ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಟಸಾರ್ವಭೌಮ ಹಾಗೂ ಅಪ್ಪಟ ದೈವಭಕ್ತ. ಅಭಿಮಾನಿ ದೇವರುಗಳಲ್ಲಿ ದೇವರನ್ನು ಕಾಣುವ ದೊಡ್ಮನೆಯ ರಾಜಕುಮಾರ, ರಾಯರ ಪರಮಭಕ್ತನಾಗಿದ್ದರು ಕೂಡ ದೇವಾನುದೇವತೆಗಳನ್ನು ಆರಾಧಿಸುತ್ತಿದ್ದರು ಮತ್ತು ದೈವಿಶಕ್ತಿಗಳನ್ನು ನಂಬುತ್ತಿದ್ದರು. ಅಷ್ಟಕ್ಕೂ, ದೈವಿಕತೆ ಬಗ್ಗೆ ಈಗ ಮಾತನಾಡೋದಕ್ಕೆ ಕಾರಣ ಮಲೆಮಾದಪ್ಪನ ಮೇಲಿದ್ದ ಶ್ರದ್ಧೆ ಹಾಗೂ ಭಕ್ತಿಗೋಸ್ಕರ
ಹೊಸ ಸಾಹಸಕ್ಕೆ ಅಪ್ಪು ಒಂದು ಹೆಜ್ಜೆ ಮುಂದೆ ಇಟ್ಟಿದ್ದರು. ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ನಯಾ ಕನಸಿಗೆ ಜೀವ ತುಂಬುವುದಕ್ಕೆ ಮುಂದಾಗಿದ್ದರು. ಈ ಕುರಿತಾಗಿ ಒಂದು ಸುತ್ತಿನ ಮಾತುಕಥೆ ಕೂಡ ನಡೆದಿದ್ದು, ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಮನೆಗೆ ಬರುವಂತೆ ನವೀನ್ ಸಜ್ಜುಗೆ ಹೇಳಿದ್ದರಂತೆ. ಆದರೆ, ಸೋಮವಾರ ಬರುವ ಹೊತ್ತಿಗೆ ದೊಡ್ಮನೆಯ ರಾಜಕುಮಾರ ವಿಧಿಯಾಟಕ್ಕೆ ಬಲಿಯಾಗಿಬಿಟ್ಟರು. ತನ್ನ ಕನಸು ಕಮರಿಹೋಯ್ತು ಎನ್ನುವುದಕ್ಕಿಂತ ಕನ್ನಡ ಚಿತ್ರರಂಗದ ಮಾಣಿಕ್ಯನನ್ನು ಕಳೆದುಕೊಂಡ ದುಃಖದಲ್ಲಿ ನವೀನ್ ಸಜ್ಜು ಕೂಡ ಕಣ್ಣೀರಾಗುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾದ ಸಂದರ್ಭ, ಅವರೊಂದಿಗಿನ ಮಾತುಕತೆ, ಮಾದಪ್ಪನ ಆಲ್ಬಂ ಕಥೆ, ಹೀಗೆ ಎಲ್ಲವನ್ನೂ ಸುಧೀರ್ಘವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಪ್ಪು ಸರ್ ಕೊನೆಯ ಭೇಟಿ :ಮಲೆ ಮಹದೇಶ್ವರ ಕುರಿತು ಒಂದು ಆಲ್ಬಮ್ ಸಾಂಗ್ ಪಿಆರ್ಕೆ ಬ್ಯಾನರ್ನಲ್ಲಿ ಮಾಡಲು ಅಪ್ಪು ಸರ್ ಕೆಲ ತಿಂಗಳ ಹಿಂದೆ ಒಪ್ಪಿಕೊಂಡಿದ್ದರು. ಅದೇ ವಿಷಯವಾಗಿ ಮಾತನಾಡಲು ಕಳೆದ ಬುಧವಾರ ಸಂಜೆ ಅವರ ಮನೆಗೆ ಹೋಗಿದ್ದೆ. ಸುಮಾರು ಒಂದೂವರೆ ತಾಸು ಅವರೊಂದಿಗೆ ಮಾತನಾಡಿದ್ದೆ. ಅವರ ಸರಳತೆ, ಬೇರೆಯವರಿಗೆ ಕೊಡುತ್ತಿದ್ದ ಬೆಲೆ, ಹೇಳುತ್ತಿದ್ದ ಆತ್ಮವಿಶ್ವಾಸದ ಮಾತುಗಳ ಬಗ್ಗೆ ನಾನು ವಿಶೇಷವಾಗಿ ಹೇಳಬೇಕಾದ್ದಿಲ್ಲ.. ಅದು ಎಲ್ಲರಿಗೂ ಗೊತ್ತಿರುವಂತಹದ್ದೆ. ಸಂಪೂರ್ಣವಾಗಿ ಕಂಪೋಸಿಷನ್ ಮುಗಿದ ಹಾಡನ್ನು ಹೇಗೆ ಶೂಟಿಂಗ್ ಮಾಡಬೇಕು, ಯಾವೆಲ್ಲಕ್ಯಾಮೆರಾ ಬಳಸಬೇಕು ಎಂಬುದನ್ನು ಪಿನ್ ಟು ಪಿನ್ ಹೇಳಿದರು. ಅದರ ಜೊತೆಗೆ ಐದಾರು ರೆಫ್ರರೆನ್ಸ್ ವಿಡಿಯೋಗಳನ್ನು ತೋರಿಸಿದರು. ಮಹದೇಶ್ವರ ಬೆಟ್ಟವನ್ನು ತೋರಿಸುವ ಅವರ ಕಲ್ಪನೆಯನ್ನು ನೋಡಿ ಬೆರಗಾಗಿದ್ದೆ. ಅಪ್ಪು ಸರ್ ಕಂಟೆAಟ್ನಿAದ ಹಿಡಿದು ಟೆಕ್ನಿಕಲಿಯಾಗಿಯೂ ಅವರು ಎಷ್ಟೊಂದು ತಿಳಿದುಕೊಂಡಿದ್ದರು ಎಂಬುದನ್ನು ನೋಡಿ ಆಶ್ಚರ್ಯವಾಯ್ತು. ಏಕೆಂದರೆ ಅವರು ಐದಾರು ಕ್ಯಾಮೆರಾಗಳ ಹೆಸರನ್ನು ಹೇಳಿ ಇಂತಹ ಶಾಟ್ಗೆ ಇಂತಹ ಕ್ಯಾಮರಾ ಬಳಸಬೇಕು ಎಂದು ವಿವರವಾಗಿ ಹೇಳಿದ್ದರು. ಇದೇ ವಿಷಯವಾಗಿ ಮಾತನಾಡಲು ನಾಳೆ (ಸೋಮವಾರ) ಬರಲು ಹೇಳಿದ್ದರು. ಬಹುಷಃ ಮುಂದಿನ ವಾರ ಮಲೆ ಮಹದೇಶ್ವರ ಹಾಡಿಗೆ ನಾವಿಬ್ಬರು ರಾಗವಾಗಬೇಕಿತ್ತು. ನೃತ್ಯಕ್ಕೆ ಹೆಜ್ಜೆ ಹಾಕಬೇಕಿತ್ತು. ಆದರೆ ಅವರು ಇನ್ನು ಯಾರಿಗೂ ಸಿಗದ ಹಾಗೇ ಬಹುದೂರ ಹೋಗಿಬಿಟ್ಟರು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರ.. ಅವರೊಂದಿಗೆ ಕೆಲವು ಸಮಯ ಕಳೆದಿದ್ದೆ ಎಂಬುದೇ ನನ್ನ ಸಾರ್ಥಕ ಗಳಿಕೆ.. ಹೋಗಿ ಬನ್ನಿ ಸಾರ್.. ಕ್ರೂರ ವಿಧಿಯೆ ನಿನಗೆ ಧಿಕ್ಕಾರ
