ಕ್ರಾಂತಿ' ಚಾಲೆಂಜಿಂಗ್ ಚಕ್ರವರ್ತಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಡಿಬಾಸ್ ಸಿನಿಕರಿಯರ್ನ 55ನೇ ಚಿತ್ರ. ಟೈಟಲ್ನಿಂದಲೇ ಮಾಯಲೋಕದಲ್ಲಿ ನಯಾ ಮೇನಿಯಾ ಶುರುವಿಟ್ಟುಕೊಂಡಿರುವ
ಕ್ರಾಂತಿ’ ಸಿನಿಮಾ ಈಗಾಗಲೇ ಬಾರ್ಡರ್ ಕ್ರಾಸ್ ಮಾಡಿ ಹವಾ ಎಬ್ಬಿಸಿರೋದು ಮಾತ್ರ ಸುಳ್ಳಲ್ಲ. ಸದ್ದುಗದ್ದಲವಿಲ್ಲದೇ ಸೈಲೆಂಟಾಗಿಯೇ ಸುನಾಮಿ ಎಬ್ಬಿಸುತ್ತಿರುವ `ಕ್ರಾಂತಿ’, ಬೆಳ್ಳಿತೆರೆಗೆ ಅಪ್ಪಳಿಸುವಾಗ ಚಂಡಮಾರುತದ ಅಲೆ ಎಬ್ಬಿಸೋದು ಸತ್ಯ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳನ್ನು ಕೊಡಬಹುದು. ಅದನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಪ್ರಸ್ತಾಪಿಸ್ತೇವೆ. ಸದ್ಯಕ್ಕೆ, ಡಿಬಾಸ್ ಕ್ರಾಂತಿಯ ಕಿಚ್ಚು ಹೈದ್ರಬಾದ್ ಅಂಗಳಕ್ಕೂ ಹಬ್ಬಿರುವುದು ಮತ್ತು ಸ್ಯಾಂಡಲ್ವುಡ್ ಸುಲ್ತಾನನ ಜೊತೆ ಸೆಣಸಾಡುತ್ತಿರುವ ಆ ಚಾಂಪಿಯನ್ ಕುರಿತ ಸಖತ್ ಸುದ್ದಿಯನ್ನು ಹೊತ್ತು ತಂದಿದ್ದೇವೆ.
ಡಿಬಾಸ್ ಅಭಿಮಾನಿಗಳಿಗೆ ಕ್ರಾಂತಿ' ಸಿನಿಮಾ ಬಗ್ಗೆ ಕಂಪ್ಲೀಟ್ ಅಪ್ಡೇಟ್ ತಿಳಿದಿರುತ್ತೆ. ಆದ್ರೂ ಕೂಡ ಸ್ಯಾಂಡಲ್ವುಡ್ ಬೆಳ್ಳಿತೆರೆಯ ಯಜಮಾನ್ರು, ಬಾಕ್ಸ್ಆಫೀಸ್ ಪಾಲಿನ ಸುಲ್ತಾನರ ಅಪ್ಕಮ್ಮಿಂಗ್ ಸಿನಿಮಾದ ಅಪ್ಡೇಟ್ ಕುರಿತು ಗಾಂಧಿನಗರಕ್ಕೆ ಒಂದು ರಿಪೋರ್ಟ್ ಸಲ್ಲಿಸಬೇಕು. ಹೀಗಾಗಿ,
ಕ್ರಾಂತಿ’ಯ ಅಂಗಳದಲ್ಲಿ ಏನ್ ನಡೀತಿದೆ, ಕ್ರಾಂತಿ'ಯ ಹವಾ ಹೆಂಗಿದೆ,
ಕ್ರಾಂತಿ’ ಅಖಾಡಕ್ಕೆ ಹೊಸದಾಗಿ ಯಾರು ಎಂಟ್ರಿಕೊಟ್ಟರು, `ಕ್ರಾಂತಿ’ ಯಾವ್ ಹಂತದಲ್ಲಿದೆ? ಹೀಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು ಮತ್ತು ತಿಳಿಸಬೇಕು ಎನ್ನುವ ಕಾರಣಕ್ಕೆ ಈ ಸುದ್ದಿ.
