ಕೊರೊನಾ ಬಳಿಕ ರಿಲೀಸ್ ಆಗಲಿರುವ ಮೊದಲ ಸ್ಟಾರ್ ಚಿತ್ರ
ಕೊರೊನಾ ಹಾವಳಿ ನಂತರ ಅತ್ತ, ಚಿತ್ರರಂಗದ ಚಟುವಟಿಕೆಗಳು ಜೋರಾಗಿವೆ. ಈಗಾಗಲೇ ಸಿನಿಮಾಗಳ ಬಿಡುಗಡೆ ಪರ್ವ ಶುರುವಾಗಿದೆ. ಫೆಬ್ರವರಿ 5ಕ್ಕೆ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ” ಚಿತ್ರ ತೆರೆ ಕಾಣುತ್ತಿದೆ ಎಂಬುದು ವಿಶೇಷ. ಕೊರೊನಾ ಬಳಿಕ ರಿಲೀಸ್ ಆಗುತ್ತಿರುವ ಸ್ಟಾರ್ ನಟನ ಮೊದಲ ಸಿನಿಮಾ ಇದು ಎಂಬುದು ಸುದ್ದಿ.
ಚಿತ್ರವನ್ನು ರವಿಗೌಡ್ರು ನಿರ್ದೇಶನ ಮಾಡಿದರೆ, ಚಕ್ರಿ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಧೀರಜ್ ಎಂಟರ್ ಪ್ರೈಸಸ್ ಮೂಲಕ ಮೋಹನ್‌ದಾಸ್ ಪೈ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.
ಸಿನಿಮಾ ರಿಲೀಸ್ ಬಗ್ಗೆ ಮಾತನಾಡುವ ಮೋಹನ್ ದಾಸ್ ಪೈ, “ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಎಲ್ಲೆಡೆಯಿಂದಲೂ
ಒಳ್ಳೆಯ ಮೆಚ್ಚುಗೆ ಬರುತ್ತಿದೆ. ಹೀಗಾಗಿ ಈ ಚಿತ್ರ ಬಿಡುಗಡೆ ಬಗ್ಗೆ ಸಡನ್ ತೀರ್ಮಾನ ಮಾಡಿಕೊಂಡು ರಿಲೀಸ್ ಮಾಡುತ್ತಿದ್ದೇವೆ. ಲೀಡಿಂಗ್ ಸ್ಟಾರ್ ಸಿನಿಮಾ ಇದು. ಹಾಗಾಗಿ ರಿಲೀಸ್ ವಿಚಾರದಲ್ಲೂ ಲೀಡಿಂಗ್ ನಲ್ಲೇ ಇರಬೇಕು.ಬೆಂಬ ಕಾರಣಕ್ಕೆ ಸುಮಾರು 250ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ.
ಎಬಿಸಿಡಿ ಕೆಟಗರಿಯ ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ನಿರ್ಮಾಪಕರಿಗೆ ಸಾಕಷ್ಟು ಸಮಸ್ಯೆ ಇದೆ. ಹಾಗಾಗಿ ಈಗ ಚಿತ್ರವನ್ನು ಸಡನ್ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಶೇ.100ರಷ್ಟು ಗೆಲುವು ಪಡೆಯಲಿದೆ ಎಂಬ ನಂಬಿಕೆ ಇದೆ.
ಸಣ್ಣ ಸೆಂಟರ್‌ಗಳಲ್ಲೂ ಚಿತ್ರ ರಿಲೀಸ್ ಆಗಲಿದೆ.
ಈಗಾಗಲೇ ಚಿತ್ರಮಂದಿರಗಳ ಮಾಲೀಕರ ಜೊತೆ ಮಾತಾಡಿದ್ದೇನೆ. ನಮ್ಮ ನಡುವೆ ಒಳ್ಳೆಯ ಗೆಳೆತನವಿದೆ. ಹಾಗಾಗಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.
ಜನರಿಗೆ ಕೋವಿಡ್‌ನಿಂದ ತಲೆ ಕೆಟ್ಟೋಗಿದೆ. ಅವರಿಗೆ ಮನರಂಜನೆ ಬೇಕು. ಶೇ.50ರಷ್ಟು ಅನುಮತಿ ಇದ್ದರೂ, ಜನರು ಬರುತ್ತಾರೆ ಎಂಬ ವಿಶ್ವಾಸ ಇದೆ. ಈ ಚಿತ್ರವನ್ನು
ಕೋಲಾರ, ಮುಳುಬಾಗಿಲು, ಹೊಸೂರು ಕಡೆಯಲ್ಲೂ ಹಾಕ್ತೀನಿ” ಎಂದು ವಿವರ ಕೊಟ್ಟರು ಮೋಹನ ದಾಸ್ ಪೈ.
