ಚಿತ್ರ ವಿಮರ್ಶೆ
ರೇಟಿಂಗ್ : 3/5
ನಿರ್ಮಾಣ : ಪರಮೇಶ್
ನಿರ್ದೇಶನ : ಎಸ್.ದತ್ತಾತ್ರೇಯ
ಪ್ರೀತಿ ಪ್ರೇಮ ನಡುವೆ ದ್ವೇಷ…. ಇದಿಷ್ಟು ಹೇಳಿದರೆ ಗೊತ್ತಾಗುತ್ತೆ ಸಿನಿಮಾದ ತಾತ್ಪರ್ಯ. ಹೌದು ಪ್ರಣಯಂ ಒಂದು ಹೊಸ ಬಗೆಯ ಲವ್ ಸ್ಟೋರಿ. ಹಾಗೆ ಹೇಳುವುದಾದರೆ, ನಾಯಕ, ನಾಯಕಿಯರ ಮಧ್ಯೆ ಪ್ರೇಮಾಂಕುರವಾಗುತ್ತೆ. ಇನ್ನೇನು ಬದುಕು ಕಟ್ಟಿಕೊಳ್ಳಬೇಕೆಂಬ ಉತ್ಸಾಹದಲ್ಲಿರೋ ಜೋಡಿ ನಡುವೆ ದುಷ್ಟನೊಬ್ಬನ ಆಗಮನವಾಗುತ್ತೆ. ಮುಂದಾ…? ಏನಾಗುತ್ತೆ ಅನ್ನೋದೇ ಪ್ರಣಯಂ ಕಥಾಹಂದರ.
ಹಾಗಾದರೆ, ಅವರಿಬ್ಬರು ಒಂದಾಗುವುದುಲ್ಲವೇ? ಇಬ್ಬರೂ ಒಂದಾದರೂ ಅಲ್ಲೊಂದು ಟ್ವಿಸ್ಟ್ ಎದುರಾಗುತ್ತೆ. ಅಲ್ಲೊಂದು ಸಣ್ಣ ಸಂಘರ್ಷಕ್ಕೆ ಕಾರಣವಾಗುತ್ತೆ. ಈ ಸನ್ನಿವೇಷವಷ್ಟೇ ಅಲ್ಲ, ಸಿನಿಮಾದ ಹಲವು ಸನ್ನಿವೇಷಗಳು ಮನಸ್ಸಿಗೆ ಮುದಕೊಡುತ್ತವೆ. ಹೇಗೆ ಅನ್ನೋದನ್ನು ಒಮ್ಮೆ ಪ್ರಣಯಂ ನೋಡಲೇಬೇಕು.
ಗೌತಮನ ಅತ್ತೆಯ ಮಗಳು ಅಮೃತಾ ಇವರಿಬ್ಬರಿಗೂ ಮದುವೆ ಗೊತ್ತಾಗುತ್ತೆ. ನಂತರ ಅವರಿಬ್ಬರ ಓಡಾಟ ಮತ್ತು ಒಡನಾಟದ ಸನ್ನಿವೇಶಗಳೇ ಬೇರೆ. ಹೀಗಿರುವಾಗಲೇ ಅವನ ಪ್ರೇಯಸಿಯ ಮೇಲೆ ಒಬ್ಬನ ಕಣ್ಣು ಬೀಳುತ್ತೆ. ಅಲ್ಲೊಂದಷ್ಟು ನೋವು ಅನುಭವಿಸಬೇಕಾಗುತ್ತೆ. ಕ್ಲೈಮ್ಯಾಕ್ಸ್ ವೇಳೆಗೆ ಹೊಸದೊಂದು ಟ್ವಿಸ್ಟ್ ಸಿಗುತ್ತೆ. ಅಲ್ಲೊಂದು ಲವ್ ಸ್ಟೋರಿ ತೆರೆದುಕೊಳ್ಳುತ್ತೆ. ಆಮೇಲೇನಾಗುತ್ತೆ ಅನ್ನೋದಕ್ಕೆ ಸಿನಿಮಾ ನೋಡಬೇಕು.
ಸಿನಿಮಾದ ಹೈಲೆಟ್ ಅಂದರೆ ಸಂಗೀತ ಮತ್ತು ಛಾಯಾಗ್ರಹಣ.
ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮತ್ತು ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲೋ ಒಂದು ಕಡೆ ಕಥೆ ಬೇರೆಡೆ ಸಾಗುತ್ತಿದೆಯಾ ಅನ್ನುತ್ತಿದ್ದಂತೆ, ಅಲ್ಲಿ ಸಂಗೀತ ಮತ್ತದೇ ಟ್ರಾಕ್ ಗೆ ತಂದು ಬಿಡುತ್ತದೆ.
ಇನ್ನು, ರಾಜವರ್ಧನ್ ಅವರಿಲ್ಲಿ ಆಕರ್ಷಣೀಯ. ಅವರ ಅಭಿನಯ ಮತ್ತು ಸ್ಟಂಟ್ ಗಳಿಂದ ಗಮನ ಸೆಳೆಯುತ್ತಾರೆ. ಎಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ.
ನೈನಾ ಗಂಗೂಲಿ ಕೂಡ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ತೆರೆ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳೆಲ್ಲವೂ ಪಾತ್ರಕ್ಕೆ ನ್ಯಾಯ ಸಲ್ಲಿಸಿವೆ. ಹಾಸ್ಯ ಕಲಾವಿದ ಗೋವಿಂದೇಗೌಡ, ಖಳನಟ ರಾಘವ ನಾಯಕ್ , ಪವನ್ ಸೂರ್ಯ ಇಷ್ಟವಾಗುತ್ತಾರೆ.
ಕೊನೆಯಲ್ಲಿ ಒಂದು ಮಾತು ಹೇಳೋದಾದರೆ, ಒಂದೊಳ್ಳೆಯ ಮನರಂಜನಾತ್ಮಕ ಕಥೆವಿಲ್ಲಿದೆ. ಎಲ್ಲಾ ವರ್ಗ ಕುಳಿತು ನೋಡಲು ಮೋಸವಿಲ್ಲ. ಕಥೆಗೆ ಪೂರಕವಾಗಿಯೇ ಹಾಡುಗಳು ಗುನುಗುವಂತಿವೆ.