ಮಂಡಳಿ ನೋಂದಣಿಗೆ ಮಾನ್ಯತೆ ಇಲ್ಲವೇ? ಸೆನ್ಸಾರ್ ಮಂಡಳಿ ಮಾತು ಕೇಳಿ ಕಕ್ಕಾಬಿಕ್ಕಿಯಾದ ಗೋಧ್ರಾ ಚಿತ್ರತಂಡ
ನಟ ನೀನಾಸಂ ಸತೀಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಗೋಧ್ರಾ’. ಟೈಟಲ್ ಜತೆಗೆ ಅದು ಒಂದು ವಿಭಿನ್ನ ಕಥಾ ಹಂದರದ ಕಾರಣಕ್ಕೆ ಸಾಕಷ್ಟು ಸದ್ದು ಮಾಡಿತ್ತು. ಹಾಗೆಯೇ ಅದರ ಪೋಸ್ಟರ್ ಗಳಂತೂ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.ಆದರೆ ಈಗ ಚಿತ್ರ ತಂಡವೇ ಒಂದು ಸುದ್ದಿ ಹೊರ ಹಾಕಿದೆ. ನಟ ನೀನಾಸಂ ಸತೀಶ್ ಅಭಿಮಾನಿಗಳ ಪಾಲಿಗೆ ಇದು ನಿಜಕ್ಕೂ ಬೇಸರದ ಸುದ್ದಿ. ಯಾಕಂದ್ರೆ ಸಾಕಷ್ಟು ಸುದ್ದಿಯಾಗಿದ್ದ ‘ಗೋಧ್ರಾ ‘ ಟೈಟಲ್ ಬದಲಾಗಿದೆ. ಮುಂದೆ ಈ ಚಿತ್ರ ‘ಗೋಧ್ರಾನ್ ‘ ಹೆಸರಲ್ಲಿ ಚಿತ್ರೀಕರಣ ಮುಗಿಸಿ, ಬಿಡುಗಡೆ ಆಗಲಿದೆ.
ಟೈಟಲ್ ಬದಲಾವಣೆಗೆ ಅದೇ ಕಾರಣ….
ಚಿತ್ರದ ಸೆನ್ಸಾರ್ ಅಂತ ಇತ್ತೀಚೆಗೆ ಚಿತ್ರ ತಂಡ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದೆ. ಅಂತೆಯೇ ಸೆನ್ದಾರ್ ಮಂಡಳಿಯ ಸದಸ್ಯರು, ಚಿತ್ರ ವೀಕ್ಷಿಸಿದ ನಂತರ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಸೂಚಿಸಿದ್ದಾರೆ. ಅವರ ಪ್ರಕಾರ ಚಿತ್ರದಲ್ಲಿನ ಕೆಲವು ವಿಷಯವೇ ಅದಕ್ಕೆ ಕಾರಣ.
ಚಿತ್ರದ ನಿಲುವು, ಕಥಾವಸ್ತು ಮತ್ತು ನೇರವಂತಿಕೆಯ ಕೆಲವು ವಿಷಯಗಳ ಕುರಿತಾದ ಆಕ್ಷೇಪಣೆ ಅವರದು.
ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆ ಬಂತುಎನ್ನುವುದು ಚಿತ್ರ ತಂಡದ ಮಾತು.
‘ಕೆಲವೊಮ್ಮೆನೇರ- ನಿಷ್ಟುರ ಮಾತುಗಳು ಕಹಿಯಾಗಿರುತ್ತವೆ. ನಮ್ಮ ಸಿನಿಮಾ ವಿಚಾರದಲ್ಲೂ ಹಾಗೆ ಆಗಿದೆ. ಗೋಧ್ರಾ ಘಟನೆಗೂ, ನಮ್ಮ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ .ಆದರೆ ಸೆನ್ಸಾರ್ ಮಂಡಳಿ ಸದಸ್ಯರುಮತ್ತು ಅಧಿಕಾರಿಗಳಿಗೆ ಅದೇ ಅನುಮಾನ.ಅದು ಹಾಗಲ್ಲ ಅಂತ ನಾವು ಮನವಿ ಮಾಡಿದೆವು. ವಸ್ತು ಸ್ಥಿತಿ ಏನು ಅಂತ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು.ಆದರೆ ಅವರು ನಮ್ಮಮನವಿ ಪುರಸ್ಕರಿಸಲಿಲ್ಲ’ ಎನ್ನುವ ಬೇಸರ , ಸಿಟ್ಟು ಚಿತ್ರ ತಂಡದ್ದು.
