ಏಜ್ ಈಸ್ ಜಸ್ಟ್ ಎ ನಂಬರ್' ಅನ್ನೋದನ್ನ ಸಾಕಷ್ಟು ಹಿರಿಯ ಕಲಾವಿದರು ಪ್ರೂ ಮಾಡಿ ತೋರಿಸಿದ್ದಾರೆ. ಈಗಾಗಲೇ ಸಾಕಷ್ಟು ಭಾರಿ
ಏಜ್ ಈಸ್ ಜಸ್ಟ್ ಎ ನಂಬರ್’ ಎಂದು ಸಾಬೀತುಪಡಿಸಿರುವ ಧ್ರುವತಾರೆ ಗಿರಿಜಾ ಲೋಕೇಶ್. ಅವರು ಮತ್ತೊಮ್ಮೆ `ಕಲೆಗೆ ವಯಸ್ಸಿನ ಹಂಗಿಲ್ಲ’ ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ. ೭೦ರ ಇಳಿವಯಸ್ಸಲ್ಲಿ ಟಾಮ್ಬಾಯ್ ಲುಕ್ನಲ್ಲಿ ಮಿಂಚಿದ್ದಾರೆ. ಇತ್ತ ಪೈಲ್ವಾನ್ ನಿರ್ಮಾಪಕಿ ಸ್ವಪ್ನಾ ಕೃಷ್ಣ ಬೆಟ್ ಕಟ್ಟಿದ್ದಾರೆ. ಗಿರಿಜಾ ಅಮ್ಮನವರ ನ್ಯೂ ಲುಕ್ಗೂ-ಸ್ವಪ್ನಾ ಕೃಷ್ಣರ ಬೆಟ್ಟಿಂಗ್ಗೂ ಲಿಂಕ್ ಇದೆ. ಅದೇನು ಗೊತ್ತಾ? ಹಾಗೊಮ್ಮೆ ಓದಿಬಿಡಿ.
ಗಿರಿಜಾಲೋಕೇಶ್ ಕನ್ನಡ ಕಿರುತೆರೆ, ಬೆಳ್ಳಿತೆರೆ, ರಂಗಭೂಮಿ ಕಂಡ ಅಪರೂಪದ ನಟಿ. ಅಬಚೂರಿನ ಪೋಸ್ಟ್ ಆಫೀಸ್' ಸಿನಿಮಾದಿಂದ ಶುರುವಾದ ಬೆಳ್ಳಿತೆರೆ ಪಯಣ,
ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದವರೆಗೂ ಸಾಗಿ ಬಂದಿದೆ. “ಕಾಕನ ಕೋಟೆ”, “ಭುಜಂಗಯ್ಯನ ದಶಾವತಾರ”, “ಯಾರಿಗೂ ಹೇಳ್ಬೇಡಿ”, ಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು ಸಿನಿಮಾಗಳು, ೩೦೦ಕ್ಕೂ ಹೆಚ್ಚು ನಾಟಕಗಳಿಗೆ ಜೀವ ತುಂಬಿದ್ದಾರೆ. `ಮುತ್ತಿನ ತೋರಣ’ ಮೂಲಕ ಕಿರುತೆರೆಯಲ್ಲಿ ಹಂಗಾಮ ಸೃಷ್ಟಿಸಿದ ಗಿರಿಜಮ್ಮನವರು ಈಗಲೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ.
ಕಲೆಗೆ ಬೆಲೆ ಕಟ್ಟಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕಲೆಗೆ ವಯಸ್ಸಿನ ಹಂಗಿಲ್ಲ ಎನ್ನುವುದು ಸತ್ಯ. ಈ ಮಾತು ಇಲ್ಲಿ ಹೇಳೋದಕ್ಕೆ ಕಾರಣ, ಖ್ಯಾತ ಕಲಾವಿದೆ ಗಿರಿಜಮ್ಮನವರಿಗೆ ಇಳಿವಯಸ್ಸಲ್ಲೂ ಬತ್ತದ ಉತ್ಸಾಹ. 70ರ ವಸಂತದಲ್ಲೂ ಅವರಿಗಿರುವ ಜೀವಾನೋತ್ಸಾಹ ಮತ್ತು ಕಲೆಯ ಮೇಲಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ಧೆಯನ್ನ ನೋಡಿದರೆ ಬರೀ ಚಪ್ಪಾಳೆ ತಟ್ಟುವುದಲ್ಲ, ಎದ್ದುನಿಂತು ಸೆಲ್ಯೂಟ್ ಹೊಡಿಬೇಕು ಅನ್ಸುತ್ತೆ.