ನಟ ವಿನೋದ್ ಪ್ರಭಾಕರ್ ಅವರಿಗೆ “ಶ್ಯಾಡೊ” ಬಿಡುಗಡೆ ಆಗುತ್ತಿರುವುದು ಖುಷಿ ಕೊಟ್ಟಿದೆ. ಆ ಬಗ್ಗೆ ಹೇಳುವ ಅವರು, ರಿಲೀಸ್ ಓಕೆ ಆದರೆ ಎಲ್ಲವೂ ಹರಿಬಿರಿಯಲ್ಲಿದೆ. ಇಂಡಸ್ಟ್ರಿ ಈಗಷ್ಟೇ ಸ್ಟಡಿಯಾಗುತ್ತಿದೆ. ಇಂತಹ ಸಮಯದಲ್ಲಿ ಪ್ರಚಾರವೂ ಅಗತ್ಯ. ಆದರೆ ಬಿಡುಗಡೆ ಸ್ವಲ್ಪ ಬೇಗ ಆಗುತ್ತಿದೆ. ಸ್ವಲ್ಪ ಅವಧಿಯಲ್ಲೇ ಪ್ರಚಾರ ಮಾಡಬೇಕಿದೆ. ಮಾಧ್ಯಮದ ಸಹಕಾರ ಜಾಸ್ತಿ ಬೇಕು ಎಂದು ಮನವಿ ಇಟ್ಟರು.
ಸಿನಿಮಾ ಬಗ್ಗೆ ಮಾತನಾಡಿದ ವಿನೋದ್, “ಮೊದಲ ಸಲ ಕ್ಲಾಸ್‌ನಲ್ಲಿ ಮಾಸ್ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ರವಿಗೌಡ್ರು ಚೆನ್ನಾಗಿ ಮಾಡಿದ್ದಾರೆ. ಶರತ್ ಲೋಹಿತಾಶ್ವ ಅವರು ಸಿನಿಮಾದ ಉದ್ದಕ್ಕೂ ಪೋಲಿಸ್ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ನನ್ನ ಜೊತೆ ಶೋಬಿತಾ ರಾಣಾ ನಾಯಕಿಯಾಗಿದ್ದಾರೆ.
ಚೋಟಾ ಪ್ರಸಾದ್ ಎಡಿಟಿಂಗ್ ಮಾಡಿದ್ದಾರೆ. ಇಲ್ಲಿ ವಿನೋದ್ ಮಾಸ್ಟರ್ ಅದ್ಭುತ ಸಾಹಸ ಮಾಡಿಸಿದ್ದಾರೆ. ನನಗೆ ರೆಗ್ಯುಲರ್ ಆಕ್ಷನ್ ಅನಿಸಲಿಲ್ಲ. ಇಡೀ ಸಿನಿಮಾ ಹೈದರಾಬಾದ್‌ನಲ್ಲಿ ಮಾಡಲಾಗಿದೆ.
ಫೈಟ್ ಸೀನ್ ಗೆ ನಿರ್ದೇಶಕರು ಒಂದೇ ಕ್ಯಾಮೆರಾ ತಂದರು. ಕೇಳಿದ್ದಕ್ಕೆ, “ಇದು ಫೈಟ್ ಅಂತ ಮಾಡ್ತಾ ಇಲ್ಲ. ಸೀನ್ ರೀತಿ ಮಾಡ್ತಾ ಇದೀವಿ” ಅಂದ್ರು ಅವರ ಪ್ಲಾನಿಂಗ್ ಚೆನ್ನಾಗಿತ್ತು.
ಚಿತ್ರದಲ್ಲಿ ಎರಡು ಸಾಂಗ್ ಇದೆ. ಜೊತೆಗೆ ಆಕ್ಷನ್ ಪ್ಯಾಕ್, ಮನರಂಜನೆ ಹೆಚ್ಚು ಇದೆ. ಫೆ.5ಕ್ಕೆ ರಿಲೀಸ್ ಅಂದಾಗ, ಆಡಿಯನ್ಸ್ ಬರ್ತಾರಾ? ಎಂಬ ಅನುಮಾನ ಬಂತು. ಆದರೂ ಅಭಿಮಾನಿಗಳು ಸಿನಿಮಾ ನೋಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.
ಈ ಚಿತ್ರ ನೋಡುಗರಿಗೆ ಬೇರೆ ಫೀಲ್ ಸಿಗುತ್ತೆ. ನೋಡೋಕೆ ಬಂದವರು ಶೇ.100 ರಷ್ಟು ಖುಷಿ ಪಡುತ್ತಾರೆ. ಈ ಸಿನಿಮಾಗೆ ಮಾಲ್ ಆಡಿಯನ್ಸ್ ಜಾಸ್ತಿ ಆಗ್ತಾರೆ, ಯಾಕೆಂದರೆ ಕ್ಲಾಸ್‌ನಲ್ಲಿ ಮಾಸ್ ಸಿನಿಮಾ ಇದು. ಹಾಗಾಗಿ ಯಾರಿಗೂ ನಿರಾಶೆ ಆಗೋದಿಲ್ಲ ಎನ್ನುತ್ತಾರೆ ವಿನೋದ್.
ಚಿತ್ರದಲ್ಲಿ ಕಾಮಿಡಿ ನಟ ಲೋಕೇಶ್ ಕೂಡ ನಟಿಸಿದ್ದು ಸಿನಿಮಾ ರಿಲೀಸ್ ಕುರಿತು ಮಾತನಾಡಿದರು.