದೆ ಎಂದರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ , ಚಿತ್ರದಲ್ಲಿ ಎರಡೆ ಹಾಡು ಇವೆ. ಇದೊಂದು ಥ್ರಿಲ್ಲರ್ ಸಿನಿಮಾ ಆಕ್ಷನ್ ಸಿನಿಮಾ, ಸಿನಿಮಾಹಿಟ್ ಆದರೆ ದಿಗಂತ್ ಆಕ್ಷನ್ ಹೀರೋ ಆಗಲಿದ್ಸಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ, ಗೆಲವಿನ ಆಶಾಕಿರಣ ಇದೆ ಎಂದರು.
ಛಾಯಾಗ್ರಾಹಕ ಚಂದ್ರಶೇಖರ್ ಹೊಸ ಜಾನರ್ ಸಿನಿಮಾ , ಥ್ರಿಲ್ಲರ್ ಸಿನಿಮಾ ಮಾಡಿರಲಿಲ್ಲ. ನಿರ್ಮಾಪಕ ರಘುವರ್ಧನ್ ಜೊತೆ ಗುಣವಂತದಲ್ಲಿ ಕೆಲಸ ಮಾಡಿದ್ದೇ ಈಗ ಅವರ ನಿರ್ಮಾಣದಲ್ಲಿ ಕೆಲಸ ಮಾಡಿದ್ದೇವೆ ಎಂದರು
ಚಿತ್ರದಲ್ಲಿ ದಿಗಂತ್ ಮಂಚಾಲೆ, ಸಂಗೀತ ಶ್ರಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆಣ , ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ಗೌಡ ಕಲೆ, ನೃತ್ಯ ಕಲೈ, ಸಾಹಸ ಅರ್ಜುನ್ ರಾಜ್ ಹಾಗು ನಿರ್ಮಾಣ ನಿರ್ವಹಣೆ: ಜೇವಿಯರ್ ಫರ್ನಾಂಡಿಸ್ ಚಿತ್ರಕ್ಕಿದೆ.
ಎ.ಎಂ ಕ್ರಿಯೇಷನ್ ಬ್ಯಾನರ್ ಅಡಿ ಮಹೇಶ್ ಎನ್ ನಿರ್ಮಾಣ ಮಾಡಿ ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿರುವ ” ಕಲಿ ಕುಡುಕರು” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಒಬ್ಬ ಆಟೋ ಡ್ರೈವರ್, ಇನ್ನೊಬ್ಬ ಉಂಡಾಡಿ ಗುಂಡ,ಮತ್ತೊಬ್ಬ ರಿಯಲ್ ಎಸ್ಟೇಟ್ ಬ್ರೋಕರ್ ,ಇದರ ಜೊತೆಗೆ ಇನ್ನೊಬ್ಬ ಅನಾಥ ನಿರುದ್ಯೋಗಿ ಹೀಗೆ ನಾಲ್ಕು ನಾಯಕರು ಮತ್ತು ಮತ್ತೊಬ್ಬನ ಸುತ್ತ ಸಾಗುವ ಕಥೆ ಚಿತ್ರ ಒಳಗೊಂಡಿದೆ.
ತಮ್ಮ ಕುಟುಂಬದಲ್ಲಿ ಆಗುವ ಅನಾಹುತಗಳಿಗೆ ಸಮಸ್ಯೆಗಳಿಗೆ ಒಳಗಾಗಿ ಕುಡಿತಕ್ಕೆ ದಾಸರಾಗುತ್ತಾರೆ ,ಕುಡಿತವೇ ಇವರ ಜೀವನಾಗುವಷ್ಡರ ಮಟ್ಟಿಗೆ ಚಟವಾಗಿಸಿಕೊಂಡವರು. ನಿರುದ್ಯೋಗಿ ಯುವಕನನ್ನು ಆಗರ್ಭ ಯುವತಿಯನ್ನು ಪ್ರಿತಿಸುತ್ತಾಳೆ ಆದರೆ ಹುಡುಗಿ ರೌಡಿಗಳಿಗೆ ಸಿಕ್ಕಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ.ರೌಡಿಗಳು ಆಕೆಯನ್ನು ನೇಣು ಹಾಕುತ್ತಾರೆ. ರೌಡಿಗಳಿಗೆ ಇನ್ಸ್ ಪೆಕ್ಟರ್ ಸಹಾಯ ಇರುತ್ತದೆ. ಹೀಗಿರುವಾಗ ನಾಲ್ಕು ಜನ ನಾಯಕರು ಮತ್ತು ಸ್ನೇಹಿತ ಸೇರಿ ರೌಡಿಗಳನ್ನು ಮತ್ತು ಇನ್ಸ್ ಪೆಕ್ಟರ್ ಅವರನ್ನು ಹೇಗೆ ಸಾಯಿಸುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಮಹೇಶ್ ಎನ್., ಸಿನಿಮಾ ಮಾಡ್ತೇವೆ ಅಂತ ಅಂದುಕೊಂಡು ಮಾಡಿದ್ದೇವೆ. ನಾಲ್ಕು ಜನರ ಪಾತ್ರದ ಸುತ್ತ, ಸಾಗಲಿದೆ, ರಿಯಾಲಿಟಿ ಶೋ ಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತ ಮುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು. ನಾಗೇಂದ್ರ ಅರಸ್ ಮಾತನಾಡಿ, ಟೈಟಲ್ ಮಜವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಹೊಸ ತಂಡಕ್ಕೆ ಸಹಕಾರ ಯಾವತ್ತೂ ಸಹಕಾರ ಇದ್ದೇ ಇರುತ್ತೆ. ಉತ್ಸಾಹಿ ತಂಡ ಹುರುಪಿನಿಂದ ಕೆಲಸ ಮಾಡಿದ್ದೇನೆ. ಹೊಸ ತಂಡ ಭಯ ಪಡುವರು ತಂಡಕ್ಕೆ ಸಹಕಾರ ನೀಡಿದ್ದೇನೆ ಎಂದರು.
ಸೋನು ಗೌಡ ,ಆಟೋ ಡ್ರೈವರ್ ಪಾತ್ರ, ಪಿಲ್ಮ್ ಫಿಲ್ಡ್ ಹೋಗಿ ವಾಪಸ್ ಬರುವ ಪಾತ್ರ ಎಂದರೆ ಮತ್ತೊಬ್ಬ ನಾಯಕಿ ರಿತ್ಯಾ ಅನಾಥ ಹುಡುಗನನ್ನು ಮದುವೆಯಾಗುತ್ತೇನೆ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದರು ಹಿರಿಯ ಕಲಾವಿದೆ ಮಂಜುಳಾ ರೆಡ್ಡಿ , ಬಡ್ಡಿ ಬಂಗಾರಮ್ಮ ಪಾತ್ರ, ಮನೆ ಮನೆಯ ಪಾತ್ರ ಎಂದರೆ ಲೋಹಿತ್, ರವೀಶ್, ಮುರುಳಿ ಮಾಹಿತಿ ಹಂಚಿಕೊಂಡರು.
ಕನ್ನಡದ ‘ದಿಯಾ’ ಹಾಗೂ ತೆಲುಗಿನ ‘ದಸರಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ “ಕೆಟಿಎಂ’ ಸಿನಿಮಾ ತನ್ನ ಟೀಸರ್ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡುತ್ತಿದೆ.
