ಎಸ್. ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼಆರ್ ಅರ್ ಆರ್ʼ ಟ್ರೇಲರ್ ಲಾಂಚ್ಗೆ ಕೊನೆಗೂ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ಡಿಸೆಂಬರ್ 9 ಕ್ಕೆ ಕರ್ನಾಟಕದಲ್ಲೂ ಆರ್ ಆರ್ ಆರ್ ಚಿತ್ರದ ಟ್ರೇಲರ್ ದಾಖಲೆಯ ಹಾಗೆ ಲಾಂಚ್ ಆಗಲಿದೆ. ಕನ್ನಡ ಚಿತ್ರ ರಂಗದ ಇತಿಹಾಸದಲ್ಲೇ ಇದೇ ಮೊದಲು ಎನ್ನುವ ಹಾಗೆ, ಆರ್ ಆರ್ ಆರ್ ಟ್ರೇಲರ್ ಒಟ್ಟು 30 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿಯೇ ಲಾಂಚ್ ಆಗುತ್ತಿದೆ. ಸಿನಿಮಾ ರಿಲೀಸ್ ಮಾದರಿಯಲ್ಲಿಯೇ ಚಿತ್ರ ತಂಡ ಟ್ರೇಲರ್ ಲಾಂಚ್ ಮಾಡುತ್ತಿದೆ.
ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಊರ್ವಶಿ ಚಿತ್ರ ಮಂದಿರ ಮೊದಲ್ಗೊಂಡು ಮಾಗಡಿ ರಸ್ತೆಯ ಅಂಜನ್, ಆಗರದ ತಿರುಮಲ, ಜೆ.ಪಿ. ನಗರದ ಸಿದ್ದೇಶ್ವರ, ಎಂಜಿ ರಸ್ತೆಯ ಶಂಕರ್ ನಾಗ್, ಸ್ಯಾಂಕಿ ರಸ್ತೆಯ ಕಾವೇರಿ, ಆರ್.ಟಿ. ನಗರದ ರಾಧಾಕೃಷ್ಣ ಸೇರಿದಂತೆ ಬೆಂಗಳೂರಿನ ಆಚೆಯೂ ಅಂದರೆ ಕೋಲಾರ, ಚಿಕ್ಕಬಳ್ಳಾಪುರ, ಮುಳುಬಾಗಿಲು, ದೊಡ್ಡ ಬಳ್ಳಾಪುರ, ಮೈಸೂರು, ವಿಜಿಪುರ, ದಾವಣಗೆರೆ, ಬಳ್ಳಾರಿ, ಹೊಸಪೇಟೆ, ಸಿರಗುಪ್ಪ ಸೇರಿದಂತೆ ತೆಲುಗು ಪ್ರಭಾವ ಇರುವ ರಾಜ್ಯದ ೩೦ ಚಿತ್ರಮಂದಿರಗಳಲ್ಲಿ ಟ್ರೇಲರ್ ಲಾಂಚ್ಗೆ ಚಿತ್ರದ ವಿತರಣೆಯ ಹಕ್ಕು ಪಡೆದಿರುವ ಕೆವಿಎನ್ ಸಂಸ್ಥೆ ಪ್ಲಾನ್ ಹಾಕಿಕೊಂಡಿದೆ.
ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನೇ ಒಂದು ಹಬ್ಬದ ರೀತಿಯಲ್ಲಿ ಗ್ರಾಂಡ್ ಆಗಿ ಲಾಂಚ್ ಮಾಡಲು ಮುಂದಾಗಿರುವ ಚಿತ್ರ ತಂಡ ಚಿತ್ರ ರಿಲೀಸ್ ಅನ್ನು ಇನ್ನೇಗೆ ಸಂಭ್ರಮಿಸಬಹುದು ಅನ್ನೋದು ಸಹಜವಾಗಿಯೇ ಭಾರೀ ಕುತೂಹಲ ಹುಟ್ಟಿಸಿದೆ. ಇನ್ನು ಆರ್ ಆರ್ ಆರ್ ಟ್ರೇಲರ್ ಲಾಂಚ್ಗೆ ಈ ಮುಂಚೆಯೇ ಅಂದರೆ ಡಿಸೆಂಬರ್ 4ಕ್ಕೆ ದಿನ ನಿಗದಿ ಆಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಂದೇ ಈ ಟ್ರೇಲರ್ ರಿವೀಲ್ ಆಗಲಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಅದು ಪೋಸ್ಟ್ ಪೋನ್ಡ್ ಆಗಿತ್ತು.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