ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಕಥೆ ಹೇಳಿ ಸ್ಯಾಂಡಲ್ ವುಡ್ ಗೆ ಬಹುಪರಾಕ್ ಹಾಕಿ ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ ಅಂತಾ ಚಮಕ್ ಕೊಟ್ಟ ಬಜಾರ್ ನಲ್ಲಿ ಸಖತ್ ಸುದ್ದಿಯಲ್ಲಿರುವ ವಿಭಿನ್ನ ಸಿನಿಮಾಗಳ ನಿರ್ದೇಶಕ ಸಿಂಪಲ್ ಸುನಿ. ಸುನಿ ಸಿನಿಮಾಗಳು ಅಂದ್ರೆ ಚಿತ್ರಪ್ರೇಮಿಗಳು ಸಖತ್ ಕ್ಯೂರಿಯಾಸಿಟಿಯಿಂದ ನೋಡ್ತಾರೆ. ಅದಕ್ಕೆ ಕಾರಣ ಸದಾ ಹೊಸತನ, ಹೊಸಬಗೆ ಹಾಗೂ ವಿಶೇಷತೆಗಳಿಂದ ಕೂಡಿರುತ್ತವೆ. ಸ್ಟಾರ್ ಹೀರೋಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ಸಿಂಪಲ್ ಸುನಿ, ಈಗ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾರೆ!
ಅರೇ…ಸಿಂಪಲ್ ಸುನಿ ಕೋರ್ಟ್ ಕಟಕಟೆಯಲ್ಲಿ ನಿಂತಿರೋದಿಕ್ಕೆ ಕಾರಣವೇನು? ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಕಾಡೋದಿಕ್ಕೆ ಶುರುವಾಗುತ್ತೆ. ಅದಕ್ಕೆ ಉತ್ತರ ಸಖತ್ ಪ್ರಮೋಷನ್ಸ್. ಹೌದು.. ಸಿಂಪಲ್ ಸುನಿ.. ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್. ಈ ಜೋಡಿ ಜೊತೆಯಾಗಿ ಪ್ರೇಕ್ಷಕರಿಗೆ ಸಖತ್ ಕಾಮಿಡಿ ಹೂರಣ ಬಡಿಸಲು ಸಜ್ಜಾಗಿದ್ದಾರೆ. ಸಖತ್ ಸಿನಿಮಾ ಮೂಲಕ ಸಿನಿಪ್ರೇಕ್ಷಕ ಕುಲವನ್ನು ನಗುವಿನ ಅಲೆಯಲ್ಲಿ ತೇಲಿಸಲಿದ್ದಾರೆ.
ಈಗಾಗ್ಲೇ ರಿಲೀಸ್ ಆಗಿರುವ ಸಖತ್ ಸಿನಿಮಾದ ಮೋಷನ್ ಪೋಸ್ಟರ್, ಟೀಸರ್ ಹಾಗೂ ಸಾಂಗ್ ಕುತೂಹಲದ ಚಿಟ್ಟಿಯಾಗಿವೆ. ಈ ನಡುವೆ ಸಖತ್ ಸಿನಿಮಾ ಬಳಗ ಪ್ರಮೋಷನ್ ಗೆ ಸಖತ್ ಆಗಿರುವ
ಐಡಿಯಾವೊಂದನ್ನು ಮಾಡಿದೆ. ಪ್ರತಿ ಮಾಲ್ ಗಳಲ್ಲಿ ಕೋರ್ಟ್ ಕಟಕಟೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಸಖತ್ ಸಿನಿಮಾಕ್ಕೂ ಕೋರ್ಟ್ ಕಟಕಟೆಗೂ ಏನು ಸಂಬಂಧ ಅಂದ್ರೆ ಸಖತ್ ಸಿನಿಮಾದ ಟೀಸರ್ ನಲ್ಲಿ ಕೋರ್ಟ್ ಸೀನ್ ಇದೆ. ಗಣೇಶ್ ಕೋರ್ಟ್ ಕಟಕಟೆಯಲ್ಲಿ ನಿಂತು ನಟಿಸಿರುವ ಒಂದು ದೃಶ್ಯವಿದೆ. ಅಲ್ಲದೇ ಸಖತ್ ಸಿನಿಮಾ ಕೋರ್ಟ್ ಸುತ್ತ ನಡೆಯುವ ಕಥೆ. ಹೀಗಾಗಿ ಚಿತ್ರತಂಡ ಪ್ರಮೋಷನ್ ಗೆ ಈ ವಿಧಾನ ಬಳಸಿದೆ. ಮಾಲ್ ಅಂಗಳದಲ್ಲಿ ಕೋರ್ಟ್ ಕಟಕಟೆಯಲ್ಲಿ ನಿರ್ಮಿಸಿದೆ ಸಖತ್ ಸಿನಿಮಾ ತಂಡ. ಈ ಕಟಕಟೆಯಲ್ಲಿ ನಿಂತು ಮಕ್ಕಳು, ಪ್ರತಿಯೊಬ್ಬರು ಫೋಟೋಗೆ ಫೋಸ್ ಕೊಡ್ತಿದ್ದಾರೆ. ಬರೋ 14 ರಂದು ಸಖತ್ ಸಿನಿಮಾದ ಟ್ರೇಲರ್ ರಿಲೀಸ್ ಆಗ್ತಿದೆ.
ಕಾಮಿಡಿ ಜೊತೆ ರಿಯಾಲಿಟಿ ಸುತ್ತ ಹೆಣೆಯಲಾಗಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸದ್ಯ ಸ್ಯಾಂಪಲ್ಸ್ ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಖತ್ ಸಿನಿಮಾ ನವೆಂಬರ್ 26 ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.