“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್ ಜರ್ನಿ ಸಿನಿಮಾವಂತೆ.
ಕನ್ನಡದ ಗ್ಲಾಮರಸ್ ನಟಿ ಎನಿಸಿಕೊಂಡಿರುವ ಅನಿತಾಭಟ್, ಇತ್ತೀಚೆಗಷ್ಟೇ ಹೊಸಬಗೆಯ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಹೌದು, ಅನಿತಾಭಟ್ “ಅನಿತಾಭಟ್ ಕ್ರಿಯೇಷನ್ಸ್ ಮೂಲಕ ಸಿನಿಮಾ ನಿರ್ಮಾಣ ಮಾಡಿದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಅವರ ನಿರ್ಮಾಣದ ಸಿನಿಮಾದಲ್ಲಿ ಸ್ವತಃ ಅನಿತಾಭಟ್ ವಿಶೇಷ ಪಾತ್ರದಲ್ಲೂ ಕಾಣಿಸಿಕೊಂಡಾಗಿದೆ. ಅ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅದರ ಬೆನ್ನಲ್ಲೇ, ಅನಿತಾಭಟ್ ಮತ್ತೊಂದು ಸಿನಿಮಾ ಮಾಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.
ಹೌದು, ನಟಿ ಅನಿತಾಭಟ್ ತಮ್ಮ “ಅನಿತಾ ಭಟ್ ಕ್ರಿಯೇಷನ್ಸ್” ಮೂಲಕ ಡಾಟ್ ಟಾಕೀಸ್ನಡಿ ಹೊಸ ಬಗೆಯ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಇಂದಿರಾ” ಅಂತ ನಾಮಕರಣ ಮಾಡಲಾಗಿದೆ.
“ಇಂದಿರಾ” ಅಂದಾಕ್ಷಣ, ತಕ್ಷಣವೇ ನೆನಪಾಗೋದೇ ಮೇಡಮ್ ಇಂದಿರಾಗಾಂಧಿ! ಹಾಗಂತ, ಅವರ ಜೀವನ ಚರಿತ್ರೆಯ ಸಿನಿಮಾವಂತೂ ಅಲ್ಲ. ಅದರಲ್ಲೂ ಅವರ ಬದುಕಿನ ಅಂಶಗಳೂ ಇಲ್ಲಿ ಸುಳಿದಾಡುವುದಿಲ್ಲ. “ಇಂದಿರಾ” ಅನ್ನೋದು ಕಥಾ ನಾಯಕಿಯ ಪಾತ್ರವಷ್ಟೇ. ಉಳಿದಂತೆ ಇದೊಂದು ಎಮೋಷನಲ್ ಜರ್ನಿ ಸಿನಿಮಾವಂತೆ. ಈ ಸಿನಿಮಾ ಕುರಿತಂತೆ ಸ್ವತಃ ಅನಿತಾಭಟ್ ಹೇಳುವುದಿಷ್ಟು. “ನಾನು “ಇಂದಿರಾ” ಎಂಬ ಸಿನಿಮಾದಲ್ಲಿ ಇಂದಿರಾ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ. ಅದೊಂದು ವಿಭಿನ್ನ ಮತ್ತು ವಿಶೇಷವಾಗಿರುವಂತಹ ಪಾತ್ರವದು. ಚಿತ್ರದಲ್ಲಿ ನನಗೊಂದು ಅಪಘಾತ ಆಗುತ್ತದೆ. ಅದರಿಂದಾಗಿ ನಾನು ಅಂಧೆ ಆಗ್ತೀನಿ. ಅಷ್ಟೇ ಅಲ್ಲ, ನನ್ನ ಮೆಮೋರಿ ಕೂಡ ಲಾಸ್ ಆಗುತ್ತೆ. ಅಪಘಾತ ಆಗಿದ್ದು ಯಾಕೆ, ಮಾಡಿದ್ದು ಯಾರು? ಉದ್ದೇಶ ಪೂರ್ವಕವಾಗಿಯೇ ಅಪಥಾಗ ಮಾಡಲಾಯಿತಾ ಎಂಬಿತ್ಯಾದಿ ಪ್ರಶ್ನೆಗಳ ಸುತ್ತವೇ ಕಥೆ ಸಾಗುತ್ತದೆ. ಅದಕ್ಕೆ ಉತ್ತರ ಸಿನಿಮಾ ನೋಡಬೇಕು” ಎನ್ನುತ್ತಾರೆ ಅನಿತಾಭಟ್.
