“ನನಮೇಲೆ ನನಗೀಗ ಅನುಮಾನ ಶುರುವಾಗಿದೆ…”
– ಇದು ತುಂಬಾ ಜನಪ್ರಿಯ ಗೀತೆ. ನಿರ್ದೇಶಕ ಕುಶಾಲ್ಗೌಡ ನಿರ್ದೇಶನದ “ಕನ್ನಡಕ್ಕಾಗಿ ಒಂದನ್ನು ಹೊತ್ತಿ” ಸಿನಿಮಾದಲ್ಲಿ ಅವರೇ ಗೀಚಿದ ಹಾಡಿದು. ಈ ಹಾಡು ಹಿಟ್ ಆದಷ್ಟು ಸಿನಿಮಾ ಹಿಟ್ ಆಗಲಿಲ್ಲ. ಆದರೆ, ಹಾಡಿನ ಮೂಲಕವೇ ಸಿನಿಮಾ ಬಗ್ಗೆ ಮಾತಾಡುವಂತಾಗಿದ್ದು ಸುಳ್ಳಲ್ಲ.
ಒಂದೊಳ್ಳೆಯ ಕಥೆ, ಚಿತ್ರಕಥೆ, ಮಾತುಕತೆ ಎಲ್ಲವನ್ನೂ ಒಳಗೊಂಡು ಈ ಚಿತ್ರ ಕನ್ನಡಿಗರಿಗೆ ಇಷ್ಟವಾಗಿದ್ದು ದಿಟ. ಈಗ ಈ ಚಿತ್ರದ ಬಗ್ಗೆ ಇಷ್ಟೊಂದ ಪೀಠಿಕೆ ಯಾಕೆ ಗೊತ್ತಾ? ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋದು ಕೃಷಿ ತಾಪಂಡ.
ಸದಾ ಹಸನ್ಮುಖಿಯಾಗಿರುವ ಕೃಷಿ ತಾಪಂಡ, ಪಡ್ಡೆ ಹುಡುಗರ ಹಾಟ್ ಫೇವರೇಟ್ ಕೂಡ ಹೌದು. ಅವರ ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಗಳು ಒಂದಷ್ಟು ಸುದ್ದಿ ಮಾಡುತ್ತಿವೆ. “ಅಕಿರ”, “ಕಹಿ” ಸಿನಿಮಾಗಳಲ್ಲಿ ನಟಿಸಿದ್ದ ಕೃಷಿ ತಾಪಂಡ, ಮೆಲ್ಲನೆ ಬಿಗ್ಬಾಸ್ ಮನೆಗೂ ಎಂಟ್ರಿಯಾಗಿದ್ದರು.
ಸಾಕಷ್ಟು ನಗುವಲ್ಲೇ ಮೋಡಿ ಮಾಡುವ ಕೃಷಿತಾಪಂಡ, ಅವರೀಗ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯಕ್ಕೆ ಒಂದಷ್ಟು ಫೋಟೋಗಳ ಝಲಕ್ ಇಲ್ಲಿದೆ.