ನಟಿ ಹರ್ಷಿಕಾ ಪೊಣಚ್ಚ ಹೊಸ ವರ್ಷದಲ್ಲೊಂದು ಹೊಸ ಸಿನಿಮಾ ಸುದ್ದಿ ಕೊಟ್ಟಿದ್ದಾರೆ. ಅವರೀಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದು ಭೋಜ್ ಪುರಿ ಭಾಷೆಯ ಚಿತ್ರ.
ಹೌದು ಆ ಚಿತ್ರಕ್ಕೆ ಹೊಸ ವರ್ಷದಲ್ಲಿ ಲಂಡನ್ ನಲ್ಲಿ ಮುಹೂರ್ತ ನೆರವೇರಿದೆ.ಆ ಚಿತ್ರಕ್ಕೆ ‘ಸನಮ್ ಮೇರೆ ಹಮ್ರಾಜ್’ ಎಂದು ಹೆಸರಿಡಲಾಗಿದೆ.
ಹರ್ಷಿ ಸಿನಿಮಾ ನಿರ್ಮಾಣ ಚಿತ್ರಕ್ಕಿದೆ. ಬಂಟಿ ಅವರ ನಿರ್ದೇಶನವಿದೆ. ಮಹೇಶ್ ಕ್ಯಾಮರಾ ಹಿಡಿಯಲಿದ್ದಾರೆ. ಅಭಯ್ ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ರಿತೇಶ್ ಪಾಂಡೆ ಹೀರೋ ಆಗಿದ್ದಾರೆ. ಅವರು ಭೊಜ್ ಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್. ಸಹಜವಾಗಿಯೇ ಹರ್ಷಿಕಾ ಅವರಿಗೆ ಖುಷಿ ಇದೆ. ಇನ್ನು, ಇದು ಅವರ ಮೂರನೇ ಭೋಜ್ ಪುರಿ ಚಿತ್ರ.
ಕನ್ನಡದ ಹುಡುಗಿ ಈಗ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಹೊಸ ಬಗೆಯ ಕಥೆ ಮೂಲಕ ಹರ್ಷಿಕಾ ತಮ್ಮದ್ದೊಂದು ಛಾಪು ಮೂಡಿಸುತ್ತಿದ್ದಾರೆ.