ನೋಟಿಗೆ ಓಟು! ಭ್ರಷ್ಟತೆಗೆ ನಾಯಕನ ಚಾಟಿ ಏಟು

ಚಿತ್ರ ವಿಮರ್ಶೆ: ಪ್ರಭುತ್ವ

ನಿರ್ಮಾಣ: ರವಿರಾಜ್

ನಿರ್ದೇಶನ: ರಂಗನಾಥ

ತಾರಾಗಣ: ಚೇತನ್ ಚಂದ್ರ, ಪಾವನ, ಆದಿ ಲೋಕೇಶ್ ಶರತ್ ಲೋಹಿತಾಶ್ವ, ರಾಜೇಶ್ ನಟರಂಗ ಇತರರು.

ಅವನು ಪ್ರಜೆಗಳ ಪರ. ಸಿನಿಮಾ ಕೂಡ ನೋಡುಗರ ಪರ!

ಇಲ್ಲಿ ಬೋಧನೆ ಇದೆ. ತಪ್ಪು ಸರಿಗಳ ವಿಶ್ಲೇಷಣೆಯೂ ಇದೆ. ಒಂದೇ ಮಾತಲ್ಲಿ ಹೇಳುವುದಾದರೆ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಇದು. ಸಮಾಜದ ಅಂಕುಡೊಂಕು ಅಣಕಿಸುವ ಅರಿವಿನ ಸಿನಿಮಾ ಎನ್ನಲ್ಲಡ್ಡಿಯಿಲ್ಲ.

ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸರಿ ಇದೆಯಾ? ಇರಬಹುದು ಇಲ್ಲದೆಯೂ ಇರಬಹುದು. ಆದರೆ ಕಣ್ತರೆಸುವ ಗುಣಗಳು ಇಲ್ಲಿವೆ.

ಇಲ್ಲಿ ಹೋರಾಟವಿದೆ. ಹೊಡೆದಾಟ ಬಡಿದಾಟವೂ ಇದೆ. ನೋಡುಗರಿಗೆ ಪ್ರಶ್ನೆಗಳೂ ಇವೆ. ಪ್ರಶ್ನೆಯ ಜೊತೆ ಮನರಂಜನೆಯ ಓಟವೂ ಇದೆ.

ಕಥೆ ಸಿಂಪಲ್. ನಿರೂಪಣೆ ವಿಶೇಚ ಎನಿಸುತಗತೆ. ಮೆಕಾನಿಕ್ ಕೆಲಸ ಮಾಡುವ ಮನು ಒಬ್ಬ ಪ್ರಾಮಾಣಿಕ ಹುಡುಗ. ಅಪ್ಪನ ಶಿಕ್ಷಣ ಮಗನನ್ನು ಸಾತ್ವಿಕ ವ್ಯಕ್ತಿಯನ್ನಾಗಿಸಿದೆ. ಆದರ್ಶ ಹುಡುಗನಾಗಲು ತಂದೆಯೂ‌ ಕಾರಣ.

ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅವನ ತಂದೆ ಕೆಟ್ಟ ವ್ಯವಸ್ಥೆಗೆ ಬಲಿ ಆಗುತ್ತಾರೆ. ಮುಂದೆ ಅವರ ಮಗ ಅನ್ಯಾಯವನ್ನು ಮೆಟ್ಟಿ ನಿಲ್ಲುವ ಗುಣದಲ್ಲಿ ಹೇಗೆಲ್ಲಾ ಕಾಣುತ್ತಾನೆ ಅನ್ನೋದೆ ವಿಶೇಷ.

ಮೊದಲರ್ಧ ಸಾಗುವ ಕಥೆಯಲ್ಲಿ ಮನರಂಜನೆ ಜೊತೆ ವ್ಯವಸ್ಥೆಯ ದರ್ಶನ ಮಾಡಿಸುತ್ತಾ ಹೋಗುತ್ತೆ. ದ್ಚಿತಿಯಾರ್ಧ ಬೇರೆಯದ್ದೇ ಲೋಕ ಸೃಷ್ಟಿ ಆಗುತ್ತೆ. ಆ ಹೊಸ ಲೋಕದ ಬಗ್ಗೆ ನೋಡುವ ಕುತೂಹಲ ಇದ್ದರೆ ಒಮ್ಮೆ ಸಿನಿಮಾ‌ ನೋಡಬಹುದು.

