“ಸಲಗ” ಚಿತ್ರದ ಮೂಲಕ ಜನಮನ ಗೆದ್ದಿರುವ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ನೈಜಘಟನೆ ಆಧಾರಿತ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕೆ “ಭೀಮ” ಎಂದು ಹೆಸರಿಡಲಾಗಿದೆ. ದುನಿಯಾ ವಿಜಯ್ ಈ ಚಿತ್ರದಲ್ಲಿ ನಿರ್ದೇಶನದೊಂದಿಗೆ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.
ಕರುನಾಡ ಚಕ್ರವರ್ತಿ ಶಿವ
ರಾಜಕುಮಾರ್ ಅಭಿನಯದ “ಭೈರಾಗಿ” ಚಿತ್ರವನ್ನು ನಿರ್ಮಿಸುತ್ತಿರುವ ಕೃಷ್ಣ ಸಾರ್ಥಕ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. “ಸಲಗ” ಚಿತ್ರದ ವಿತರಕ ಜಗದೀಶ್ ಗೌಡ ಅವರು ಸಹ ಕೃಷ್ಣ ಸಾರ್ಥಕ್ ಅವರೊಂದಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
“ಟಗರು” ಖ್ಯಾತಿಯ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ.
ಮಹಾಶಿವರಾತ್ರಿಯ ಶುಭದಿನದಂದು “ಭೀಮ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.