ಕ್ರಾಂತಿ' ಸೆಟ್ಟೇರಿದ ಕ್ಷಣದಿಂದಲೇ ಡಿಬಾಸ್ ಫ್ಯಾನ್ಸ್ ನ ಮಾತ್ರವಲ್ಲ ಗಾಂಧಿನಗರದ ಮಂದಿಯನ್ನೂ ಕುರ್ಚಿಯ ತುದಿಗೆ ತಂದು ಕೂರಿಸಿರುವ ಸಿನಿಮಾ. ಕ್ರೇಜ್ಗೆ ಅಪ್ಪನಪ್ಪನಪ್ಪನ ಪಟ್ಟ ಅಲಂಕರಿಸಿರುವ ಚಕ್ರವರ್ತಿಯನ್ನು ಹಾಕಿಕೊಂಡು ಸಿನಿಮಾ ತೆಗೆಯುತ್ತಿರುವುದರಿಂದ
ಕ್ರಾಂತಿ’ ಮೇಲಿನ ನಿರೀಕ್ಷೆ ಕನ್ಯಾಕುಮಾರಿಯವರೆಗೂ ವಿಸ್ತರಣೆಗೊಂಡಿದ್ದಾಗಿದೆ. ಮತ್ತೆ ಒಂದಾಗಿರುವ ಯಜಮಾನ ಚಿತ್ರತಂಡ ಸ್ಯಾಂಡಲ್ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾದಲ್ಲೇ ಕ್ರಾಂತಿ' ಮಾಡ್ತೀವಿ ಎಂದು ಸಿಡಿದೆದ್ದು ಫೀಲ್ಡಿಗಿಳಿದಿದ್ದಾಗಿದೆ. ಬುಲ್ಬುಲ್ ಜೋಡಿ ಮತ್ತೆ ಒಂದಾಗಿರುವುದು ಕೂಡ
ಕ್ರಾಂತಿ’ ಮೇಲಿನ ಕೌತುಕವನ್ನು ಹೆಚ್ಚಿಸಿದೆ.
ಕಂಠೀರವ ಸ್ಟುಡಿಯೋ, ಟೊರಿನೋ ಫ್ಯಾಕ್ಟ್ರಿ ಸೇರಿದಂತೆ ಬೆಂಗಳೂರಿನ ಹಲವು ಸ್ಟುಡಿಯೋಗಳಲ್ಲಿ ಅದ್ದೂರಿ ಸೆಟ್ ಹಾಕಿ ಕ್ರಾಂತಿ'ಯ ಕೆಂಡದಂತಹ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿಕೊಂಡ ಫಿಲ್ ಟೀಮ್ ಈಗ ಹೈದ್ರಬಾದ್ಗೆ ಲಗ್ಗೆ ಇಟ್ಟಿದೆ. ರಾಮೋಜಿ ಫಿಲ್ಮ್ಸ್ ಸಿಟಿಯಲ್ಲಿ ಕೋಟಿ ಸೆಟ್ನಲ್ಲಿ ಕಾದಾಟದ ಸನ್ನಿವೇಶಗಳನ್ನು ಕ್ಯಾಪ್ಚರ್ ಮಾಡಿಕೊಳ್ಳುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ’ ಕಾಂಪಿಟೇಷನ್ನಲ್ಲಿ ಮೂರು ಭಾರಿ ಚಾಂಪಿಯನ್ ಆದಂತಹ, ಗ್ಲೋಬಲ್ ಪವರ್ ಲಿಫ್ಟಿಂಗ್'ನಲ್ಲಿ ಐದು ಭಾರಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಂತಹ
ರಾಘವೇಂದ್ರ ಎಚ್.ಎಸ್’ ಅವರು `ಕ್ರಾಂತಿ’ ಚಿತ್ರತಂಡ ಸೇರಿಕೊಂಡಿದ್ದಾರೆ. ಡಿಬಾಸ್ ಜೊತೆ ಖಳನಾಯಕನಾಗಿ ಕಾದಾಡುತ್ತಿದ್ದಾರೆ. ರಾಮೋಜಿಯಲ್ಲಿ ಇವರಿಬ್ಬರ ಕಾಂಬಿನೇಷನ್ ಕಾಳಗದ ಚಿತ್ರೀಕರಣ ನಡೆಯುತ್ತಿದೆ. ಉಳಿದಂತೆ ಇತರೆ ಖಡಕ್ ವಿಲನ್ಗಳ ಖದರ್ ಇನ್ನಷ್ಟೇ ಹೊರಬೀಳಬೇಕಿದೆ.
ಇನ್ನೂ ಕ್ರಾಂತಿ' ಚಿತ್ರದ ಅಪ್ಡೇಟ್ಗಾಗಿ ಕಾಯ್ತಿರುವವರಿಗೆ ಸಾರಥಿ ಯಾವ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಾರೆ? ಯಾವ ಕ್ಷೇತ್ರವನ್ನು ಮುಖ್ಯವಾಗಿಟ್ಟುಕೊಂಡು ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ? ಈ ಕೂತೂಹಲದ ಪ್ರಶ್ನೆ ಮೂಡಿರುತ್ತೆ. ಇದಕ್ಕೆ ಮುಹೂರ್ತದ ಸಂದರ್ಭದಲ್ಲೇ ಖಾಸಗಿ ಮಾಧ್ಯಮಕ್ಕೆ ಮಾತನಾಡುತ್ತಾ ದಚ್ಚು ಹೇಳಿಕೊಂಡಿದ್ದಾರೆ.