ಬರೋಬ್ಬರಿ 50 ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆ ಪಾತ್ರಗಳಿಗೆ ಜೀವತುಂಬಿ ಪ್ರೇಕ್ಷಕ ಮಹಾಷಯರನ್ನ ರಂಜಿಸುತ್ತಾ ಬರುತ್ತಿರುವ ಗಿರಿಜಾ ಲೋಕೇಶ್ ಅವರು 70ರ ಹರೆಯದಲ್ಲೂ ತರಹೇವಾರಿ ಪಾತ್ರಗಳಿಗೆ ಉಸಿರು ತುಂಬಿ ನಟಿಸುತ್ತಿದ್ದಾರೆ. ಪೋಷಕ ನಟಿಯಾಗಿ ಬಣ್ಣದ ಲೋಕದಲ್ಲಿ ಸಿನಿಜರ್ನಿ ಮುಂದುವರೆಸಿರುವ ಗಿರಿಜಮ್ಮನವರು ಈಗ ಏಕ್ದಮ್ ತಮ್ಮ ಲುಕ್-ಗೆಟಪ್ನ ಚೇಂಜ್ ಮಾಡಿಕೊಂಡಿದ್ದಾರೆ. ಟಾಮ್ ಬಾಯ್ ಅವತಾರದಲ್ಲಿ ಮಿಂಚಿ ಇವತ್ತಿನ ನಟಿಮಣಿಯರು ಬೆಕ್ಕಸ ಬೆರಗಾಗುವಂತೆ, ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ಕಲಾವಿದರಂದ್ರೆ ಹಾಗೇನೇ. ಸಿನಿಮಾದಿಂದ ಸಿನಿಮಾಗೆ, ಪಾತ್ರದಿಂದ ಪಾತ್ರಕ್ಕೆ ಬದಲಾವಣೆ ಬಯಸ್ತಾರೆ. ಭಿನ್ನ-ವಿಭಿನ್ನ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಹಪಹಪಿಸುತ್ತಾರೆ. ಅದರಂತೇ, ಹಿರಿಯ ನಟಿ ಗಿರಿಜಮ್ಮನವರು ಕೂಡ ಪಾತ್ರವೇ ತಾವಾಗಲು ಬಯಸ್ತಾರೆ, ಜೀವತುಂಬಿ ಅಭಿನಯಿಸ್ತಾರೆ. ಇದೀಗ ರೌಡಿಬೇಬಿ ಸತ್ಯಾಳ ಜೊತೆ ಟಾಮ್ಬಾಯ್ ಆಗಿ ಕಿರುತೆರೆ ಲೋಕದಲ್ಲಿ ದಿಬ್ಬಣ ಹೊರಟಿದ್ದಾರೆ. ಸತ್ಯ' ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಧಾರಾವಾಹಿ. ಪೈಲ್ವಾನ್ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ ನಿರ್ದೇಶನವಿರುವ
ಸತ್ಯ’ ಕಿರುತೆರೆ ಪ್ರೇಕ್ಷಕರ ಮನಸೂರೆಗೊಂಡಿದೆ. ಸ್ಮಾಲ್ ಸ್ಕ್ರೀನ್ನ್ನಲ್ಲಿ ಸೂಪರ್ಹಿಟ್ ಸೀರಿಯಲ್ ಆಗಿ ಹೊರ ಹೊಮ್ಮಿದೆ. ಮಾತ್ರವಲ್ಲ, ಈ ಧಾರಾವಾಹಿ ಹಲವು ಪ್ರತಿಭೆಗಳಿಗೆ ಬಂಗಾರದಂತಹ ಅವಕಾಶ ಕೊಟ್ಟಿದೆ ಮತ್ತು ಅವರ ಬದುಕನ್ನ ಬದಲಾಯಿಸಿಬಿಟ್ಟಿದೆ. ಲೀಡ್ರೋಲ್ನಲ್ಲಿರುವ ಗೌತಮಿ ಜಾದವ್ ಕರುನಾಡಿನ ಮನೆಮನದಲ್ಲಿ ಮೆರೆಯೋದಕ್ಕೆ `ಸತ್ಯ’ ಸೀರಿಯಲ್ ಕಾರಣ. ರೌಡಿ ಬೇಬಿಯಾಗಿ ಕಮಾಲ್ ಮಾಡ್ತಿರುವ ಸತ್ಯಾಗೆ ಟಾಮ್ಬಾಯ್ ಪಾತ್ರಧಾರಿಯಾಗಿರುವ ಗಿರಿಜಾ ಲೋಕೇಶ್ ಅವರು ಸಾಥ್ ನೀಡಿದ್ದಾರೆ.