ಹೊಸಪ್ರತಿಭೆಗಳನ್ನು ಪ್ರೋತ್ಸಾಹಿಸ್ಬೇಕು ಹಾಗೂ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ನ ಪ್ರಾರಂಭ ಮಾಡಿದರು. ಹೊಸತನಕ್ಕಾಗಿ ತುಡಿಯುವ, ಅಪಾರ ಪಾಂಡಿತ್ಯವುಳ್ಳ, ಸಿನಿಮಾನ ಪ್ರೀತ್ಸೋ ಹಾಗೂ ಆರಾಧಿಸೋ ಮಂದಿಗೆ ಕಾಲ್ಶೀಟ್ ಕೊಟ್ಟರು ಹಾಗೂ ಕೋಟಿಗಟ್ಟಲ್ಲೇ ಹಣವನ್ನು ಹೂಡಿಕೆ ಮಾಡಿದರು. ಅದರಂತೇ, ತಮ್ಮ ವಿಶಿಷ್ಟ ಕಂಠಸಿರಿಯಿAದಲೇ ಗಂಧದಗುಡಿಯಲ್ಲಿ ಗುರ್ತಿಸಿಕೊಂಡು, ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನವೀನ್ ಸಜ್ಜು ನ್ಯೂ ಆಲ್ಬಂಗ್ನ ನಿರ್ಮಾಣಕ್ಕೆ ಹಣಹೂಡಿಕೆ ಮಾಡೋದಾಗಿ ಮಾತುಕೊಟ್ಟಿದ್ದರು. ಮಾತ್ರವಲ್ಲ ಮಲೆಮಹಾದೇಶ್ವರ ಸಾಮಿಯ ಪವಾಡದ ಹಾಡಿಗೆ ಕಂಠಕುಣಿಸಿ-ಅಭಿನಯಿಸುವುದಕ್ಕೂ ಒಪ್ಪಿಕೊಂಡಿದ್ದರAತೆ. ಮಾದಪ್ಪನಿಗೆ ನಮ್ಮ ಪ್ರೊಡಕ್ಷನ್ ಹೌಸ್ನಿಂದ ಚಿಕ್ಕ ಕಾಣಿಕೆ ಕೊಟ್ಟಂತಾಗುತ್ತೆ ಎಂದು ಖೂಷಿಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಆದ್ರೀಗ ಅಪ್ಪುನೇ ಇಲ್ಲ. ಮುಂದಿನ ದಿನಗಳಲ್ಲಿ ಈ ಹಾಡನ್ನ ನವೀನ್ ಸಜ್ಜು ಟೇಕಾಫ್ ಮಾಡ್ಬೋದು ಅಥವಾ ಬಿಡ್ಬೋದು. ಆದರೆ, ನಟಸಾರ್ವಭೌಮ ಹೆಜ್ಜೆಹಾಕಿದ್ಹಂತೆ ಆಗೋದಿಲ್ಲ, ಯುವರತ್ನ ಕಂಠಕುಣಿಸಿದ ಹಾಗೇ ಆಗಲ್ಲವಲ್ಲ ಎನ್ನುವ ಕೊರಗು ಸ್ವತಃ ನವೀನ್ ಸಜ್ಜುಗೂ ಇದೆ. ಹೀಗಾಗಿಯೇ, ಅಪ್ಪು ಕಳೆದುಕೊಂಡ ದುಃಖವನ್ನ ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ. ಕ್ರೂರಿ ಜವರಾಯನಿಗೆ ಹಿಡಿಶಾಪ ಹಾಕಿದ್ದಾರೆ.
- ಎಂಟರ್ಟೈನ್ ಮೆಂಟ್ ಬ್ಯೂರೋ ಸಿನಿಲಹರಿ