ಕುತೂಹಲ ಇರೋದು, ಮಠ ಸೇರುವಂತಹ ಪರಿಸ್ಥಿತಿ ಅವರೀಗ್ಯಾಕೆ ಬಂತು ಅಂತ . ನಾವ್ ಹೇಳ್ತೀವಿ ಕೇಳಿ ಆ ಕತೆ…
ನಿರ್ದೇಶಕ ಗುರುಪ್ರಸಾದ್ ” ಮಠʼ ಸೇರ್ತಾರಾ ? ಸದ್ಯಕ್ಕೆ ಅದಿನ್ನು ಕನ್ಪರ್ಮ್ ಆಗಿಲ್ಲ. ಆದರೆ ರವೀಂದ್ರ ವಂಶಿ ನಿರ್ದೇಶನದ ಹೊಸ” ಮಠʼ ಚಿತ್ರದಲ್ಲಿ ಗುರುಪ್ರಸಾದ್, ಪ್ರಮುಖ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದರಲ್ಲೂ ಅವರದೇ ನಿರ್ದೇಶನದ “ಮಠʼ ಚಿತ್ರದಲ್ಲಿ ನಟ ಜಗ್ಗೇಶ್ ನಿರ್ವಹಿಸಿದ್ದ ಪಾತ್ರಕ್ಕೆ ಈಗ ಗುರುಪ್ರಸಾದ್ ಅವರೇ ಬಣ್ಣ ಹಚ್ಚುತ್ತಿದ್ದಾರೆನ್ನುವ ಮಾತುಗಳಿವೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ನಿಖರವಾಗಿಲ್ಲ. ಆದರೆ ಹಾಗೊಂದು ಸುದ್ದಿ ಮಾತ್ರ ಹರಿದಾಡುತ್ತಿದೆ.
ಇನ್ನು “ಮಠʼ ಕ್ಕೂ ಗುರು ಪ್ರಸಾದ್ ಅವರಿಗೂ ಅದೇನು ಕನೆಕ್ಟ್ ಅಂತ ವಿವರಿಸಿ ಹೇಳಬೇಕಿಲ್ಲ. ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಜೋಡಿಯ ಸೂಪರ್ ಹಿಟ್ ಸಿನಿಮಾ “ಮಠʼ . ಇದು ಬಂದು ಹೋಗಿದ್ದು ೨೦೦೬ ರಲ್ಲಿ. ಆ ಹೊತ್ತಿಗೆ ಇದು ಸೂಪರ್ ಹಿಟ್ ಸಿನಿಮಾ. ಆದಾಗಲೇ ಜಗ್ಗೇಶ್ ಸ್ಟಾರ್ ನಟರೇ. ಅಷ್ಟಾಗಿಯೂ ಅವರನ್ನು ಇನ್ನೊಂದು ಬಗೆಯಲ್ಲಿ ಈ ಚಿತ್ರ ಪ್ರೇಕ್ಷಕರಿಗೆ ಪರಿಚಯಿಸಿತು.
ಅದರಾಚೆ ನಿರ್ದೇಶಕರಾಗಿ ಗುರುಪ್ರಸಾದ್ ದೊಡ್ಡ ಸಕ್ಸಸ್ ಕಂಡಿದ್ದು ಈ ಚಿತ್ರದ ಮೂಲಕವೇ. ಉಳಿದಂತೆ ಹೊಸ ವಿಷಯಕ್ಕೆ ಬಂದರೆ, ಅದೇ ಮಠ ಈಗ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದೊಂದಿಗೆ ಹೊಸ “ಮಠʼ ವಾಗಿ ರೆಡಿ ಅಗುತ್ತಿದೆ.ಈ ಚಿತ್ರ ಆರಂಭದಲ್ಲಿ ದೊಡ್ಡದಾಗಿ ಸುದ್ದಿ ಅಗಿದ್ದು ಸಾಧು ಕೋಕಿಲ ಎಂಟ್ರಿಯ ಕಾರಣಕ್ಕೆ. ಸಾಧು ಕೋಕಿಲ ಅವರದ್ದು ಇಲ್ಲಿ ಪ್ರಮುಖ ಪಾತ್ರ. ಅಂದ್ರೆ, ಅವರಿಲ್ಲಿ ಬಿಡದಿಯ ಸತ್ಯಾನಂದ. ಅಲ್ಲಿ ಅವರದು “ನಿತ್ಯ ಆನಂದʼ.
ಅದೇ ಕಾರಣಕ್ಕೆ 2020 ಆರಂಭದಲ್ಲಿ ಭರ್ಜರಿ ಸುದ್ದಿ ಆಗಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇನ್ನೇನು ಶುರುವಾಗುವ ಕೊರೋನಾ ಬಂತು. ಹಾಗಾಗಿ ಈ ಸಿನಿಮಾದ ಚಟುವಟಿಕೆಗಳು ಅರ್ಧದಲ್ಲೇ ನಿಂತು ಹೋಗಿದ್ದವು. ಈಗ ಕೊರೋನಾ ನಂತರ ಮತ್ತೆ ಈ ಸಿನಿಮಾಕ್ಕೆ ಚಾಲನೆ ಸಿಗುವುದು ಗ್ಯಾರಂಟಿ ಆಗಿದೆ. ಅದರ ಒಂದು ವಿಷಯ ಈಗ ಹೆಚ್ಚು ಸುದ್ದಿ ಆಗುತ್ತಿದೆ. ಹಳೇ ಮಠದಲ್ಲಿ ಜಗ್ಗೇಶ್ ನಿರ್ವಹಿಸಿದ್ದ ಪಾತ್ರವನ್ನು ಹೊಸ ಮಠದಲ್ಲಿ ನಿರ್ದೇಶಕ ಗುರು ಪ್ರಸಾದ್ ಅವರೇ ನಿರ್ವಹಿಸುತ್ತಿದ್ದಾರೆ ಅಂತ. ಉಳಿದ ವಿವರ ಇಷ್ಟರಲ್ಲಿಯೇ ಗೊತ್ತಾಗಲಿದೆ ಎಂಬುದಾಗಿಯೂ ಮೂಲಗಳು ಹೇಳುತ್ತಿವೆ.