ತೆಲುಗು ಸ್ಟಾರ್ ಚಿರಂಜೀವಿ ಹಿರಿಯ ಪುತ್ರಿ ಶ್ರೀಜಾ ಪತಿ ಕಲ್ಯಾಣ್ ದೇವ್ ಹೊಸ ಸಿನಿಮಾ ಘೋಷಣೆಯಾಗಿದೆ. 2018ರಲ್ಲಿ ಕಲ್ಯಾಣ್ ದೇವ್ ‘ವಿಜೇತಾ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿದ್ದರು. 1985ರಲ್ಲಿ ತೆರೆಕಂಡ ಚಿರಂಜೀವಿ ಸೂಪರ್‌ಹಿಟ್ ಸಿನಿಮಾದ ಶೀರ್ಷಿಕೆ ಇದು. ಆದರೆ ಚಿರಂಜೀವಿ ಅಳಿಯನಿಗೆ ಮೊದಲ ಚಿತ್ರದಲ್ಲಿ ಯಶಸ್ಸು ಸಿಗಲಿಲ್ಲ. ಇದಾದ ನಂತರ ಅವರು ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಎರಡೂ ಚಿತ್ರಗಳು ಚಿತ್ರೀಕರಣದ ವಿವಿಧ ಹಂತಗಳಲ್ಲಿವೆ. ಈ ಮಧ್ಯೆ ಅವರ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಈ ರೊಮ್ಯಾಂಟಿಕ್ – ಕಾಮಿಡಿ ಚಿತ್ರದ ಆರಂಭಕ್ಕೆ ಕಲ್ಯಾಣ್ ದೇವ್‌ರ ಒಂದು ವೀಡಿಯೋ ಕೂಡ ಬಂದಿದೆ.
‘ವಿಜೇತಾ’ ಚಿತ್ರದ ನಂತರ ಕಲ್ಯಾಣ್ ರಾಮ್ ಸಹಿ ಹಾಕಿದ್ದ ಸಿನಿಮಾ ‘ಸೂಪರ್ ಮಚ್ಚಿ’. ಈ ಚಿತ್ರದಲ್ಲಿ ಕನ್ನಡತಿ ಡಿಂಪಲ್ ಹುಡುಗಿ ರಚಿತಾ ರಾಮ್ ನಾಯಕಿ. ಇದು ರೊಮ್ಯಾಂಟಿಕ್ ಕಾಮಿಡಿ ಕಥಾನಕ. ಅವರ ಮೊತ್ತೊಂದು ಥ್ರಿಲ್ಲರ್ ಸಿನಿಮಾ ‘ಕಿನ್ನೆರಸಾನಿ’ ಚಿತ್ರೀಕರಣ ಅರ್ಧದಷ್ಟು ಪೂರ್ಣಗೊಂಡಿದೆ. ಶ್ರೀಧರ್ ಸೀಪಾನ ನಿರ್ದೇಶಿಸಲಿರುವ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ಸಂಯೋಜಿಸುತ್ತಿದ್ದಾರೆ.
ರಚಿತಾ ರಾಮ್ ನಾಯಕಿಯಾಗಿರುವ ಕಲ್ಯಾಣ್‌ರ ‘ಸೂಪರ್ ಮಚ್ಚಿ’ ಕಳೆದ ವರ್ಷವೇ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಎಲ್ಲಾ ಲೆಕ್ಕಾಚಾರ ತಲೆಕೆಳಗಾಯ್ತು. ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.