ಪ್ಯಾಂಟು-ಶರ್ಟ್ ಹಾಕಿಕೊಂಡು, ಕೈಗೆ ಬ್ಯಾಂಡ್ ಧರಿಸಿಕೊಂಡು, ಬಾಬ್ಕಟ್ ಹೇರ್ಸ್ಟೈಲ್ನಲ್ಲಿ ಗಿರಿಜಾ ಲೋಕೇಶ್ ಅವರು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹಿಂದೆಂದೂ ನೋಡದ ಅವತಾರದಲ್ಲಿ ಗಿರಿಜಮ್ಮನವರನ್ನ ನೋಡಿದ ವೀಕ್ಷಕರು ವಾರೆವ್ಹಾ ಎನ್ನುತ್ತಿದ್ದಾರೆ. ಅಂದ್ಹಾಗೇ, ಈ ಬದಲಾದ ಲುಕ್ಗೆ ಏಕೈಕ ಕಾರಣ ಪೈಲ್ವಾನ್ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು. ಈ ರೀತಿಯಾದ ಪಾತ್ರವನ್ನ ಗಿರಿಜಮ್ಮನವರಿಂದ ಮಾಡಿಸಬೇಕು ಎಂದುಕೊಂಡ ಸ್ವಪ್ನಕೃಷ್ಣ, ಗಿರಿಜಮ್ಮನವರನ್ನ ಒಪ್ಪಿಸಿ ಸತ್ಯ ಸೀರಿಯಲ್ಗೆ ಕರೆತಂದಿದ್ದಾರೆ. ಶೂಟಿಂಗ್ ಸಮಯದಲ್ಲಿ ಸತ್ಯ ಪಾತ್ರಧಾರಿ ಗೌತಮಿ ಜಾದವ್ ಹಾಗೂ ಗಿರಿಜಾ ಲೋಕೇಶ್ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ನಿರ್ಮಾಪಕಿ ಸ್ವಪ್ನ ಮೇಡಂ, `ಇವತ್ತಿನ ಯಂಗ್ ಜನರೇಷನ್ ಆರ್ಟಿಸ್ಟ್ಗಳಿಗೆ ನೀವು ಪ್ರೇರಣೆ. ನಾನು ಬೆಟ್ ಕಟ್ಟುತ್ತೀನಿ ಗಿರಿಜಮ್ಮನವರೇ, ನಿಮ್ಮ ಥರ ಯಾರು ಕೂಡ ಎನರ್ಜಿನಾ ಕ್ಯಾರಿ ಮಾಡೋದಕ್ಕೆ ಆಗಲ್ಲ’. ನಿಮ್ಮ ಜೊತೆ ವರ್ಕ್ ಮಾಡ್ತಿರುವುದು ಖುಷಿ ಕೊಡುತ್ತಿದೆ ಎಂದಿದ್ದಾರೆ. ಹಂಡ್ರೆಡ್ ಪರ್ಸೆಂಟ್ ನಿಜ. ಹಿಂದಿನ ಕಲಾವಿದರ ಯಂಗ್ ಅಂಡ್ ಎನರ್ಜಿಗೆ ಇವತ್ತಿನ ಆರ್ಟಿಸ್ಟ್ಗಳು ಸೆಡ್ಡು ಹೊಡೆಯೋದಕ್ಕೆ ಆಗಲ್ಲ. ಎನಿವೇ ಟಾಮ್ಬಾಯ್ ಗಿರಿಜಮ್ಮನವರಿಗೆ ಶುಭವಾಗಲಿ, ಇದೇ ರೀತಿ ಎಕ್ಸ್ಪಿರಿಮೆಂಟ್ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಹಾಜರಾಗಲಿ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