ಡಿಎನ್ಎ ಅಂದ್ರೆ ನಮಗೆಲ್ಲ ಗೊತ್ತಿರೋದು ಜೀನ್ಸ್ ಅಥವಾ ವಂಶವಾಹಿ ಅಂತ. ಆದ್ರೆ ನಿರ್ದೇಶಕ ಪ್ರಕಾಶ್ರಾಜಮೇಹುʼ ಡಿಎನ್ಎʼ ಎನ್ನುವ ಚಿತ್ರದ ಶೀರ್ಷಿಕೆಗೆ ಧೃವ ನಕ್ಷತ್ರ ಆಕಾಶ ಅಂತ ಸಬ್ ಟೈಟಲ್ ಇಟ್ಕೊಂಡು ಪ್ರೇಕ್ಷಕರಿಗೆ ಏನನ್ನು ಹೇಳೋದಿಕ್ಕೆ ಪ್ರಯತ್ನಿಸಿದ್ದಾರೋ ಗೊತ್ತಿಲ್ಲ, ಆದರೆ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ವಂಶವಾಹಿಗೆ ಕನೆಕ್ಟ್ ಆಗುವ ಕಥೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿಯೇ ತಮ್ಮ ಚಿತ್ರದ ಕಥಾ ಹೂರಣಕ್ಕೆ ಕನೆಕ್ಟ್ ಆಗುವ ಹಾಗೆ ʼಸಂಬಂಜ ಅನ್ನೋದು ದೊಡದು ಕನಾ..ʼ ಎನ್ನುವ ಮಾತನ್ನು ಹೈಲೈಟ್ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಈಗ ಗೌರಿ, ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರ ಪ್ರೇಮಿಗಳಿಗೆ ಶುಭಾಶಯ ಕೋರಿರುವ ಚಿತ್ರ ತಂಡವು ಗೌರಿ-ಗಣೇಶನಿಗೂ ಇದೆ ಡಿಎನ್ ಎ ನಂಟು ಎಂಬುದಾಗಿ ಕಥೆಯ ಎಳೆಯೊಂದನ್ನು ರಿವೀಲ್ ಮಾಡಿದೆ.
ʼ ಇಬ್ಬರು ಗೌರಿಯರು, ಇಬ್ಬರು ಗಣೇಶಂದಿರು ಮತ್ತು ಇಬ್ಬರು ಶಿವನ ನಡುವಿನ ಭಾವನಾತ್ಮಕ ಸಂಬಂಧದ ಕಥೆಯೇ ಡಿಎನ್ ಎ. ಎಲ್ಲಾ ಕುಟುಂಬಗಳಿಗೂ ಕನೆಕ್ಟ್ ಆಗುತ್ತೆ. ಹಾಗೆಯೇ ಗೌರಿ-ಗಣೇಶ ಹಬ್ಬಕ್ಕೂ ಅದರ ಕನೆಕ್ಟ್ ಇದೆ. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ. ಸಂಬಂಜ ಅನ್ನೋದು ದೊಡದು ಕನಾ ಎನ್ನುವ ಸಂದೇಶ ಸಾರುವ ಕಥಾ ಹಂದರೊಂದಿಗೆ ಸಧಬಿರುಚಿಯ ಕೌಟುಂಬಿಕ ಚಿತ್ರ ವಿದು ಎಂದಿದ್ದಾರೆ ನಿರ್ದೇಶಕ ಪ್ರಕಾಶರಾಜ್ ಮೇಹು.ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಂದ್ರೀತಿ ಇದು ಮಲ್ಟಿಸ್ಟಾರ್ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್ ಬಜೆಟ್ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಅನಾವರಣ ಗೊಂಡಿದೆ.
ನಿರ್ದೇಶಕ ಪ್ರಕಾಶ್ ರಾಜ್ ಮೇಹು, ನಿರ್ಮಾಪಕ ಮೈಲಾರಿ
ಆ ಮೂಲಕ ಸೋಷಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಇಷ್ಟೊತ್ತಿಗೆ ಈ ಚಿತ್ರ ತೆರೆಗೆ ಬಂದು ಹಳೇ ಮಾತೇ ಆಗುತ್ತಿತ್ತೇನೋ. ಆದರೆ ಕೊರೋನಾ ಕಾರಣಕ್ಕೆ ತಡವಾಗಿ ತೆರೆ ಕಾಣಲಿದೆ. ತಡವಾದರೂ, ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಒಂದೊಳ್ಳೆಯ ಕಥಾ ಹಂದರದ ಮೂಲಕ ಭಾವನೆಗಳ ಕದ ತಟ್ಟಲಿದೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ರಾಜ ಮೇಹು.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿ ಲಹರಿ