ಇನ್ನೊಂದು ಕೇಸ್ ಮೂಲಕ ರಿಷಭ್ ಶೆಟ್ಟಿ ಎಂಟ್ರಿ
ಬೆಲ್ ಬಾಟಂ ಭಾಗ-2 ಸಜ್ಜು
ಬೆಲ್ ಬಾಟಂ…
ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಪಡೆದ ಸಿನಿಮಾ. ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಹೀರೋ ಆಗಿದ್ದರು. ಹರಿಪ್ರಿಯಾ ನಾಯಕಿಯಾಗಿದ್ದರು. ಈ ಚಿತ್ರ ಯಾವಾಗ, ದೊಡ್ಡ ಯಶಸ್ಸು ಪಡೆಯಿತೋ, ಆಗಲೇ ಮತ್ತೊಂದು ಸಿನಿಮಾ ಮಾಡುವ ಕುರಿತು ನಿರ್ದೇಶಕ ಜಯತೀರ್ಥ ಮತ್ತು ಕಥೆಗಾರ ದಯಾನಂದ್ ಯೋಚಿಸಿದ್ದರು.
ಅದರಂತೆ, “ಬೆಲ್ ಬಾಟಂ-2” ಸಿನಿಮಾ ಬರಲಿದೆ ಎಂದು ಹೇಳಲಾಗಿತ್ತು. ಈಗ ಹೊಸ ಸಿನಿಮಾಗೆ ಎಲ್ಲಾ ತಯಾರಿಯೂ ನಡೆದಿದ್ದು, ಜನವರಿ 27ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಅಧಿಕೃತವಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಶೀರ್ಷಿಕೆ ಏನೆಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇಷ್ಟರಲ್ಲೇ ಟೈಟಲ್ ಹೊರಬರಲಿದ್ದು, ಚಿತ್ರದ ಇನ್ನಷ್ಟು ಮಾಹಿತಿಯನ್ನು ಹೊರಹಾಕಲಿದೆ ಚಿತ್ರತಂಡ.