ಇಬ್ಬರು ನಾಯಕಿಯರ ಜೊತೆಯಾದ ಅದಿತಿ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಚಿತ್ರ “ತ್ರಿಬಲ್ ರೈಡಿಂಗ್ “ಗೆ ಚಾಲನೆ ಸಿಕ್ಕಿದ್ದು ಗೊತ್ತೇ ಇದೆ. ಈಗಾಗಲೇ ಆ ಚಿತ್ರಕ್ಕೆ ಇಬ್ಬರು ನಾಯಕಿಯರಿರುವ ವಿಷಯವೂ ಗೊತ್ತಿದೆ. ಈಗ ಮತ್ತೊಬ್ಬ ನಾಯಕಿಯ ಎಂಟ್ರಿಯಾಗಿದೆ. ಹೌದು, ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಈಗಾಗಲೇ “ಜೊತೆ ಜೊತೆಯಲಿ” ಧಾರಾವಾಹಿ ಖ್ಯಾತಿಯ ಮೇಘನಾಶೆಟ್ಟಿ ಮತ್ತು “ಲವ್ ಮಾಕ್ಟೇಲ್” ಚಿತ್ರದಲ್ಲಿ ಗಮನ ಸೆಳೆದ ಹುಡುಗಿ ರಚನಾ ಇಂದರ್ ಕೂಡ ಇದ್ದಾರೆ. ಈಗ ಅವರೊಂದಿಗೆ ಅದಿತಿ ಪ್ರಭುದೇವ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, “ತ್ರಿಬಲ್ ರೈಡಿಂಗ್” ಹೆಸರಿಗೆ ತಕ್ಕಂತೆ ಮೂವರು ನಾಯಕಿಯರನ್ನು ಹೊಂದಿದೆ. ಗಣೇಶ್ ಈಗ ಈ ಮೂವರು ನಾಯಕಿಯರನ್ನು ಕೂರಿಸಿಕೊಂಡು ಪಯಣ ಬೆಳೆಸಲು ಅಣಿಯಾಗಿದ್ದಾರೆ. ಇದೊಂದು ಹಾಸ್ಯದ ಜೊತೆಯಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಹೊಂದಿದೆ. ಈ ಚಿತ್ರದಲ್ಲಿ ಸಾಧುಕೋಕಿಲಾ, ಕುರಿ ಪ್ರತಾಪ್, ರವಿಶಂಕರ್ ಸೇರಿದಂತೆ ಹಲವರು ಇದ್ದಾರೆ.