ನಮಗೊಂದು ಅನುಮಾನ ಇದೆ…
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯಲ್ಲಿ ನಾವು ಚಿತ್ರದ ಟೈಟಲ್ ನೋಂದಣಿ ಮಾಡಿಸಿದ್ದೇವೆ. ಗೋಧ್ರಾ ಹೆಸರಲ್ಲೇ ಅದು ನೋಂದಣಿ ಆಗಿದೆ. ವಾಣಿಜ್ಯ ಮಂಡಳಿ ಕೂಡ ಅದಕ್ಕೆ ಅನುಮತಿ ನೀಡಿದೆ. ಅನುಮೋದಿ ತ ಮತ್ತು ನೋಂದಾಯಿಸಿದ ಈ ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸೆನ್ಸಾರ್ ಮಂಡಳಿ ( ಸಿಬಿಎಫ್‌ಸಿ) ಹೇಳುವುದು ಮಂಡಳಿ ಹೇಳುವುದು ಎಷ್ಟು ಸರಿ? ಅಷ್ಟೇ ಅಲ್ಲ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಗೊಂಡ ಟೈಟಲ್ ಗೆ ಯಾವುದೇ ಸಿಂಧುತ್ವ ಇಲ್ಲ ಅಂತ ಸೆನ್ಸಾರ್‌ಹೇಳಿತು. ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡಲು ಅಂತಹ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ ಸಿ ಒಪ್ಪಬೇಕಿಲ್ಲ ಎಂದು ಮಂಡಳಿಯು ಹೇಳಿದಾಗ ಅಚ್ಚರಿ ಮತ್ತು ಅಘಾತವಾಯಿತು. ಹಾಗಾದ್ರೆ ಇದರ ಸತ್ಯಾಸತ್ಯತೆ ಏನು? ವಾಣಿಜ್ಯ ಮಂಡಳಿ ಉತ್ತರಿಸಬೇಕಿದೆ ಎನ್ನುವುದು ಚಿತ್ರ ತಂಡದ ಮನವಿ.
ಹಣ ಹಾಕಿದವರ ಗತಿಯೇನು?
ಸಿನಿಮಾದ ಹೆಸರು ಬದಲಾಯಿಸುವುದಾಗಿ ನಾವು ಸೆನ್ಸಾರ್ ಮಂಡಳಿಗೆ ಭರವಸೆ ನೀಡಿದ್ದೇವೆ. ಆದರೆ ಈ ಹೆಸರು ಬದಲಾಯಿಸುವ ಮೂಲಕ ನಾವು ಈಗ ಅನುಭವಿಸಬೇ ಕಾದ ಎಲ್ಲಾ ನಷ್ಟಗಳನ್ನು ಯಾರು ಸರಿದೂಗಿಸಲಿದ್ದಾರೆ? ಕಳೆದ ಎರಡು ವರ್ಷಗಳಲ್ಲಿ ನಾವು ಕೈಗೊಂಡ ಎಲ್ಲ ಪ್ರಚಾರದ ಗತಿಯೇನು? ವಾಣಿಜ್ಯ ಮಂಡಳಿಯೇ ನಮಗೆ ಧೈರ್ಯ ತುಂಬಬೇಕಿದೆ. ಆಗಿರುವ ಈ ಗೊಂದಲ ತಿಳಿಗೊಳಿಸಬೇಕಿದೆ. ಜವಾಬ್ದಾರಿಯುತ ಚಲನಚಿತ್ರ ನಿರ್ಮಾಪಕರಾಗಿ, ನಾವು ಉತ್ತರಗಳನ್ನು ಕೋರುತ್ತೇವೆ. ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಕೆಎಫ್‌ಸಿಸಿಯು ಒಳಗೊಳ್ಳುವುದರಿಂದ,ನೀವು ಕೊಟ್ಟ ಶೀರ್ಷಿಕೆಗಳನ್ನೇ ನಂಬಿಕೊಂಡು ಶ್ರಮ ಪಡುವುದರಿಂದ, ಕೊನೆಗೆ ನೀವುಕೊಡುವ ಶೀರ್ಷಿಕೆಗೆ ಯಾವುದೇ ಬೆಲೆ ಇಲ್ಲ ಅಂದಾಗ ನಾವು ಯಾರನ್ನು ನಂಬಬೇಕು?
ಚಿತ್ರದಲ್ಲಿ ಇವರೆಲ್ಲ ಇದ್ದಾರೆ..
ಸತೀಶ್ ನಾಯಕರಾದರೆ, ಶ್ರದ್ಧಾ ಶ್ರೀನಾಥ್ ನಾಯಕಿ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷ ಸೋಮಶೇಖರ್ ಮತ್ತು ಸೋನು ಗೌಡ ಮುಂತಾದವರ ತಾರಾ ಬಳಗವಿದೆ. ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಕೆ.ಪಿ. ಇನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕೆ.ಎಸ್.ನಂದೀಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಕೂಡ ನಡೆಸಲಾಗಿದೆ.