ಕೆಟಿಎಂ ಸಿನಿಮಾದ ಹಾಡುಗಳು ಕೇಳುಗರನ್ನು ಮೋಡಿ ಮಾಡುತ್ತಿವೆ. ಈ ಹಿಂದೆ ಬಿಡುಗಡೆಯಾಗಿದ್ದ ಎರಡು ಸಾಂಗ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಕೆಟಿಎಂ ಹಾಡುಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿವೆ. ಇದೀಗ. ಕೆಟಿಎಂ ಸಿನಿಮಾದ ಮೂರನೇ ಹಾಡು ಅನಾವರಣಗೊಂಡಿದೆ
ಎಲ್ಲಾ ನೀನೇನೆ ಎಂಬ ಮೆಲೋಡಿ ಗಾನಬಜಾನಕ್ಕೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಚೇತನ್ ರಾವ್ ಸಂಚಿತ್ ಹೆಗ್ಡೆ ಜೊತೆಗೂಡಿ ಧ್ವನಿಯಾಗುವುದರ ಜೊತೆಗೆ ಸಂಗೀತ ಒದಗಿಸಿದ್ದಾರೆ. ಎಲ್ಲಾ ನೀನೇನೆ ಎನ್ನುತ್ತಾ ದೀಕ್ಷಿತ್ ಸಂಜನಾ ದಾಸ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಈ ಹಿಂದೆ “ಅಥರ್ವ’ ಸಿನಿಮಾ ನಿರ್ದೇಶಿಸಿದ್ದ ಅರುಣ್ “ಕೆಟಿಎಂ’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. “ಮಹಾಸಿಂಹ ಮೂವೀಸ್’ ಬ್ಯಾನರ್ನಲ್ಲಿ ವಿನಯ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನವಿರಾದ ಪ್ರೇಮಕಹಾನಿ ಇರುವ “ಕೆಟಿಎಂ’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಾಲ್ಕು ವಿಭಿನ್ನ ಶೇಡ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಕಾಜಲ್ ಕುಂದರ್ ಹಾಗೂ ಸಂಜನಾ ನಾಯಕಿಯರಾಗಿದ್ದಾರೆ. ಉಳಿದಂತೆ ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತು, ರಘು ರಾಮನಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾಕ್ಕೆ ನವೀನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಸುತ್ತಮುತ್ತ “ಕೆಟಿಎಂ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಇದೇ ಫೆಬ್ರವರಿ 16ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬಿಗ್ಬಾಸ್ ಸೀಸನ್ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ”ಯ ಎರಡು ಸೂಪರ್ ಹಿಟ್ ಸೀಸನ್ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.
ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಬಿಗ್ಬಾಸ್ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್ಬಾಸ್ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್ ಕನ್ನಡದ ಅದ್ಭುತ ಕಾಮಿಡಿಯನ್ಗಳ ಜೊತೆಗೆ ಬಿಗ್ಬಾಸ್ನ ಈ ಸೀಸನ್ ಸೇರಿದಂತೆ ವಿವಿಧ ಸೀಸನ್ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್.
ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು.
ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ. ಆದರೆ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.
“ಗಿಚ್ಚಿ ಗಿಲಿಗಿಲಿ” ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು.
ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು “ಗಿಚ್ಚಿ ಗಿಲಿಗಿಲಿ” ಶೋ ಬಗ್ಗೆ ಹೇಳಿದರು. ನಾನು ಕೂಡ ಈ ಶೋ ನೋಡಿದ್ದೇನೆ. ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು.
ನಾವು ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ನೀಡುತ್ತಿರುವ ವಾಹಿನಿಯವರಿಗೆ, ತೀರ್ಪುಗಾರರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ.
“ಬಿಗ್ ಬಾಸ್” ಸೀಸನ್ ಹತ್ತು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಶನಿವಾರ, ಭಾನುವಾ ಅದೇ ಸಮಯಕ್ಕೆ “ಗಿಚ್ಚಿ ಗಿಲಿಗಿಲಿ” ಪ್ರಸಾರವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಪ್ರಕಾಶ್.
ಗಿಚ್ಚಿ ಗಿಲಿಗಿಲಿಯ ಕಾಮಿಡಿಯನ್ಗಳು ಈಗಾಗಲೇ ರಾಜ್ಯದ ಎಲ್ಲೆಡೆ ಜನಪ್ರಿಯರು. ಇವರೊಂದಿಗೆ ಹೊಸ ಹತ್ತು ಸ್ಪರ್ಧಿಗಳೂ ಸೇರಿದ್ದು ಈ ಸೀಸನ್ನಲ್ಲಿ ಕಾಮಿಡಿಯ ಮಹಾಪೂರವೇ ಹರಿದುಬರಲಿದೆ.
