ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೇರ್ ಕಟ್ ಮಾಡಿಸಿದ್ದಾರೆ. ಅರೆ, ಹೇರ್ ಕಟ್ ಮಾಡಿಸಿದ್ರಲ್ಲೇನು ಅಂತ ವಿಶೇಷ ಅಂತ ಗುರ್ ಅನ್ಬೇಡಿ, ಅವರು ಎರಡು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಉದ್ದನೆಯ ತಲೆ ಕೂದಲನ್ನು ಈಗ ಎರಡು ಕಾರಣಕ್ಕಾಗಿ ಕಟ್ ಮಾಡಿಸಿಕೊಡಿದ್ದಾರೆ. ಒಂದು ಅವರು ಮುಂದೆ ಅಭಿನಯಸಲಿರುವ ಬಹುನಿರೀಕ್ಷಿತ ಮಾಫಿಯಾ ಚಿತ್ರಕ್ಕಾಗಿ. ಇನ್ನೊಂದು ಕಾರಣ ಒಂದು ಸಾಮಾಜಿಕ ಉದ್ದೇಶಕ್ಕಾಗಿ. ಅವರೆಡು ಕಾರಣಕ್ಕೆ ಈಗ ಹೇರ್ ಕಟ್ ಮಾಡಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್ ಮಾಫಿಯಾ ಜಗತ್ತಿಗೆ ಇಳಿಯಲು ಸಜ್ಜಾಗಿದ್ದಾರೆ. ಅದಕ್ಕಾಗಿಯೇ ಈಗ ಹೊಸ ಲುಕ್ ನೊಂದಿಗೆ ಸಖತ್ ಪೋಸು ನೀಡಿರುವುದು ಕೂಡ ಇಲ್ಲಿ ವಿಶೇಷವೇ ಹೌದು. ಅವರ ಈ ನಯಾ ಅವತಾರದ ಬಗ್ಗೆ ಆಮೇಲೆ ಹೇಳ್ತೀವಿ, ಈಗ ಅವರು ಹೇರ್ ಕಟ್ ಮಾಡಿಸಿ, ದಾನ ಮಾಡಿದ ಕಥೆ ಕೇಳಿ.
ಈಗ ಕೂದಲು ದಾನದ ಬಗ್ಗೆ ನೀವೇ ಕೇಳಿಯೇ ಇರುತ್ತೀರಿ, ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ಸೆಲಿಬ್ರಿಟಿಗಳು ಕೂದಲು ದಾನ ಮಾಡುವುದೀಗ ಒಂಥರ ಟ್ರೆಂಡ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ನಟ ಧ್ರುವ ಸರ್ಜಾ ಕೂಡ ತಾವು ʼಪೊಗರುʼ ಚಿತ್ರದ ರಗಡ್ ಲುಕ್ ಗೆ ಅಂತ ದಟ್ವಾಗಿ ಬೆಳೆಸಿದ್ದ ತಲೆ ಕೂದಲು ಕತ್ತರಿಸಿ, ಅದನ್ನು ಕ್ಯಾನ್ಸರ್ ರೋಗಿಗಳಿಗೆ ದಾನವಾಗಿ ಕೊಟ್ಟಿದ್ದರು. ಅದೇ ರೀತಿ ಸಾಕಷ್ಟು ನಟರು ಕೂಡ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ತಮ್ಮ ಬಹುನಿರೀಕ್ಷಿತ ʼಮಾಫಿಯಾʼ ಚಿತ್ರದ ಅವತಾರಕ್ಕೆ ಅಂತ ನಟ ಪ್ರಜ್ವಲ್ ದೇವರಾಜ್ ಕಳೆದ ಎರಡು ವರ್ಷಗಳಿಂದ ದಟ್ಟವಾಗಿ ಬೆಳೆಸಿದ್ದ ಉದ್ದನೆಯ ತಲೆ ಕೂದಲಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ಹಾಗೆಯೇ ಆ ಕೂದಲನ್ನು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇನ್ನು ʼಮಾಫಿಯಾʼ ಪ್ರಜ್ವಲ್ ದೇವರಾಜ್ ಅಭಿನಯದ35 ಚಿತ್ರ. “ಮಮ್ಮಿ”ಹಾಗೂ “ದೇವಕಿ”ಚಿತ್ರಗಳ ಖ್ಯಾತಿಯ ಲೋಹಿತ್ ಇದರ ನಿರ್ದೇಶಕ. ಹಾಗೆಯೇ ಪ್ರಜ್ವಲ್ ದೇವರಾಜ್ ಅವರಿಗೆ ಇಲ್ಲಿ ನಟಿ ಅದಿತಿ ಪ್ರಭುದೇವ್ ಜೋಡಿ. ಈ ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದೆ. ಚಿತ್ರೀಕರಣ ಡಿಸೆಂಬರ್ 6 ರಿಂದ ಆರಂಭವಾಗಲಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಸಂಭಾಷಣೆ ಹಾಗೂ ತರುಣ್ ಛಾಯಾಗ್ರಹಣ ವಿದೆ.
- ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