ಜನರಿಗೆ ಮನರಂಜನೆ ಬೇಕು. ಕಿರುತೆರೆಯಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳ ಬರುತ್ತಿವೆ. ಆ ಸಾಲಿಗೆ ಈಗ ಸುವರ್ಣ ವಾಹಿನಿ ಹೊಸ ಮನರಂಜನೆಗೆ ಸಜ್ಜಾಗಿದೆ. ಹೌದು ಈ ಭಾನುವಾರ ಸಂಜೆ 5.30ಕ್ಕೆ ಭರ್ಜರಿ ಮನರಂಜನೆ ಕೊಡುತ್ತಿದ್ದು ಆ ಮಾಹಿತಿ ಇಲ್ಲಿದೆ…..
ನಗುವನ್ನ ಮರೆತೋರನ್ನ ನಗುವಿನ ಲೋಕಕ್ಕೆ ಕೊಂಡೊಯ್ಯೋ ಕೆಲಸ ಮಾಡೋಕೆ ಸ್ಟಾರ್ ಸುವರ್ಣ ವಾಹಿನಿ ರೆಡಿಯಾಗಿದೆ. ಹಾಸ್ಯಕ್ಕೆ ಹೊಸ ದಿಕ್ಕುಕೊಟ್ಟ ಹಾಸ್ಯ ಕುಟುಂಬಗಳ ಸಮಾಗಮ. ಸ್ಟಾರ್ ಗಳ ದೈನಂದಿನ ಚಟುವಟಿಕೆ ಮರೆತು ಮನಸಾರೆ ನಕ್ಕು ಹೋದ ಸ್ಟಾರ್ ಸುವರ್ಣದ ಕಾಮಿಡಿ ಉತ್ಸವದ ತೇರು ಇದೀಗ ಕರ್ನಾಟಕದ ಮನೆಮನೆಗಳಲ್ಲಿರುವ ನೋವನ್ನು ಮರೆಸಿ ನಗುವಿನ ಟಾನಿಕ್ ಕೊಡೋಕೆ ಸುವರ್ಣ ಕಾಮಿಡಿ ಸ್ಟಾರ್ ಗಳ ಜೊತೆ ಇದೇ ವಾರ ನಿಮ್ಮ ಮನೆಗೆ ನಗುವನ್ನು ಹೊತ್ತು ತರಲು ತಯಾರಾಗಿದ್ದಾರೆ.
ಗಾನಬಜಾನ ಸೀಸನ್ 2
ರಿಯಾಲಿಟಿ ಶೋಗಳನ್ನು ಕನ್ನಡಿಗರಿಗೆ ಪರಿಚಯಿಸುವ ಮುಖಾಂತರ ಕನ್ನಡಿಗರಿಗೆ ಹೊಸ ಬಗ್ಗೆಯ ಮನರಂಜನೆನ್ನು ಪರಿಚಯಿಸಿದ ನಿಮ್ಮ ಸ್ಟಾರ್ ಸುವರ್ಣ ಈಗ ಮತ್ತೆ ಹೊಸತಂದು ರಿಯಾಲಿಟಿ ಶೋನ ನಿಮ್ಮ ಮುಂದೆ ತರುವ ತಯಾರಿಯಾಲ್ಲಿದೆ. ವೀಕೆಂಡ್ ಆಯ್ತೆಂದ್ರೆ ಜನ ಮಾಲು ,ಸಿನಿಮಾ ಅಂತ ಸುತ್ತೋ ಗೋಜನ್ನ ಕಮ್ಮಿ ಮಾಡಿ ಇಡೀ ಕರ್ನಾಟಕವನ್ನ ಮನೆಯಲ್ಲಿ ಕೂರಿಸಿ, ಆಡಿಸೋ ಕೆಲಸಕ್ಕೆ ಕೈ ಹಾಕಿರೋ ಸ್ಟಾರ್ ಸುವರ್ಣ, ಸೀಸನ್ 1 ರ ಯಶಸ್ಸಿನ ನಂತರ ಇದೀಗ ಮತ್ತೆ ಕನ್ನಡಿಗರನ್ನ ರಂಜಿಸುವ ಉದ್ದೇಶದಿಂದ ಬರುತ್ತಿದೆ. ಗಾನಬಜಾನ ಸೀಸನ್ 2. ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳನ್ನ ನಿಮ್ಮ ಮನೆಯ ಟಿವಿ ಮುಖಾಂತರ ನಿಮ್ಮ ಹತ್ತಿರಕ್ಕೆ ತರುವ ಪ್ರಯತ್ನ ಇದೇ ಜನವರಿ 9 ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ಮಾಡಲಿದೆ.
ಆ್ಯಂಕರ್ ನಿರಂಜನ್ ನಿರೂಪಣೆಯ ಕಾರ್ಯಕ್ರಮದಲ್ಲಿ ನಗುವಿನ ಕೊರತೆ ಇರುವುದಿಲ್ಲ. ಅಂತೆಯೆ ಮೊದಲ ಸಂಚಿಕೆಯಲ್ಲಿ ಕರುನಾಡಿನ ಅಧ್ಯಕ್ಷ ಶರಣ್ ಪಾಲ್ಗೊಳ್ಳಲಿದ್ದು, ಇಡೀ ಕಾರ್ಯಕ್ರಮ ಪೈಸಾ ವಸೂಲ್ ಮನರಂಜನೆಯೊಂದಿಗೆ ಕರುನಾಡನ್ನು ರಂಜಿಸುವುದರೊಂದಿಗೆ ಇಡೀ ಮನೆಮಂದಿಯನೆಲ್ಲಾ ಒಂದೆಡೆ ಸೇರಿಸಿ ಸೆಲೆಬ್ರಿಟಿಗಳೊಂದಿಗೆ ನಿಮ್ಮನ್ನು ಆಡಿಸೋ, ಹಾಡಿಸೋ ಕೆಲಸ ಇನ್ನೇನು ಶುರುವಾಗಲಿದೆ.