ಈ ಬಾರಿಯ ಬಿಗ್ಬಾಸ್ನ ಹೈಲೈಟ್ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡಲಿದ್ದಾರೆ. ಇವರ ಜೊತೆಗೆ ಬಿಗ್ಬಾಸ್ ಸೀಸನ್ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್ಬಾಸ್ ಸೀಸನ್ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್ ಗೊಬ್ಬರಗಾಲ ಇದ್ದೇ ಇರುತ್ತಾರೆ.
ಇವರ ಜೊತೆಗೆ ಈ ಬಾರಿ ಬಿಗ್ಬಾಸ್ನಲ್ಲಿದ್ದ ದ್ರೋಣ್ ಪ್ರತಾಪ್ ಮತ್ತು ಇಶಾನಿ ಕೂಡಾ ಕಾಮಿಡಿಯಲ್ಲಿ ಒಂದು ಕೈ ನೋಡೇ ಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ನಾಲ್ಕರಲ್ಲೇ ಜನಮನ ಗೆದ್ದಿದ್ದ ಸಂಜನಾ ಚಿದಾನಂದ್ ಕೂಡಾ ಹಾಸ್ಯದಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಸ್ಫರ್ಧಿಸಲಿದ್ದಾರೆ. ಉಳಿದಂತೆ ಕಲರ್ಸ್ ಕನ್ನಡದ ಜನಪ್ರಿಯ ಕಾಮಿಡಿಯನ್ಗಳಾದ ಹುಲಿ ಕಾರ್ತಿಕ್, ಶಿವು, ಚಿಲ್ಲರ್ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್, ನಂದೀಶ್ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. “ಕನ್ನಡ ಕೋಗಿಲೆ” ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್ಸ್ಟಾರ್” ನ ಪುನೀತಾ, “ಮಜಾ ಟಾಕೀಸ್”ನ ಮೋಹನ್, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ರೆಡಿಯಾಗಿದೆ.
‘ಕೆರೆಬೇಟೆ’ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಿದ್ದ ಸಿನಿಮಾ ತಂಡ ಇದೀಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಿದ್ದಾರೆ.
‘ಮಲೆನಾಡ ಬೊಂಬೆ’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತವಾದ ಹಾಡು ನಡಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಫಿದಾ ಆಗಿದ್ದಾರೆ. ಮಲೆನಾಡಿನ ಸುತ್ತಮುತ್ತವೇ ಈ ಹಾಡಿನ ಚಿತ್ರೀಕರಣ ಮಾಡಿರುವುದು ವಿಶೇಷ.
‘ಕೆರೆಬೇಟೆ’ ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ನಾಯಕ ಗೌರಿಶಂಕರ್ ಮತ್ತು ನಾಯಕಿ ಬಿಂಧು ಶಿವರಾಮ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ರೋಮ್ಯಾಂಟಿಕ್ ಹಾಡು ಇದಾಗಿದೆ. ಅಂದಹಾಗೆ ಈ ಸುಂದರ ಹಾಡಿಗೆ ‘ಕಾಂತಾರ’ ಸಿನಿಮಾದ ‘ಸಿಂಗಾರ ಸಿರಿಯೇ…’ ಹಾಡಿನ ಖ್ಯಾತಿಯ ಪ್ರಮೋದ್ ಮರುವಂತೆ ಸಾಹಿತ್ಯ ರಚಿಸಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡಿಗೆ ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.
ಈ ಹಾಡಿನ ಚಿತ್ರೀಕರಣದ ಅನುಭವ ತೆರೆದಿಟ್ಟ ಸಿನಿಮಾ ತಂಡ. ‘ಈ ಹಾಡನ್ನು ತುಂಬಾ ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಅತಿಯಾದ ಮಳೆಯಿಂದ ಅನೇಕ ಬಾರಿ ಚಿತ್ರಿಕರಣ ನಿಲ್ಲಿಸಲಾಗಿತ್ತು. ಮನುಷ್ಯರೇ ಓಡಾಡದೇ ಇರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಪ್ರಾಣಿಗಳ ಭಯ ಕೂಡ ಇತ್ತು. ಮಲೆನಾಡಿನ ತುಂಬಾ ರಿಮೋಟ್ ಏರಿಯಾದಲ್ಲಿ ನಾಲ್ಕು ದಿನಗಳ ಕಾಲ ಈ ಹಾಡನ್ನು ಸೆರೆಹಿಡಿದಿದ್ದೇವೆ. ಈ ಹಾಡಿಗಾಗಿ ಹರಸಾಹಸ ಪಟ್ಟಿದ್ದೇವೆ’ ಎನ್ನುತ್ತಾರೆ.
ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ‘ಕೆರೆಬೇಟೆ’ ಸಿನಿಮಾ ಇದೀಗ ಹಾಡಿನ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಮುಂದಿನ ತಿಂಗಳು ಅಂದರೆ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.
ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೀಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.
ಈ ಸಿನಿಮಾ ಅನ್ನೋದೇ ಹಾಗೆ. ಇಲ್ಲೊಮ್ಮೆ ಕಾಲಿಟ್ಟರೆ ಸಾಕು, ಹಿಂದಿರುಗುವ ಮನಸ್ಸಾಗೋದೇ ಇಲ್ಲ. ಅದೆಷ್ಟೋ ಮಂದಿ ಸಿನಿಮಾ ಕನಸು ಹೊತ್ತು ಬಂದು ಗಟ್ಟಿನೆಲೆ ಕಂಡಿದ್ದಾರೆ. ಅಂತಹವರ ಸಾಲಿಗೆ ಆನಂದ ಬಾಬು ಒಬ್ಬರು. ಆಫೀಸ್ ಬಾಯ್ ಆಗಿದ್ದ ಹುಡುಗನೊಬ್ಬ ನಿರ್ಮಾಪಕನಾಗಿದ್ದೇ ಸಾಹಸ. ಅಂದಹಾಗೆ ಆ ಹುಡುಗ ಈಗ ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾ ನಿರ್ಮಿಸಿ, ಫೆಬ್ರವರಿ 23ಕ್ಕೆ ರಿಲೀಸ್ ಮಾಡಲು ಅಣಿಯಾಗಿದ್ದಾರೆ. ಆ ಕುರಿತು ಒಂದು ವರದಿ
ಇದು ಆನಂದ ಕಥೆ!
ಒಂದು ಕಾಲದಲ್ಲಿ ಆಫೀಸ್ ಬಾಯ್ ಆಗಿ ದುಡಿಯುತ್ತಿದ್ದ ಒಬ್ಬ ಸಾಮಾನ್ಯ ಹುಡುಗ, ಒಂದು ಪ್ರೊಡಕ್ಷನ್ಸ್ ಸಂಸ್ಥೆ ಸ್ಥಾಪಿಸಿ ನಿರ್ಮಾಪಕ ಆಗೋದು ಸುಲಭವಲ್ಲ. ಆದರೆ ಇಲ್ಲೊಬ್ಬ ಹುಡುಗ ಅದು ಸಾಧ್ಯ ಅಂತಾ ಸಾಧಿಸಿ ಬಿಟ್ಟಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ಮೂಲದ ಆನಂದ್ ಅವರ ಮಾತು ಕಡಿಮೆ, ಕೆಲಸ ಜಾಸ್ತಿ. ಯಾವ ಉಸಾಬರಿಗೂ ಹೋಗದ ಆನಂದ್ಪ್ಪ ಅಪ್ಟಪ ಸಿನಿಮಾ ಪ್ರೇಮಿ.
ಸಿನಿಮಾ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉದ್ದೇಶದಿಂದ ಡಿಗ್ರಿ ನಂತರ ಓದಿಗೆ ಗುಡ್ ಬೈ ಹೇಳಿ ಬೆಂಗಳೂರಿಗೆ ಹೊರಟರು.ಅಲ್ಲ ಸಾಕಷ್ಟು ಕಷ್ಟಪಟ್ಟು ಒಂದು ಪ್ರೊಡಕ್ಷನ್ ಯೂನಿಟ್ ನಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಅಲ್ಲೇ “ಲೈಟ್ ಬಾಯ್” ಆಗಿ ಕೆಲಸ ಮಾಡ್ತಾರೆ. ಲೈಟ್ ಬಾಯ್ ಕೆಲಸ ಮಾಡಿಕೊಂಡೆ ಶೂಟಿಂಗ್ ಕೆಲಸಗಳನ್ನು ಕಲಿಯುತ್ತಾ ಹೋಗುತ್ತಾರೆ. ಇವರಿಗೆ ನಿರ್ದೇಶಕನಾಗಿ ಹೆಸರು ಮಾಡಬೇಕು ಎಂಬ ಬಹು ದೊಡ್ಡ ಆಸೆ.