ಇಲ್ಲಿ ಸಮಾಜ ಮತ್ತು ಪ್ರಜಾ ಪ್ರಭುತ್ವಕ್ಕೆ ಪಾಠ ಹೇಳಿದ ಅಂಬೇಡ್ಕರ್ ಅವರು ಸೇರಿದಂತೆ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ , ಭಗತ್ ಸಿಂಗ್ ಇತರರ ಆದರ್ಶ ಇಲ್ಲಿ ಇಣುಕುತ್ತವೆ.‌ ಸಂಭಾಷಣೆ ರೂಪದಲ್ಲಿ ಅವರೆಲ್ಲರೂ ಇಲ್ಲಿ ನೆನಪಾಗುತ್ತಾರೆ. ಅದನ್ನು ಕಟ್ಟಿಕೊಟ್ಟಿರುವ ರೀತಿ ವಿಶೇಷ ಎನಿಸುತ್ತೆ. ಅದನ್ನು ತೆರೆ ಮೇಲೆ ನೋಡಬೇಕಷ್ಟೆ.

ಕಥೆ ಏನು?

ಅತ್ಯಾಚಾರ ವಿರೋಧಿಸುವ ನಾಯಕ ಒಬ್ಬ ಅಧಿಕಾರಿ ಸಾವಿಗೆ ಕಾರಣವಾಗುತ್ತಾನೆ.ಅಷ್ಟೇ ಅಲ್ಲ, ಇಡೀ ಕಥೆಯ ಉದ್ದಕ್ಕೆ ಭ್ರಷ್ಟರನ್ನು ಬಡಿಯುವ ವೇಳೆ ಮತ್ತೊಂದು ದುರಂತ ಆಗುತ್ತೆ. ಅದೇನು ಅನ್ನೋದು ಸಸ್ಪೆನ್ಸ್.

ಕೊಲೆ ಆರೋಪ ಹೊತ್ತ ಅವನು ಚುನಾವಣೆಗೆ ನಿಲ್ಲುತ್ತಾನೆ. ವಾಸ್ತವ ಜಗತ್ತಿನಲ್ಲಿ ನಡೆಯುವ ಅಂಶಗಳು ಇಲ್ಲಿ ಹೈಲೆಟ್.

ಯಾರು ಹೇಗೆ?


ಚೇತನ್ ಇಲ್ಲಿ ಕಥೆಗೆ ಜಸ್ಟೀಸ್ ನೀಡಿದ್ದಾರೆ. ನಟನೆ ಬಗ್ಗೆ ಮಾತಾಡುವಂತಿಲ್ಲ. ಹರಿಬಿಡುವ ಡೈಲಾಗ್ ಇರಬಹುದು. ಬಾಡಿ ಲಾಂಗ್ವೇಜ್ ಆಗಬಹುದು ಸಾಕಷ್ಟು ಹೊಸತನದಿದ ಕೂಡಿದೆ. ಪಾತ್ರಕ್ಕೆ ತೂಕ ಅವರೇ ಅನ್ನೋದು‌ ಸ್ಪಷ್ಟ. ಅವರ ಹೊಡೆದಾಟದ ದೃಶ್ಯ ನೋಡುಗರಿಗೆ ಖುಷಿ ಕೊಡುತ್ತೆ. ಅಷ್ಟರ ಮಟ್ಟಿಗೆ ಅವರಿಗೆ ಎಲ್ಲದರಲ್ಲೂ ಪಕ್ವತೆ ಇದೆ.

ಪಾವನಾ ಕೂಡ ತುಂಬ ಚೆನ್ನಾಗಿ ಕಾಣುತ್ತಾರೆ. ಜೊತೆಗೆ ಪಾತ್ರಕ್ಕೆ‌ಜೀವ ತುಂಬಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ನಾಜರ್, ರೂಪಾದೇವಿ, ವೀಣಾ ಸುಂದರ್, ಶಶಿಕುಮಾರ್, ಧರ್ಮ, ಯತಿರಾಜ್, ಮುನಿಯಾ, ಪೂಜಾ ಲೋಕೇಶ್ ಗಮನಸೆಳೆಯುತ್ತಾರೆ. ವಿಶೇಷ ಪಾತ್ರದ ಮೂಲಕ ಅಂಬಿಕಾ ಅವರಿಲ್ಲಿ ಇಷ್ಟ ಆಗುತ್ತಾರೆ.
ಎಂದಿನಂತೆ ಶರತ್ ಲೋಹಿತಾಶ್ವ, ಆದಿ ಲೋಕೇಶ್ ಅಬ್ಬರಿಸಿದ್ದಾರೆ. ಡ್ಯಾನಿ, ವಿಜಯ್ ಚೆಂಡೂರ್ ಇತರರು ಪಾತ್ರಕ್ಕೆ ಮೋಸ‌ ಮಾಡಿಲ್ಲ.

ಮೇಘಡಹಳ್ಳಿ ಡಾ.ಶಿವಕುಮಾರ್ ಅವರ ಕಥೆಯಲ್ಲಿ ಹಿಡಿತವಿದೆ. ವಿನಯ್ ಮೂರ್ತಿ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಎಮಿಲ್ ಸಂಗೀತ ವೇಗ ಹೆಚ್ಚಿಸಿದೆ.

Related Posts

error: Content is protected !!