ಸಕ್ಕತ್ ಮಜಾ ಉಂಟು ಟ್ರೇಲರ್
ಕನ್ನಡದಲ್ಲಿ ವೆಬ್‌ಸೀರೀಸ್‌ಗಳು ಹೊಸದೇನಲ್ಲ. ಈಗಾಗಲೇ ಸಾಕಷ್ಟು ವೆಬ್‌ಸೀರೀಸ್ ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಹನಿಮೂನ್” ಕೂಡ ಸೇರಿದೆ. ಈ ಹೆಸರಲ್ಲೇ ಒಂಥರಾ ಮಜವಿದೆ. ಇನ್ನು, ವೆಬ್‌ಸೀರೀಸ್ ಒಳಗಿರುವ ಕಂಟೆಂಟ್ ಹೇಗಿರಬೇಡ. ಆ ಕಂಟೆಂಟ್ ಹೇಗಿದೆ ಅನ್ನೋದ್ದಕ್ಕೆ ವೆಬ್‌ಸೀರೀಸ್ ತಂಡ ಟ್ರೇಲರ್ ಬಿಡುಗಡೆ ಮಾಡಿದೆ.
ಹೌದು, ಡಾ.ಶಿವರಾಜ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರು ದೊಡ್ಡ ಬಜೆಟ್ ನಲ್ಲಿ ವೆಬ್ ಸೀರೀಸ್ ಶುರು ಮಾಡಿದ್ದ ವಿಷಯ ಎಲ್ಲರಿಗೂ ಗೊತ್ತಿದೆ. ಅದೇ “ಹನಿಮೂನ್” . ಈಗಾಗಲೇ ಈ ವೆಬ್ ಸೀರೀಸ್, ಪೂರ್ಣಗೊಂಡಿದ್ದು ಇಷ್ಟರಲ್ಲೇ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.
ಅದಕ್ಕೂ ಮುನ್ನ “ಹನಿಮೂನ್” ವೆಬ್ ಸೀರೀಸ್ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ಮಜಬೂತಾಗಿದೆ. ಆಗಷ್ಟೇ ಮದುವೆಯಾದ ಜೋಡಿಯೊಂದು ಹನಿಮೂನ್ ಗೆ ಕೇರಳ ಕಡೆ ಹೋದಾಗ, ಅಲ್ಲಿ ನಡೆಯುವ ಒಂದಷ್ಟು ಫಜೀತಿ, ಅಯಾಸ ಇತ್ಯಾದಿ ಕುರಿತ ರಸವತ್ತಾದ ವಿಷಯಗಳಿರುವ ತುಣುಕು ಟ್ರೇಲರ್ ನಲ್ಲಿ ಕಾಣಬಹುದು. ಸದ್ಯಕ್ಕೆ ಆ ಟ್ರೇಲರ್ ಗೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.
ನಿವೇದಿತಾ ಶಿವರಾಜಕುಮಾರ್ ಅವರ ಜೊತೆ ಸಕ್ಕತ್ ಸ್ಟುಡಿಯೊ ಸಹ ನಿರ್ಮಾಣ ಈ ಹನಿಮೂನ್ ವೆಬ್ ಸೀರೀಸ್ ಗಿದೆ.
ಇದು ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ. ಅಂದಹಾಗೆ, ಈ “ಹನಿಮೂನ್” ತೆಲುಗು ಅವತರಣಿಕೆ ವೆಬ್ ಸೀರೀಸ್ ನವೆಂಬರ್ 27ರಂದು ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.
ಸಕ್ಕತ್ ಸ್ಟುಡಿಯೋ ಕ್ರಿಯೇಟಿವ್ ಟೀಮ್, ಈ ವೆಬ್ ಸರಣಿಯ ನಿರ್ದೇಶನದ ಜವಾಬ್ದಾರಿ ಹೊತ್ತಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್, ನಾಗಭೂಷಣ್ ಕೆಲಸ ಮಾಡಿದರೆ, ನಾಗಭೂಷಣ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್ ಸಂಗೀತವಿದೆ. ಶ್ರೀಷ ಕೂದುವಳ್ಳಿ ಹಾಗು ರಾಹುಲ್ ರಾಯ್ ಛಾಯಾಗ್ರಹಣವಿದೆ.
ಆರ್.ಜೆ.ಪ್ರದೀಪ್ ಮತ್ತು ತಂಡ ಈ “ಹನಿಮೂನ್” ಹಿಂದೆ ನಿಂತಿದೆ. ಒಂದೊಳ್ಳೆಯ ಈಗಿನ ಟ್ರೆಂಡ್‌ಗೆ ಬೇಕಾದ ಕಥಾವಸ್ತು ಇಟ್ಟುಕೊಂಡು ಹಾಸ್ಯಭರಿತದೊಂದಿಗೆ ಒಂದಷ್ಟು ಸಂದೇಶ ಸಾರುವ ಈ ವೆಬ್‌ಸರಣಿ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಶಿವರಾಜಕುಮಾರ್ ಅವರ ಪುತ್ರಿ ನಿವೇದಿತಾ ಅವರಿಗೆ ನಿರ್ಮಾಣದ ಕಡೆ ಆಸಕ್ತಿ ಬಂದಿದ್ದೇ ತಡ,ಅವರು ತಮ್ಮ ಬ್ಯಾನರ್‌ನಡಿ ಹೊಸ ಬಗೆಯ ವೆಬ್‌ಸರಣಿ ಮಾಡಬೇಕು ನಿರ್ಧರಿಸಿದ ಹಿನ್ನೆಲೆಯಲ್ಲಿ ಸಿಕ್ಕಿದ್ದೇ, “ಹನಿಮೂನ್” ಕಥಾಹಂದರ.
ಟ್ರೇಲರ್ ನೋಡುವುದಕ್ಕೇ ಒಂದು ಮಜವೆನಿಸಿದರೆ, ಇಡೀ ವೆಬ್‌ಸರಣಿ ಇನ್ನುಹೇಗೆಲ್ಲಾ ಇರಬೇಡ. ಸದ್ಯಕ್ಕೆ, ಟ್ರೇಲರ್ ಟ್ರೆಂಡಿಂಗ್‌ನಲ್ಲಿದೆ. ಈಗಿನ ಯೂಥ್‌ಗೊಂದು ಹೇಳಿಮಾಡಿಸಿದ “ಹನಿಮೂನ್” ವೆಬ್‌ಸರಣಿ ಇದಾಗಿದ್ದು, ಹೊಸತನಕ್ಕೊಂದು ಸಾಕ್ಷಿಯಾಗಲಿದೆ ಎಂಬ ನಂಬಿಕೆ ಹುಟ್ಟಿಸಿದೆ.