ಪರಭಾಷಾ ನಟರುಗಳು ಗಂಧದಗುಡಿಗೆ ಲಗ್ಗೆ ಇಡೋದು ಹೊಸದೇನಲ್ಲ. ದಿಗ್ಗಜರ ಕಾಲದಿಂದಲೂ ಹೊರ ರಾಜ್ಯದ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದು ಹೋಗಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರೊಟ್ಟಿಗೆ ಹದಿನೇಳು ವರ್ಷಗಳ ಹಿಂದೆ ಸ್ಕ್ರೀನ್ ಶೇರ್ ಮಾಡಿದ್ದ ಬಿಟೌನ್ ನವಾಬ್. ಇದೀಗ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದಾರೆ. ರಿಯಲ್ಸ್ಟಾರ್ ಉಪೇಂದ್ರ ಅಭಿನಯದ ಹೈವೋಲ್ಟೇಜ್ `ಕಬ್ಜ’ ಅಖಾಡಕ್ಕೆ ಧುಮ್ಕಿದ್ದಾರೆ
ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ಕೊಂಡಾಡಿದ್ದಾರೆ
ಕತ್ರಿಗುಪ್ಪೆಯಿಂದ ಕಿಕ್ಸ್ಟಾರ್ಟ್ ಪಡೆದುಕೊಂಡು ಸೆಟ್ಟೇರಿದ ಕನ್ನಡದ ಕಬ್ಜ' ಚಿತ್ರ, ಕೋಟಿ ಮೇಕಿಂಗ್- ಕಾಸ್ಟ್ಲೀ ಸ್ಟಾರ್ ಕಾಸ್ಟ್ ನಿಂದಲೇ ಕತ್ರಿಗುಪ್ಪೆ ಗಡಿದಾಟಿಕೊಂಡು ಇಡೀ ವರ್ಲ್ಡ್ ವೈಡ್ ಖ್ಯಾತಿ ಹೊಂದುತ್ತಿದೆ.
ಕಬ್ಜ’ ಹವಾ ಅಟ್ ಪ್ರಸೆಂಟ್ ಹೆಂಗಿದೆ ಅಂದರೆ ಆಲ್ ಓವರ್ ಇಂಡ್ಯಾ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಿದೆ. ಹೀಗೆ, ಪ್ಯಾನ್ ಇಂಡಿಯಾ ತುಂಬೆಲ್ಲಾ ಸದ್ದು ಮಾಡುತ್ತಿರುವ ಕಬ್ಜ ಚಿತ್ರತಂಡಕ್ಕೆ ಬಿಟೌನ್ ನವಾಬ್ ಸೇರ್ಪಡೆಗೊಂಡಿದ್ದಾರೆ.
ನವಾಬ್ … ಬಿಟೌನ್ ನವಾಬ್… ಪಂಚಭಾಷಾ ನಟ, ಅಭಿನಯದಲ್ಲಿ ನಟಭಯಂಕರ. ಹಿಂದಿ- ತೆಲುಗು- ತಮಿಳು- ಮಲೆಯಾಂ ಹೀಗೆ ಸೌತ್ ಸಿನಿಮಾ ಇಂಡಸ್ಟ್ರಿ ಸುತ್ತಿ ಬಂದಿರುವ ನವಾಬ್ ಷಾ, ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಜೇಷ್ಠ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಹದಿನೇಳು ವರ್ಷಗಳು ಕಳೆದ ಮೇಲೆ ನವಾಬ್ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ. ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚನ ಜೊತೆ ಕಾದಾಡಿದ ಬೆನ್ನಲ್ಲೇ ರಿಯಲ್ ಸ್ಟಾರ್ ಉಪ್ಪಿಯ ಕಬ್ಜದಲ್ಲಿ ಕಮಾಲ್ ಮಾಡೋದಕ್ಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿರುವ ಮಿನರ್ವ ಮಿಲ್ ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ನಡೀತಿದೆ. ಕೋಟಿ ಕೋಟಿ ಖರ್ಚು ಮಾಡಿ ವೆರೈಟಿ ವೆರೈಟಿ ಸೆಟ್ ಹಾಕಿಸಿದ್ದಾರೆ. ಕೆಜಿಎಫ್ ಕಲಾ ನಿರ್ದೇಶಕ ಶಿವಕುಮಾರ್ ‘ ಕಬ್ಜ’ ಚಿತ್ರಕ್ಕೆ ಸೆಟ್ ನಿರ್ಮಿಸಿ ಕೊಟ್ಟಿದ್ದಾರೆ. ಅದ್ದೂರಿ ಸೆಟ್ ನಲ್ಲಿ ಈಗಾಗಲೇ ನಾಲ್ಕು ಹಂತದ ಚಿತ್ರೀಕರಣ ಮುಗಿಸಿರುವ ಟೀಮ್, ಈಗ ಐದನೇ ಹಂತದ ಟಾಕಿಪೋರ್ಶನ್ ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ, ಉಪ್ಪಿ ಹಾಗೂ ನವಾಬ್ ಕಾಂಬಿನೇಷನ್ ಸೀಕ್ವೆನ್ಸ್ ಶೂಟ್ ಮಾಡುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಬಿಟೌನ್ ನವಾಬ್ ಲುಕ್- ಗೆಟಪ್ ಸಖತ್ ಟೆರಿಫಿಕ್ ಆಗಿದೆ. 6.5 ಹೈಟ್ ನಲ್ಲಿ ಘಟೋದ್ಗಜನಂತೆ ಕಾಣುವ ನವಾಬ್, ಕಬ್ಜಾದಲ್ಲಿ ಬಘೀರನಾಗಿ ಘರ್ಜಿಸಲಿದ್ದಾರೆ. ಪವರ್ ಫುಲ್ ಡಾನ್ ಆಗಿ ಇಡೀ ಸೌತ್ ಇಂಡಿಯಾನ ಕಂಟ್ರೋಲ್ ಮಾಡ್ತಾರಂತೆ. ನವಾಬ್ ಔಟ್ ಫಿಟ್ ಅಂಡ್ ಕ್ರೂಷಿಯಲ್ ಟ್ಯಾಟೂ ನೋಡಿದರೆ ಗೊತ್ತಾಗುತ್ತೆ ಬಘೀರ ಎಷ್ಟು ಭಯಂಕರ ಅಂತ. ಆಗಲೇ ಹೇಳಿದ ಹಾಗೇ ನವಾಬ್ ಕನ್ನಡಕ್ಕೆ ಹೊಸಬರಲ್ಲ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನಾಳಿರುವ ಇವರು ಹಿಂದಿ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗವೇ ಬೆಸ್ಟ್ ಎಂದು ಕೊಂಡಾಡಿದರು. ಸ್ಯಾಂಡಲ್ ವುಡ್ ಅಂಗಳದಲ್ಲಿ ಕೆಲಸ ಮಾಡಲಿಕ್ಕೆ ಕಂಫರ್ಟಬಲ್ ಫೀಲ್ ಇರುತ್ತೆ, ಇಲ್ಲಿನ ಸಿನಿಮಾ ಮಂದಿಯೂ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡ್ತಾರೆ.
ಜೊತೆಗೆ ಒಳ್ಳೊಳ್ಳೆ ಕ್ಯಾರೆಕ್ಟರ್ ಗಳು ಸಿಗುತ್ತಿವೆ ನನಗೆ ಎಂದು ನವಾಬ್ ಖುಷಿಯಿಂದ ಹೇಳಿಕೊಂಡರು.
ಲೆಜೆಂಡರಿ ಡೈರೆಕ್ಟರ್ ಅಂಡ್ ಆಕ್ಟರ್ ಉಪೇಂದ್ರರೊಟ್ಟಿಗೆ ಆಕ್ಟ್ ಮಾಡೋದಕ್ಕೆ ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ. ಚಂದ್ರು ಸಾರ್ ಒಬ್ಬ ಗ್ರೇಟ್ ಡೈರೆಕ್ಟರ್, ಇಲ್ಲಿವರೆಗೂ ಬೆಸ್ಟ್ ಫಿಲ್ಮ್ಸ್ ಗಳನ್ನು ಕೊಟ್ಟಿದ್ದಾರೆ. ನನಗೆ ಕಬ್ಜದಲ್ಲಿ ಡಾನ್ ಪಾತ್ರಕ್ಕೆ ರೆಡ್ ಕಾರ್ಪೆಟ್ ಹಾಕಿದ್ದು ನನಗೆ ಸಂತೋಷವಾಗಿದೆ ಅಂತಾರೇ ನವಾಬ್. ನವಾಬ್ ರಂತೇ ಭಯಾನಕ ಖಳನಾಯಕರು ಕಬ್ಜ ಕೋಟೆಯಲ್ಲಿದ್ದಾರೆ.
ಜಗಪತಿ ಬಾಬು, ರಾಹುಲ್ ದೇವ್, ಕಾಮರಾಜನ್, ಜಾನ್ ಕೊಕ್ಕಿನ್, ಅನುಪ್ ರೇವಣ್ಣ ಸೇರಿದಂತೆ ಅದ್ದೂರಿ ತಾರಾಬಳಗ ಚಿತ್ರದಲ್ಲಿದೆ.
ಸದ್ಯ, ಬೆಂಗಳೂರಿನಲ್ಲಿ ಕಬ್ಜ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಹೈದ್ರಾಬಾದ್-ಮಂಗಳೂರು ಸೇರಿದಂತೆ ಫಾರಿನ್ ನಲ್ಲೂ ಶೂಟಿಂಗ್ ನಡೆಯಲಿದೆಯಂತೆ. 45 ದಿನಗಳ ಕಾಲ ಮಿನರ್ವ ಮಿಲ್ ನಲ್ಲಿ ಧಗಧಗಿಸಲಿರುವ ಕಬ್ಜ ಟೀಮ್ ಆ ಮೇಲೆ ಹೈದ್ರಾಬಾದ್ ಗೆ ಶಿಫ್ಟ್ ಆಗಲಿದ್ದಾರೆ.
ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