ಜ. 16 ರಿಂದ 24 ರವರೆಗೆ ಗೋವಾ ಚಿತ್ರೋತ್ಸವ
ಕೃಷ್ಣೇಗೌಡ ನಿರ್ಮಾಣ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ ? ‘ ಚಿತ್ರ ಇಂಡಿಯನ್ ಪನೋರಮಾ ಗೆ ಆಯ್ಕೆ ಆಗಿದೆ. ಭಾರತದ ವಿವಿಧ ಭಾಷೆಗಳ ಒಟ್ಟು 23 ಸಿನಿಮಾಗಳ ಪೈಕಿ ಕನ್ನಡದಿಂದ ಆಯ್ಕೆಯಾದ ಒಂದೇ ಒಂದು ಸಿನಿಮಾ ‘ಪಿಂಕಿ ಎಲ್ಲಿ? ‘ ಮಾತ್ರ.
ಇಂಡಿಯನ್ ಪನೋರಮಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮುಂದಿನ ತಿಂಗಳು 16 ರಿಂದ 24 ರವರೆಗೆ ಗೋವಾದಲ್ಲಿ ನಡೆಯುವ ಸಾಧ್ಯತೆಗಳಿವೆ. ಒಂದು ಮೂಲದ ಪ್ರಕಾರ ಇಂಡಿಯನ್ ಪನೋರಮಾ ಚಿತ್ರೋತ್ಸವಕ್ಕೆ ಕನ್ನಡದಿಂದ ನಾಲ್ಕು ಚಿತ್ರಗಳು ಆಯ್ಕೆಯ ಅಂತಿಮ ಹಂತದಲ್ಲಿದ್ದವು. ಈ ಪೈಕಿ ಪಿಂಕಿ ಎಲ್ಲಿ? ಮಾತ್ರ ಅವುಗಳಲ್ಲಿ ಆಯ್ಕೆ ಯಾಗಿರುವುದು ಅಧಿಕೃತ ಗೊಂಡಿದೆ.
ಉಳಿದಂತೆ ಪನೋರಮಾ ಚಿತ್ರದಲ್ಲಿ ಮಲಯಾಳಂ ಚಿತ್ರಗಳಿಗೆ ಭಾರೀ ಆದ್ಯತೆ ಸಿಕ್ಕಿದೆ.ಅನ್ವರ್ ರಷೀದ್ ನಿರ್ದೇಶನ್ ಟ್ರಾನ್ಸ್ ಸೇರಿದಂತೆ ಐದು ಚಿತ್ರಗಳ ಚಿತ್ರೋತ್ಸವಕ್ಕೆ ಸೆಲೆಕ್ಟ್ ಆಗಿವೆ. ವಿಶೇಷ ಅಂದ್ರೆ ತಮಿಳು ಚಿತ್ರರಂಗದಿಂದ ವೆಟ್ರಿಮಾರನ್ ನಿರ್ದೇಶನ ಹಾಗೂಧನುಷ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಅಸುರನ್ ಕೂಡ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಭಾರೀ ಕುತೂಹಲ ಮೂಡಿಸಿದೆ. ಹಾಗೆಯೇ ಗಣೇಶನ್ ವಿನಾಯಕನ್ ಅವರ ಥೈನ್ ಕೂಡ ಸೆಲೆಕ್ಟ್ ಆಗಿದೆ.
ಎಲ್ಲವೂ ಈಗ ಒಳ್ಳೆಯ ದಾಗುತ್ತಿದೆ. ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ.
– ಕೃಷ್ಟೇ ಗೌಡ, ಪಿಂಕಿ ಎಲ್ಲಿ ? ಚಿತ್ರದ ನಿರ್ಮಾಪಕ
ಮರಾಠಿ ಹಾಗೂ ಹಿಂದಿ ಚಿತ್ರಗಳು ಪನೋರಮಾ ಚಿತ್ರೋತ್ಸವದಲ್ಲಿ ಹೆಚ್ಚು ಆದ್ಯತೆ ಪಡೆದಿವೆ. ಗೋವಿಂದ್ ನಿಹಲಾನಿ ನಿರ್ದೇಶನದ’ ಅಪ್ ಅಪ್ಆ್ಯಂಡ್ ಅಪ್’. ನಾನ್ ಪ್ಯೂಚರ್ ವಿಭಾಗದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಫಿಲ್ಮ್ ಮೇಕರ್ ಜಾನ್ ಮ್ಯಾಥ್ಯೂ ಮಥನ್ ನೇತೃತ್ವದ 13 ಜನರ ಜ್ಯೂರಿ ಕಮಿಟಿ ಪ್ಯೂಚರ್ ಫಿಲ್ಮ್ ಸೆಲೆಕ್ಟ್ ಕಮಿಟಿಯಲ್ಲಿತ್ತು.