ಇಲ್ಲಿಯವರೆಗೆ ಒಂದ್ ಲೆಕ್ಕ ಇವತ್ತಿಂದ ಇನ್ನೊಂದ್ ಲೆಕ್ಕ. ಇದು ಎಷ್ಟ್ ಪಕ್ಕಾನೋ ಗೊತ್ತಿಲ್ಲ. ಆದರೆ, ಬಿಗ್ಬಾಸ್ ವಿನ್ನರ್ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಅವರ ಈ ಹೊಸ ಫೋಟೋ ನಯಾ ಲೆಕ್ಕಾಚಾರವನ್ನೇ ಹೇಳುತ್ತಿದೆ. ಹೌದು, ಇವರಿಬ್ಬರ ಜೋಡಿ ಫೋಟೋ ನೋಡಿದವರಿಗಂತೂ ಸಿಕ್ಕಾಪಟ್ಟೆ ಕನ್ಫ್ಯೂಷನ್. ಅದರಲ್ಲೂ ಮಂಜು ಪಾವಗಡ ಅಭಿಮಾನಿ ಬಳಗವಂತೂ ಕಕ್ಕಾಬಿಕ್ಕಿ. ಅರೇ ಇದೇನಪ್ಪಾ ವಿಷ್ಯ ಅಂದುಕೊಂಡ್ರಾ? ವಿಷ್ಯ ಇರೋದೇ ಈ ಫೋಟೋದಲ್ಲಿ ಸ್ವಾಮಿ.
ನಾರ್ಮಲ್ ಫೋಟೋ ಆಗಿದ್ದರೆ, ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ, ಇವರಿಬ್ಬರು ಕ್ಯಾಮೆರಾ ಮುಂದೆ ನವಜೋಡಿಯಂತೆ ಫೋಸು ಕೊಟ್ಟಿರುವುದರಿಂದ ಅವರ ಫ್ಯಾನ್ಸ್ ಸೇರಿದಂತೆ ಎಲ್ಲರೂ ಕೂಡ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಜನ ಇವರಿಬ್ಬರು ಮದ್ವೆ ಆಗ್ತಿದಾರಾ ಅಥವಾ ಬರೀ ಫೋಟೋಗೆ ಫೋಸ್ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಕೆಲವರು, ಇದು ಸಿನಿಮಾ ಫೋಟೋ ಶೂಟ್ ಇರಬಹುದು ಅಥವಾ ಇಬ್ಬರೂ ಸೇರಿ ಹೊಸ ಸೀರಿಯಲ್ ಮಾಡ್ತಾ ಇರಬಹುದೇನೋ ಅಂತೆಲ್ಲಾ ಚರ್ಚೆ ಆಗುತ್ತಿದೆ. ಈ ಎಲ್ಲಾ ಅನುಮಾನಕ್ಕೆ ಮತ್ತು ಚರ್ಚೆಗೆ ಇವರಿಬ್ಬರೇ ಉತ್ತರ ಕೊಡಬೇಕಿದೆ.
ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ಇಬ್ಬರು ಸ್ನೇಹಿತರು. ಬಿಗ್ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದವರು, ಅಲ್ಲಿಂದ ಹೊರ ಬಂದಮೇಲೂ ಸಹ ತಮ್ಮ ಸ್ನೇಹ ಸಂಬಂಧವನ್ನು ಮತ್ತಷ್ಟು ಬಿಗಿ ಮಾಡಿಕೊಂಡಿದ್ದಾರೆ. ದಿವ್ಯ ಸುರೇಶ್ ಅಂತೂ “ನನ್ ಮಂಜ” ಅಂತ ಊರ್ ತುಂಬ ಹೇಳ್ಕೊಂಡ್ ಬರ್ತಾ ಇದಾರೆ. ಈ ನನ್ ಮಂಜ ಅನ್ನುವುದರ ಒಳ ಮರ್ಮ ಏನೆಂಬುದು ಗೊತ್ತಿಲ್ಲ.
ಅತ್ತ ಮಂಜಣ್ಣ ಕೂಡ ಏನು ಹೇಳ್ತಾ ಇಲ್ಲ. ಹೀಗಾಗಿ ಅಂತೆಕಂತೆಗಳು ನಡೆಯುತ್ತಲೇ ಇವೆ. ಇವರಿಬ್ಬರ ಬಗ್ಗೆ ಜೋರಾದ ಸುದ್ದಿಗಳು ಹರಿದಾಡುತ್ತಲೇ ಇವೆ. ಇವರು ಕೊಟ್ಟಿರುವ ಫೋಟೋ ಫೋಸ್ ನೋಡಿಕೊಂಡು ಅದೇನು ಅಂತ ನೀವ್ ನೀವೆ ಡಿಸೈಡ್ ಮಾಡ್ಕೊಳ್ಳೋದ್ ಬಿಟ್ರೆ ಬೇರೆ ದಾರಿ ಇಲ್ಲ.