ಒಂದು ದಿನ ನಿರ್ದೇಶಕ ಶಿವಮಣಿಯವರ “ಅಕ್ಕ” ಧಾರಾವಾಹಿಗೆ ಆನಂದ್ ಲೈಟ್ ಹಿಡಿಯುತ್ತಾರೆ. ಬ್ರೇಕ್ ನಲ್ಲೂ ಸೆಟ್ ನಲ್ಲೇ ಇರುತ್ತಿದ್ದ, ಪ್ರತಿಯೊಂದು ವಿಷಯವನ್ನು ಗಮನಿಸುತ್ತಿದ್ದ ಇವರ ಆಸಕ್ತಿಯನ್ನು ಗಮನಿಸಿದ ಶಿವಮಣಿಯವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿಯಾ ಅಂತ ಕೇಳುತ್ತಾರೆ. ಇಷ್ಟು ದಿನ ಇದೇ ಸಮಯವನ್ನು ಕಾಯುತ್ತಿದ್ದ ಆನಂದ್ ಲೈಟ್ ಬಾಯ್ ನಿಂದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾರೆ.
ಈ ಸೀರಿಯಲ್ ನಂತರ ಎಸ್. ನಾರಾಯಣ್ ಅವರ ಸೇವಂತಿ ಸೇವಂತಿ ಚೆಲುವಿನ ಚಿತ್ತಾರ, ಚಂಡ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ,
ನಂತರದ ದಿನಗಳಲ್ಲಿ ಝೀ ಕನ್ನಡ ವಾಹಿನಿಯ “ಯಾರಿಗುಂಟು ಯಾರಿಗಿಲ್ಲಾ” ಕುಣಿಯೋಣು ಬಾರ, ಸೈ, ಬಾಳೇ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡಿ ಅಸೋಸಿಯೇಟ್ ಅನ್ನಿಸಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಆನಂದ್ ಕೆಲಸವನ್ನು ಗುರುತಿಸಿದ “ಶ್ರೀ ಶಂಕರ” ಟಿವಿಯ ಮಾಲೀಕರಾದ “ಜಿ.ಶ್ರೀನಿವಾಸ್ ಹಾಗೂ ಹರಿಕೃಷ್ಣ” ರವರು “ಶ್ರೀ ಶಂಕರ ಟಿವಿ” ಗೆ ಆನಂದ್ ಅವರನ್ನು ಕಾರ್ಯಕ್ರಮ ನಿರ್ಮಾಪಕನಾಗಿ ಬಡ್ತಿ ನೀಡುತ್ತಾರೆ,
ಕೆಲಸವನ್ನು ಮಾಡಿಕೊಂಡೆ ಜೊತೆಗೆ ಇನ್ನೂ ಕಲಿಕೆಯ ದೃಷ್ಟಿಯಿಂದ ಸಂಜೆಯ ವೇಳೆಯಲ್ಲಿ ಅಭಿನಯ ತರಂಗ ಎಂಬ ರಂಗಭೂಮಿಗೆ ಸೇರಿ ಒಂದು ವರ್ಷದ ಕೋರ್ಸ್ ಮಾಡುತ್ತಾರೆ, ನೂರಾರು ಬೀದಿ ನಾಟಕ, ನೂರಾರು ಬೇರೆ ಬೇರೆ ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಒಂದು ಸಂಧರ್ಭದಲ್ಲಿ ನಿರ್ದೇಶಕನಾಗಬೇಕಿದ್ದ ಆನಂದ್ ಅನಿವಾರ್ಯ ಕಾರಣದಿಂದ ನಿರ್ಮಾಪಕನಾಗಿಬಿಡುತ್ತಾರೆ.
