ಚಿತ್ರ ನಿರ್ದೇಶಕರಾದ ಸಿದ್ದು ವಜ್ರಪ್ಪರಿಗೆ ಉತ್ತಮ ಕಥೆ ಬರಹಗಾರ ಮತ್ತು ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಹಿರಿಯ ನಟ ಡಾ. ಚಿಕ್ಕಹೆಜ್ಜಾಜಿ ಮಹದೇವ್ ನೀಡಿ ಗೌರವಿಸಿದ್ದಾರೆ.
ಚೈತನ್ಯ ಫೌಂಡೇಶನ್ ಕರ್ನಾಟಕ, ಕನಕಪೀಠ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ ನಡೆದ ಧಾರವಾಡ ನುಡಿ ಸಡಗರ ಚಲನಚಿತ್ರೋತ್ಸವ ಪ್ರಶಸ್ತಿ -2023 ಕಾರ್ಯಕ್ರಮದಲ್ಲಿ ರಾವುತ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ರಾವುತ ಚಿತ್ರಕಥೆ ಗೆ ದೊರಕಿದ ಈ ಪ್ರಶಸ್ತಿಯು ಏಳು ಜನ ಪರಿಶೀಲಕರಿಂದ ದೊರಕಿದ ಪ್ರಶಸ್ತಿ ಆಗಿದೆ. ತಮ್ಮಣ್ಣ ಬಡಿಗೇರ್, ಚಂದ್ರಶೇಖರ ಹನುಮಗೌಡ ಕನಕ ಪೀಠ ಮುಂತಾದವರು ಪ್ರಶಸ್ತಿ ಪರಿಶೀಲನಾ ಸಮಿತಿಯಲ್ಲಿ ಇದ್ದರು.
ಚಿತ್ರದ ಕತೆಯು ಗುರುಶಿಷ್ಯರ ಸಂಗಮದಲ್ಲಿ, ಮರಣದ ನಂತರದ ಆದಿಯನ್ನು ತೋರುವ ಕಥೆ ಇದೆ. ಅಲ್ಲದೆ ಎರಡು ಉಪಕಥೆಗಳು ಈ ಸಿನಿಮಾದಲ್ಲಿ ಇವೆ. ಆ ಕತೆಗಳು ಆಯೋಜಕರಿಗೆ ತುಂಬಾ ಹಿಡಿಸಿವೆ. ಜೀವನದ ಮೂಲ ಅಂಶಗಳನ್ನು ಪ್ರತಿ ದೃಶ್ಯದಲ್ಲೂ ತೋರಿಸಿದ್ದು ಪರಿಶೀಲಕರಿಗೆ ಖುಷಿ ತಂದಿದೆ. ಕಥೆಯ ಬಿಗಿಯಾಗಿದ್ದು ಈ ಚಿತ್ರಕ್ಕೆ ಜೀವ ಎಂದು ನಿರ್ದೇಶಕರನ್ನು ಪರಿಶೀಲನಾ ಸಮಿತಿ ಬೆನ್ನು ತಟ್ಟಿದೆ.
ಶ್ರೀ ವಿಶ್ವಕರ್ಮ ಸಿನಿಮಾಸ್ ಅಡಿಯಲ್ಲಿ ಈರಣ್ಣ ಸುಭಾಸ್ ಬಡಿಗೇರ್ ನಿರ್ಮಾಣ ಮಾಡಿದ್ದಾರೆ. ನಾಯಕ ರಾಜ ಪ್ರವೀಣ್, ನಾಯಕಿ ಭವಾನಿ ಇನ್ನೂಳಿದ ಕಲಾವಿದರು, ರಾಘವ್ ಗೌಡಪ್ಪ ಮಾರೇಶ್ ಕನಕಗಿರಿ ನರಸಿಂಹಮೂರ್ತಿ ಇವರ ನಟನೆ ಚೆನ್ನಾಗಿ ಮೂಡಿ ಬಂದಿದೆ. ಸಂಗೀತ ಸುಚಿನ್ ಶರ್ಮ, ಸಂಕಲನ, ಅರವಿಂದ್, ಕಲೆ ಲಷ್ಮಿಕಾಂತಜೋಶಿ ಅವರದ್ದು ಆಗಿದೆ.
ಚಿತ್ರದ ಹಾಡುಗಳು ಪೂರ್ಣವಾಗಿದ್ದು ಪ್ರಖ್ಯಾತ ಆಡಿಯೋ ಕಂಪನಿಯಲ್ಲಿ ಬಿಡುಗಡೆಗೊಳ್ಳಲ್ಲಿವೆ, ಚಿತ್ರವು ನವಂಬರ್ ಅಂತ್ಯದಲ್ಲಿ ಬಿಡುಗಡೆ ಆಗಲಿದೆ ಚಿತ್ರ ನಿರ್ದೇಶಕರು ಸಿದ್ದುವಜ್ರಪ್ಪ ತಿಳಿಸಿದ್ದಾರೆ.