ಯಜಮಾನ’ ಸಿನಿಮಾದಲ್ಲಿ ಅಡುಗೆ ಎಣ್ಣೆಯ ವಿಚಾರದಲ್ಲಿ ಕ್ರಾಂತಿಯಾಗಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಈಗ `ಕ್ರಾಂತಿ’ ಸಿನಿಮಾ ಮೂಲಕ ಅಕ್ಷರ ಕ್ರಾಂತಿ ಆಗೋದನ್ನು ನೋಡ್ತೀರ ಎಂದು ಭರವಸೆ ಕೊಟ್ಟಿದ್ದಾರೆ. ಸರಸ್ವತಿಯ ಪುತ್ರ ವಿ.ಹರಿಕೃಷ್ಣ ಹಾಗೂ ತಂಡ ಸೇರಿಕೊಂಡು ಚಾಲೆಂಜಿಂಗ್ ಚಕ್ರವರ್ತಿಯ ಮುಖೇನ ರೆವಲ್ಯೂಷನ್ ತರಲಿಕ್ಕೆ ಹೊರಟಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಸಿನಿಮಾಗೆ ನಿರ್ಮಾಪಕಿ ಶೈಲಜಾ ನಾಗ್ ಕೋಟಿ ಕೋಟಿ ಬಂಡವಾಳ ಸುರಿಯುತ್ತಿದ್ದಾರೆ.
ಸದ್ಯಕ್ಕೆ ಕ್ರಾಂತಿ' ಚಿತ್ರೀಕರಣ ಹೈದ್ರಬಾದ್ನಲ್ಲಿ ಭರದಿಂದ ಸಾಗುತ್ತಿದೆ. ಅಲ್ಲಿಂದ ಶೂಟಿಂಗ್ ಮುಗಿಸಿಕೊಂಡು ಮತ್ಯಾವ ಸ್ಥಳಕ್ಕೆ ಚಿತ್ರತಂಡ ಲಗ್ಗೆ ಇಡಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ,
ಕ್ರಾಂತಿ’ ಫಿಲ್ಮ್ ಟೀಮ್ನ ಸ್ಪೀಡ್ ನೋಡ್ತಾಯಿದ್ರೆ ದಚ್ಚು ಬರ್ತ್ ಡೇಗೆ ಟೀಸರ್ ಬಿಡುಗಡೆಯಾಗೋದು ಪಕ್ಕಾ ಎನಿಸ್ತಿದೆ. ಯಜಮಾನರ ಕೋಟ್ಯಾಂತರ ಭಕ್ತರು ಹಬ್ಬ ಮಾಡಿ ಸಂಭ್ರಮಿಸಲಿಕ್ಕೆ ಮತ್ತು ಕಾಲರ್ ಪಟ್ಟಿ ಎಗರಿಸಲಿಕ್ಕೆ `ಕ್ರಾಂತಿ’ಟೀಸರ್ ಅಥವಾ ಮೇಕಿಂಗ್ ವಿಡಿಯೋ ಸಾಥ್ ಕೊಡಲಿದೆ ಎನ್ನುವ ವಿಶ್ವಾಸವಿದೆ. ಜೊತೆಗೆ ದಚ್ಚು ಹುಟ್ಟುಹಬಬ್ಬದಂದು ಮತ್ತೊಂದು ಹೊಸ ಸಿನಿಮಾದ ಅನೌನ್ಸ್ ಮೆಂಟ್ ನಿರೀಕ್ಷೆ ಮಾಡಬಹುದು. ದಾಸನ ಆಪ್ತಸ್ನೇಹಿತರ ವಲಯದ ಒಬ್ಬರಿಗೆ ಡಿಬಾಸ್ ಕಾಲ್ಶೀಟ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಆ ಬಗ್ಗೆ ಬರ್ತ್ಡೇ ದಿನದಂದು ಬಿಗ್ಅಪ್ಡೇಟ್ ಹೊರಬೀಳಲಿದೆ. ಫೆಬ್ರವರಿ ೧೬ರ ದಿನಗಣನೆ ಶುರುವಾಗಿದ್ದು, ಚಕ್ರವರ್ತಿ ಬರ್ತ್ಡೇ ಆಚರಣೆಗೆ ಅಭಿಮಾನಿ ಬಳಗ ಎದುರುನೋಡ್ತಿದೆ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