2016 ರಲ್ಲಿ ಒಂದು ಚಿತ್ರ ನಿರ್ಮಾಣ ಮಾಡಲು ಹೋಗಿ ಕೈ ಸುಟ್ಟು ಕೊಳ್ಳುತ್ತಾರೆ. ಸೋಲನ್ನು ಅನುಭವಿಸುತ್ತಾರೆ, ಮೈ ತುಂಬ ಸಾಲದ ಹೊರೆ ಬೀಳುತ್ತದೆ.. ಸಾಮಾನ್ಯವಾಗಿ ಸೋಲೋಪ್ಪದ ಆನಂದ ನಂತರ ಛಲ ಬಿಡಲ್ಲ.
2018 ರಲ್ಲಿ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಯಶಸ್ವಿ ಚಿತ್ರವನ್ನು ನಿರ್ಮಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ನಾಗುತ್ತಾರೆ.
2020 ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯಾಧಾರಿತ “ಗುಬ್ಬಿಮರಿ” ಎಂಬ ಚಿತ್ರವನ್ನು ಮಾಡಿ ಚಿತ್ರರಂಗದ ಗಣ್ಯರಿಂದ ಮೆಚ್ಚುಗೆ ಪಡೆಯುತ್ತಾರೆ.
2022 ರಲ್ಲಿ “ಧೈರ್ಯಂ ಸರ್ವತ್ರ ಸಾಧನಂ” ಎಂಬ ದೊಡ್ಡ ಮಟ್ಟದ ಚಿತ್ರವೊಂದನ್ನು ನಿರ್ಮಿಸಿದ್ದಾರೆ ಧೈರ್ಯಂ ಸರ್ವತ್ರ ಸಾಧನಂ ಚಿತ್ರವು ಪೆಬ್ರವರಿ 23ಕ್ಕೆ ಬಿಡುಗಡೆಯಾಗುತ್ತಿದೆ.
ಒಬ್ಬ ಆಫೀಸ್ ಬಾಯ್ ಹುಡುಗ, ಒಬ್ಬ ಲೈಟ್ ಬಾಯ್ ಹುಡುಗ, ಈ ಮಟ್ಟಿಗೆ ನಾಲ್ಕು ಚಿತ್ರಗಳ ನಿರ್ಮಾಣ ಮಾಡಿ ನಿರ್ಮಾಪಕನಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ. ಅದರೆ ಇಷ್ಟು ವರ್ಷಗಳ ಇವನ ಪಯಣದಲ್ಲಿ ಪಟ್ಟಿರುವ ಕಷ್ಟ ಅವರಿಗೆ ಮಾತ್ರ ಗೊತ್ತು.
ಆನಂದ್ ಗೆ ಶ್ರದ್ಧೆ ಇದೆ, ಕಮಿಟ್ ಮೆಂಟ್ ಇದೆ, ಬಡತನದ ಅರಿವಿದೆ, ನಡೆದು ಬಂದ ಹಾದಿಯ ಕಷ್ಟ ಸುಖದ ಅರಿವಿದೆ, ತನ್ನ ಕೆಲಸದ ಬಗ್ಗೆ ಗೌರವವಿದೆ, ಎಲ್ಲಾರೊಳಗೊಂದಾಗುವ ಗುಣವಿದೆ, ಗೆಲ್ಲುವೆ ಎಂಬ ಕಿಚ್ಚಿದೆ,
ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ರಂಗಾಯಣ ರಘು ಹೋಟಲ್ ಭಟ್ಟ ಸುಬ್ಬಣ್ಣನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಸರಳ ಜೀವನಕ್ಕೆ ಅನಿರೀಕ್ಷಿತವಾಗಿ ಬಂದೊಗುವ ಕಷ್ಟ,ತೊಂದರೆಗಳಿಂದ ಮುಕ್ತನಾಗಲೂ ಸುಬ್ಬಣ ಭಟ್ಟ ಎದುರಿಸುವ ಸವಾಲುಗಳು ಹಾಗೂ ಶಾಖಾಹಾರಿ ಹೋಟೆಲ್ ಶಾಖಾಹಾರಿಯಾಗುವ ಬಗೆಯನ್ನು ಇಲ್ಲಿ ಕಾಣಬಹುದು.