ಇನ್ನು, ಚಿತ್ರದಲ್ಲಿ ವಿಶೇಷ ಪಾತ್ರಳೂ ಇವೆ. ನೀತುಶೆಟ್ಟಿ, ಷಫಿ, ಚಕ್ರವರ್ತಿ ಚಂದ್ರಚೂಡ್ ಇವರು ಪ್ರಮುಖ ಪಾತ್ರಗಳಲ್ಲಿ ಗಮನಸೆಳೆಯುತ್ತಾರೆ. ನಾನು ಅಂಧೆಯಾಗಿ ಮೆಮೋರಿ ಲಾಸ್ ಮಾಡಿಕೊಂಡ ಬಳಿಕ ನೋಡಿಕೊಳ್ಳುವ ಮೂರು ಪಾತ್ರಗಳಿವು. ನಾನು ಚೆನ್ನಾಗಿದ್ದಾಗ ಅವರೆಲ್ಲಾ ಹೇಗೆ ಕನೆಕ್ಟ್ ಆದರು ಅನ್ನೋದು ನಂತರ ರಿವೀಲ್ ಆಗುತ್ತಾ ಹೋಗುತ್ತೆ. ಇನ್ನು, ಅಪಘಾತವಾಗಿದ್ದರೂ, ನನ್ನ ಗಂಡ ಪತ್ತೆ ಆಗಲ್ಲ. ಅವನು ಎಲ್ಲಿ ಹೋದ ಅನ್ನೋದು ಪ್ರಶ್ನೆ ಗಾಢವಾಗಿ ಕಾಡುತ್ತದೆ. ಇಲ್ಲಿ ರೆಹಮಾನ್ ಹಾಸನ್ ಗಂಡನ ಪಾತ್ರ ಮಾಡಿದ್ದಾರೆ. ಅವರ ಪಾತ್ರವೂ ಇಲ್ಲಿ ಪ್ರಮುಖವಾಗಿದೆ.
ಅಂದಹಾಗೆ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ಭ್ರೈನ್ ಮನುಷ್ಯನ ಜೀವನವನ್ನು ಹೇಗೆ ಕಂಟ್ರೋಲ್ ಮಾಡುತ್ತೆ ಅನ್ನುವುದರ ಸುತ್ತ ನಡೆಯೋ ಕಥೆ ಅದು. ಭ್ರಮೆಯಿಂದ ಆಚೆ ಬರೋದು ಹೇಗೆ ಎಂಬಿತ್ಯಾದಿ ಕುರಿತಂತೆ ಮತ್ತು ಮೆಂಟಲಿ ಹೆಲ್ತ್ ಎಷ್ಟು ಮುಖ್ಯ ಎಂಬುದರ ಬಗ್ಗೆ ಹೇಳಲಾಗಿದೆ” ಎನ್ನುತ್ತಾರೆ ಅನಿತಾಭಟ್. ಇನ್ನು, ಈ ಚಿತ್ರವನ್ನು ರಿಷಿಕೇಶ್ ನಿರ್ದೇಶನ ಮಾಡಿದ್ದಾರೆ. ಅವರೇ ಕ್ಯಾಮೆರಾ ಹಿಡಿದಿದ್ದು, ಸಂಕಲನದ ಜೊತೆಗೆ ಪೋಸ್ಟರ್ ಡಿಜೈನ್ ಮತ್ತು ಡಿಐ ಕೂಡ ಅವರೇ ಮಾಡಿದ್ದಾರೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ.