ಅಭಿಮಾನಿ ದೇವರುಗಳನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಐಪಿ ಗಳು ಎಂದು ಕರೆಯೋದು ನಿಮ್ಮೆಲ್ಲರಿಗೂ ಗೊತ್ತಿದೆ. ಇಂತಿಪ್ಪ ವಿಐಪಿಗಳಿಗೆ ಬಹದ್ದೂರ್ ಗಂಡು ‘ ಮಾರ್ಟಿನ್’ ಚಿತ್ರದ ಮೂಲಕ ಡಬ್ಬಲ್ ಟ್ರೀಟ್ ಕೊಡುವುದಕ್ಕೆ ಹೊರಟಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಜಗತ್ತಿನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟಕ್ಕೂ, ಈ ಸುದ್ದಿ ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ? ಆದರೆ, ಮಾರ್ಟಿನ್ ಮೂವೀಯಲ್ಲಿ ಆಕ್ಷನ್ ಪ್ರಿನ್ಸ್ ದ್ವಿಪಾತ್ರದಲ್ಲಿ ಧಗಧಗಿಸ್ತಾರೆ ಎನ್ನುವ ಸುದ್ದಿ ಮಾತ್ರ ಜೋರಾಗಿದೆ. ಬಜಾರ್ ನಲ್ಲಿ ಈ ಬಡಾಬ್ರೇಕಿಂಗ್ ನ್ಯೂಸ್ ಸೆನ್ಸೇಷನ್ ಸೃಷ್ಟಿ ಮಾಡ್ತಿರುವಾಗಲೇ ಸ್ವತಃ ಧ್ರುವ ಸರ್ಜಾ ಜಿಮ್ ನಲ್ಲಿ ಮೈ ಬೆವರಿಳಿಸ್ತಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಹಂಚಿಕೊಂಡಿರುವ ವಿಡಿಯೋ ನೋಡುಗರನ್ನು ದಂಗಾಗಿಸುತ್ತಿದೆ. ದೇಹ ದಂಡಿಸುವ ವಿಚಾರದಲ್ಲಿ ಮೇಲುಗೈ ಸಾಧಿಸುವ ಧ್ರುವ ಒನ್ಸ್ ಅಗೇನ್ ‘ ಮಾರ್ಟಿನ್’ ಚಿತ್ರಕ್ಕಾಗಿ ಭಾರೀ ವರ್ಕೌಟ್
ಮಾಡಿ ವಿಐಪಿಗಳನ್ನು ಮಾತ್ರವಲ್ಲ ಸಕಲರನ್ನೂ ದಿಗ್ ದಿಗ್ಭ್ರಾಂತರನ್ನಾಗಿ ಮಾಡುತ್ತಿದ್ದಾರೆ. ಅದ್ದೂರಿ ಹುಡುಗನ ಈ ಭರ್ಜರಿ ವರ್ಕೌಟ್ ನ ನೋಡಿದರೆ
ಡಬ್ಬಲ್ ಟ್ರೀಟ್ ಕೊಡಲಿಕ್ಕೋಸ್ಕರವೇ ಈ ರೀತಿಯಾಗಿ ದೇಹ ದಂಡಿಸುತ್ತಿದ್ದಾರೆ ಎನಿಸುತ್ತೆ.
ನಿಜಕ್ಕೂ ಡ್ಯುಯೆಲ್ ರೋಲ್ ನಲ್ಲಿ ಧ್ರುವ ಕಿಚ್ಚು ಹಚ್ಚುತ್ತಾರಾ!? ಈ ಕೂತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ಕೊಡಬೇಕು. ಸದ್ಯಕ್ಕೆ, ಗೌಪ್ಯತೆ ಕಾಯ್ದುಕೊಂಡಿರುವ ಈ ನ್ಯೂಸ್ ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶನವಿದ್ದು, ಉದಯ್. ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಗೆ ವೈಭವಿ ಶಾಂಡಿಲ್ಯ ಜೋಡಿಯಾಗಿದ್ದಾರೆ.
ಅತೀ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಮೂಡಿಬರುತ್ತಿದೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