ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ
ಸ್ಯಾಂಡಲ್ ವುಡ್ ನ ಸೆಕ್ಸಿ ಸುಂದರಿ, ಪಡ್ಡೆಹೈಕ್ಳ ಮೋಹಕ ಮದನಾರಿ ಶುಭಪುಂಜಾ, ತಮ್ಮ ಮಾದಕ ನೋಟ ಹಾಗೂ ಮೈಮಾಟದಿಂದಲೇ ನೋಡುಗರ ಎದೆಗೆ ಕಿಚ್ಚು ಹಚ್ಚುತ್ತಾರೆ. ಬೋಲ್ಡ್ ಅಂಡ್ ಬೊಂಬಾಟ್ ಅಭಿನಯದ ಮೂಲಕ ಸಿನಿಪ್ರಿಯರ ಮನಸೂರೆಗೊಳ್ತಾರೆ. ಬೆಲ್ಲಿಡ್ಯಾನ್ಸ್ ಮಾಡುತ್ತಾ ಬೆಳ್ಳಿತೆರೆಯನ್ನ ಬೆಳಗುತ್ತಾರೆ. ಇಂತಿಪ್ಪ ನಟಿ
ಶುಭಾ ಪುಂಜಾ ಈಗ ತಮ್ಮ ನಯಾ ಲುಕ್ ನಿಂದ ಚಿತ್ರಪ್ರೇಮಿಗಳನ್ನ ದಂಗುಬಡಿಸಿದ್ದಾರೆ. ಯಸ್, ನಟಿ ಶುಭಾ ಪುಂಜಾ ನಯಾ ಅವತಾರದಲ್ಲಿ ಮಿಂಚಿ ನೋಡುಗರನ್ನ ಬೆರಗುಗೊಳಿಸಿದ್ದಾರೆ. ಲಂಬಾಣಿ ಉಡುಗೆ ತೊಟ್ಟುಒಂದು ಕೈಯಲ್ಲಿ ಚೂಪಾದ ಚೂರಿ, ಇನ್ನೊಂದು ಕೈಯಲ್ಲಿ ತಲೆಬುರುಡೆ ಹಿಡ್ಕೊಂಡು ಕ್ಯಾಮರಾ ಕಣ್ಣಿಗೆ ಕೆಂಡದಂತಹ ಪೋಸ್ ಕೊಟ್ಟಿದ್ದಾರೆ. ಬದಲಾದ ಲುಕ್ ಗೆಟಪ್ ನಲ್ಲಿ ಮೊಗ್ಗಿನ ಮನಸ್ಸಿನ ಹುಡುಗಿಯನ್ನ ನೋಡಿದವರು ವಾರೆವ್ಹಾ ಶುಭಕ್ಕ ಅಂತ ಚಪ್ಪಾಳೆ ತಟ್ಟುತ್ತಿದ್ದಾರೆ.
ಅಂದ್ಹಾಗೇ, ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ.ಕುತೂಹಲಭರಿತ ಫಸ್ಟ್ ಲುಕ್ ಪೋಸ್ಟರ್ ಸಿನಿಮಾ ಪ್ರೇಮಿಗಳ ದಿಲ್ ಕದಿಯುತ್ತಿದೆ.
ನಟಿ ಶುಭಾ ಪೂಂಜಾ ಅವರ ಸಿನಿ ಕೆರಿಯರ್ ನಲ್ಲಿಯೇ ಇದೊಂದು ಸ್ಪೆಷಲ್ ಲುಕ್. ಲಂಬಾಣಿ ಪಾತ್ರ ಈ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು. ಅವರಿಲ್ಲಿ ಹಾಕಿರುವ ಈ ಕಾಸ್ಟ್ಯೂಮ್ನ ತೂಕ ಬರೋಬ್ಬರಿ ೨೦ ಕೆಜಿ ಇದೆ. ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡದಲ್ಲಿ ಇದನ್ನು ನಾಲ್ಕು ತಿಂಗಳು ಸಮಯ ತೆಗೆದುಕೊಂಡು ತಯಾರು ಮಾಡಿಸಿದ್ದಾರಂತೆ ಶ್ರೀನಿ ಹನುಮಂತ ರಾಜು. ಅವರ ಪ್ರಕಾರ ಇದೊಂದು ವಿಶೇಷ ಕಥಾಹಂದರದ ಚಿತ್ರ. ʼ ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ, ಹಾಗೂ ಅವರು ಅನುಭವಿಸುವ ತೊಂದರೆಗಳೇನು ಎನ್ನುವುದರ ಜತೆಗೆ ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದರ ಒಟ್ಟು ಒಟ್ಟು ಚಿತ್ರಣ ಈ ಚಿತ್ರದಲ್ಲಿದೆ ಯಂತೆ.
ನಿರ್ದೇಶಕ ಶ್ರೀನಿ
‘ಅಂಬುಜ’ ನಾಯಕಿ ಪ್ರಧಾನ ಚಿತ್ರ. ಶ್ರೀನಿ ಹನುಮಂತರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ಶ್ರೀನಿಯವರು ‘ ಅಂಬುಜ’ ಸಿನಿಮಾದ ಮೂಲಕ ನಯಾ ಸವಾಲಿಗೆ ಸಿದ್ದರಾಗಿದ್ದಾರೆ.ನಟಿ ಶುಭಪುಂಜಾ ಕೇಂದ್ರಬಿಂದು. ಹಿರಿಯ ನಟಿ ಪದ್ಮಜಾ ರಾವ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಿರ್ದೇಶಕ ಶರಣಯ್ಯ, ಕಲಾವಿದ ಗೋವಿಂದೇ ಗೌಡ, ಸಂದೇಶ್ ಶೆಟ್ಟಿ, ಮಜಾ ಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ನಿರ್ಮಾಪಕ ಕಾಶೀನಾಥ್ ಮಡಿವಾಳರ್
ಸದ್ಯಕ್ಕೀತ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಿದ್ದತೆ ನಡೆಸಿದೆ. ಬೆಂಗಳೂರು, ಗದಗ ಹಾಗೂ ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣಕ್ಕೆ ಲೋಕೆಷನ್ ಫಿಕ್ಸ್ ಆಗಿದೆ. ಇನ್ನು ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಬಂಡವಾಳ ಹೂಡಿದ್ದಾರೆ. ವಿಶೇಷ ಅಂದ್ರೆ ಅವರೇ ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ನಿರ್ದೇಶಕ ಶ್ರೀನಿ. ಹಾಗೆಯೇ ಚಿತ್ರದ ತಾಂತ್ರಿಕ ವರ್ಗದಲ್ಲಿ ಮುರುಳೀಧರ್ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ಎಂಸ್ ತ್ಯಾಗರಾಜ್ ಹಿನ್ನೆಲೆ ಸಂಗೀತದ ಮಾಡುತ್ತಿದ್ಧಾರೆ.
- ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