ಮೆಚ್ಚುಗೆ ಪಡೆದಿವೆ ಪುತ್ರ, ಪುತ್ರಿಯೊಂದಿಗಿನ ದಂಪತಿಗಳ ಫೋಟೋ
ದಕ್ಷಿಣ ಭಾರತದ ಹೆಸರಾಂತ ನಟಿ ಸ್ನೇಹಾ ಕನ್ನಡಕ್ಕೇನು ಅಪರಿಚಿತರಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ “ರವಿಶಾಸ್ತ್ರೀʼ ಸಿನಿಮಾ ನೋಡಿದವರಿಗೆ ಸ್ನೇಹಾ ಯಾರೆಂಬುದು ಗೊತ್ತೇ ಇದೆ. ಅಲ್ಲಿಂದ ಪ್ರಕಾಶ್ ರೈ ಅವರ ಒಗ್ಗರಣೆ ಚಿತ್ರದಲ್ಲೂ ಅಭಿನಯಿಸಿದ್ದರು. ಹಾಗೆಯೇ ದರ್ಶನ್ ಅಭಿನಯದʼ ಕುರುಕ್ಷೇತ್ರʼ ಚಿತ್ರದಲ್ಲೂ ಇದ್ದರು. ಇಷ್ಟಕ್ಕೂ ಅವರ ಬಗ್ಗೆ ಇಷ್ಟೇಕ್ಕೆ ಮಾತು ಅಂತ ಕುತೂಹಲ ಇರಬಹುದು, ಅದಕ್ಕೆ ಕಾರಣ ಸದ್ಯಕ್ಕೀಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಅವರ ಪುತ್ರಿಯ ಬರ್ತ್ ಡೇ ಆಚರಣೆ.ತಾರಾ ದಂಪತಿಗಳಾದ ಪ್ರಸನ್ನ ಮತ್ತು ಸ್ನೇಹಾ ಮೊನ್ನೆ ತಮ್ಮ ಪುತ್ರಿ ಆದ್ಯಾಂತಾಳ ಬರ್ತ್‌ಡೇ ಆಚರಿಸಿದ್ದಾರೆ. ಈ ಸಂಭ್ರಮ ತುಂಬಾ ವಿಶೇಷವಾಗಿ ನಡೆದಿದೆ. ಅದರ ಫೋಟೋ ಹಾಗೂ ವಿಡಿಯೋ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
https://www.instagram.com/p/CKdOShuLKOf/?utm_source=ig_web_copy_link
ಪ್ರಸನ್ನ ಹಾಗೂ ಸ್ನೇಹಾ ದಂಪತಿಗಳ ಪುತ್ರಿ ಆದ್ಯಾಂತಾ ಗೆ ಮೊನ್ನೆಯಷ್ಟೇ ಒಂದು ವರ್ಷ ಆಯ್ತು. ಆಕೆಯ ಹುಟ್ಟು ಹಬ್ಬವನ್ನು ಚಿತ್ರರಂಗದ ಆಪ್ತ ಗೆಳೆಯ, ಗೆಳತಿಯರೊಂದಿಗೆ ಪುತ್ರಿಯ ಹುಟ್ಟುಹಬ್ಬ ಆಚರಿಸಿದ್ದಾರೆ ಸ್ನೇಹಾ – ಪ್ರಸನ್ನ.
ನಟಿಯರಾದ ಮೀನಾ, ಪ್ರೀತಾ ವಿಜಯಕುಮಾರ್ ಸೇರಿದಂತೆ ಸ್ನೇಹಾರ ಹತ್ತಾರು ಆಪ್ತ ನಟ -ನಟಿಯರು ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡು ಆದ್ಯಾಂತಾಳನ್ನು ಹರಸಿದ್ದಾರೆ. ಹಾಗೆಯೇ ಸೋಷಲ್ ಮೀಡಿಯಾದಲ್ಲಿ ಅನೇಕರು ಶುಭ ಹಾರೈಸಿರುವುದು ವಿಶೇಷ. ಪ್ರಸನ್ನ ಹಾಗೂ ಸ್ನೇಹಾ ಇಬ್ಬರು ತಾರಾ ದಂಪತಿಗಳು. ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ಕಲಾವಿದರು. ‘ಯಅಚ್ಛಮುಂಡು ಅಚ್ಛಮುಂಡು’ ತಮಿಳು ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಮದುವೆ ನಂತರ ಒಂದಷ್ಟು ಕಾಲ ನಟನೆಯಿಂದ ಗ್ಯಾಪ್ ತೆಗೆದುಕೊಂಡು ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಸ್ನೇಹಾ ಇದೀಗ ಫಿಟ್‌ನೆಸ್ ಕಡೆ ಗಮನ ಹರಿಸಿದ್ದು, ಮತ್ತೆ ಸಾಲು, ಸಾಲಾಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.