ಹೊಸವರ್ಷಕ್ಕೆ ಬಂತು ಮತ್ತೊಂದು ಆಲ್ಬಂ ಸಾಂಗ್, ಸಖತ್ ಆಗಿಯೇ ಮಿಂಚಿದ್ದಾರೆ ಬಿಗ್ ಬಾಸ್ ಖ್ಯಾತಿಯ ನಟಿ

ಕೃತಿಕಾ ರವೀಂದ್ರಗೆ ಸಾಥ್ ಕೊಟ್ಟ ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ

ಸ್ಟಾರ್ ಗಳೇ ಈಗ ಅದ್ದೂರಿ ವೆಚ್ಚದ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗುತ್ತದೆ.ಮೊನ್ನೆ ಮೊನ್ನೆಯಷ್ಟೇ ಲಾಂಚ್ ಆಗಿದ್ದ ಚಂದನ್ ಶೆಟ್ಟಿ ಅವರ ಮ್ಯೂಜಿಕ್ ವಿಡಿಯೋ ಆಲ್ಬಂ‌ನಲ್ಲಿ ನಟಿ ನಿಶ್ವಿಕಾ ನಾಯ್ಡ ಸೊಂಟ ಬಳುಕಿಸಿದ್ದನ್ನು ನೀವು ನೋಡಿದ್ರಿ. ಈಗ ಸುಕೃಶಿ ಕ್ರಿಯೇಷನ್ಸ್ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ಹೊರ ತಂದಿರುವ ಅಂತಹದೇ ಅದ್ದೂರಿ ವೆಚ್ಚದ ಆಲ್ಬಮ್ ಸಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಭರ್ಜರಿ ಯಾಗಿ ಮಿಂಚಿದ್ದಾರೆ.ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಇದೊಂದು ಸಮಾನ ಮನಸ್ಕ ಯುವಕರು ನಿರ್ಮಾಣ ಮಾಡಿರುವ ಅದ್ದೂರಿ ವೆಚ್ಚದ ವಿನೂತನ ವಿಡಿಯೋ ಸಾಂಗ್ ಆಲ್ಬಂ.‌ ಒಲವೇ ಎನ್ನುವ ಹೆಸರಲ್ಲಿ ಹೊರ ಬಂದಿದೆ. ಸಿನಿಮಾ ಹಾಡಿನ ಹಾಗೆಯೇ  ಎಲ್ಲಾ  ರೀತಿಯಲ್ಲೂ ಗುಣಮಟ್ಟದೊಂದಿಗೆ‌ ನಿರ್ಮಾಣವಾಗಿದೆ. ಹಾಗೆಯೇ ನಾನಾ‌ ಬಗೆಯಲ್ಲಿ ಸಿನಿಮೀಯ ರೂಪುರೇಷೆ ಹೊಂದಿದೆ.

ಶಿವಾನಿ

ಯುವ ನಿರ್ದೇಶಕಿ ನಟಿ M S ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಆಲ್ಭಂ ಅದ್ಬುತವಾಗಿ ಮೂಡಿ ಬರುವಲ್ಲಿ ಇವರಿಬ್ಬರ ಕೈಚಳಕ ಕೂಡ ಪ್ಲಸ್ ಆಗಿದೆ.

ಕೆಜಿಎಫ್ ಚಿತ್ರ ದ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋ ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋಸ್ ಈ ಗೀತೆಯನ್ನು ಲಾಂಚ್ ಮಾಡುತ್ತಿದೆ. ಜ.3 ರಿಂದ ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಈ ಹಾಡು ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ವಿಡಿಯೋ‌ಸಾಂಗ್ ಆಲ್ಬಂ ಮೂಲಕ ಸದ್ದು‌ಮಾಡಲು ಹೊರಟಿರುವ ಸುಕೃಶಿ ಸಂಸ್ಥೆ‌ಮುಂದೆ ಸಿನಿಮಾ ನಿರ್ಮಾಣಕ್ಕೂ ಸಿದ್ಧತೆ ನಡೆಸಿದೆ ಎನ್ನುತ್ತಿವೆ ಸಂಸ್ಥೆಯ ಮೂಲಗಳು.

 

Related Posts

error: Content is protected !!