ಎಸ್ ಐ ಮಲ್ಲಿಕಾರ್ಜುನ್ ಆಗಿ ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ, ವಿನಯ್ ಯು ಜೆ, ನಿಧಿ ಹೆಗಡೆ, ಹರಿಣಿ ಶ್ರೀಕಾಂತ್, ಸುಜಯ್ ಶಾಸ್ತ್ರಿ, ಪ್ರಶಾಂತ್ ನಟನ, ಶ್ರೀಹರ್ಷ ಗೋಭಟ್, ಪ್ರತಿಮಾ ನಾಯಕ್, ಮೋಹನ್ ಶೇಣಿ, ಶಿಲ್ಪಾ ಶೈಲೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಲೆನಾಡಿನ ತಪ್ಪಲಿನಲ್ಲೇ ಚಿತ್ರೀಕರಣಗೊಂಡ ಈ ಸಿನೆಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರು ನಟಿಸಿದ್ದಾರೆ.
ಶಾಖಾಹಾರಿ ಸಿನೆಮಾದ ಕಥೆ, ಸಂಭಾಷಣೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂದೀಪ್ ಸುಂಕದ್ ಅವರ ಸೂಕ್ಷ್ಮತೆ, ವಿಶ್ವಜಿತ್ ರಾವ್ ಅವರ ಕ್ಯಾಮೆರ ಕೈಚಳಕ ಸಿನೆಮಾಗೆ ಶಕ್ತಿಯಾಗಿರುವುದಲ್ಲದೇ, ಶಶಾಂಕ್ ನಾರಾಯಣ್ ಅವರ ಸಂಕಲನ, ಮಯೂರ್ ಅಂಬೇಕಲ್ಲು ಅವರ ಸಂಗೀತ ಸಿನೆಮಾಗೆ ಪುಷ್ಟಿ ನೀಡಿದೆ.
ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನರವರು ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಶಾಖಾಹಾರಿ ಚಿತ್ರವನ್ನು ನಿರ್ಮಿಸಿದ್ದಾರೆ.
ಶಾಖಾಹಾರಿ ಸಿನಿಮಾದ ಟ್ರೇಲರ್ ಅನ್ನು ಡಾಲಿ ಧನಂಜಯ್ ರವರು ಬಿಡುಗಡೆ ಮಾಡಿ ಮೆಚ್ಚಿದ್ದಾರೆ.
ಫೆಬ್ರವರಿ 16ಕ್ಕೆ ಕರ್ನಾಟಕದಾದ್ಯಂತ ಚಿತ್ರ ತೆರೆಕಾಣಲಿದ್ದು. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.
ಹಿಂದೆಂದೂ ಕಾಣದ ರೀತಿಯಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು.. ಹೊಸತನದ ಈ ಹೊಸಬರ ಚಿತ್ರಕ್ಕೆ ಚಿತ್ರಕಥೆಯೇ ಜೀವಾಳವಾಗಿದೆ, ಮರ್ಡರ್ ಮಿಸ್ಟರಿ ಸಿನೆಮಾ ಇದಾಗಿದ್ದು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಚಿತ್ರತಂಡದ್ದು
ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. ರವಿಕೆ ಪ್ರಸಂಗ ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತನವನ್ನು ನಿರ್ದೇಶಕರು ರವಿಕೆಪ್ರಸಂಗ ಸಿನಿಮಾದಲ್ಲಿ ಮಾಡಿದ್ದಾರೆ.
‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.
ರವಿಕೆ ಪ್ರಸಂಗ ಸಿನಿಮಾವನ್ನು ಮಾಷ್೯ ಡಿಸ್ಟ್ರಿಬ್ಯುಟರ್ಸ್ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ.
ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ.
ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ರವಿಕೆಪ್ರಸಂಗ ರಾಜ್ಯಾದ್ಯಂತ ತೆರೆಕಾಣಲಿದೆ.