ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತಾರೇ. ಈ ಮಾತಿನಂತೆ ನಡೆದ ಕಾರಣಕ್ಕೆ ಸೂರ್ಯಕಾಂತ್ ಸೂರ್ಯನಂತೆಯೇ ಧಗಧಗಿಸುತ್ತಿದ್ದಾರೆ. ಸೂರ್ಯಕಾಂತ್ ನಂತೆಯೇ ಸಹಸ್ರಾರು ಪ್ರತಿಭೆಗಳು ಪಂಚಾಕ್ಷರಿ ಅಣ್ಣಿಗೇರಿಯವರ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುತ್ತಿದ್ದಾರೆ. ಪುಟ್ಟರಾಜ ಗವಾಯಿಗಳ ಗುರುಕುಲದಿಂದ ಲಕ್ಷ ಲಕ್ಷ ಪ್ರತಿಭೆಗಳು ಹೊರಬರುತ್ತಿದ್ದಾರೆ. ಸಂಗೀತ ಲೋಕವನ್ನು ಬೆಳಗುತ್ತಿದ್ದಾರೆ.
ಮೂರೇ ಮೂರು ವಾರಗಳ ಹಿಂದೆ ಸೂರ್ಯಕಾಂತ್ ಸಾಮಾನ್ಯ ಮತ್ತು ಸಾಮಾನ್ಯ ಅಷ್ಟೇ. ಆದರೆ ಅದೇ ಮೂರು ವಾರಗಳು ಕಳೆದು ನಾಲ್ಕನೇ ವಾರ ಶುರುವಾಗುವಷ್ಟರಲ್ಲಿ ಸೂರ್ಯಕಾಂತ್ ಕಲ್ಬುರ್ಗಿಯ ಹೆಮ್ಮೆಯ ಕುವರ, ಕರುನಾಡಿನ ಮನೆಮಗ, ಕೊನೆಗೀಗ ದೇವರ ಮಗ. ನಿಜಕ್ಕೂ ಸೂರ್ಯಕಾಂತ್ ದೇವರ ಮಗನೇ. ಮಾತು ಕೈಕೊಟ್ಟರೂ ಕೂಡ ಕಂಠಕ್ಕೆ ಕಿಚ್ಚು ಹಚ್ಚಿಕೊಂಡು ‘ ಎದೆತುಂಬಿ ಹಾಡುವೆನು’ ಅಖಾಡಕ್ಕೆ ಧುಮ್ಕಿರುವ ಸೂರ್ಯಕಾಂತ್, ಸಂಗೀತ ಲೋಕ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಇಡೀ ಕರುನಾಡ ಮಂದಿಯಿಂದ ಉಘೇ ಉಘೇ ಎನಿಸಿಕೊಂಡಿದ್ದಾರೆ.
ಕನ್ನಡ ನಾಡಿನಲ್ಲಿ ಈ ಪುಣ್ಯ ಭೂಮಿಯಲ್ಲಿ ಅದೆಷ್ಟೋ ಸೂರ್ಯಕಾಂತರಿದ್ದಾರೆ. ಅಷ್ಟು ಮಂದಿ ಸೂರ್ಯಕಾಂತ್ ರಲ್ಲಿ ಕಲ್ಬುರ್ಗಿಯ ಸೂರ್ಯಕಾಂತ್ ಬೆಳಕಿಗೆ ಬರುವುದಕ್ಕೆ, ಎದೆತುಂಬಿ ಹಾಡುವೆನು ಸಂಗೀತ ಸಾಮ್ರಾಜ್ಯದಲ್ಲಿ ಸ್ವರ ಕುಣಿಸುವುದಕ್ಕೆ, ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಡುವುದಕ್ಕೆ ಮೂಲ ಕಾರಣ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಗುರುಗಳಾದ ಪಂಚಾಕ್ಷರಿ ಅಣ್ಣಿಗೇರಿಯವರು. ಇವರು ಸೂರ್ಯಕಾಂತ್ ಕಂಠಕ್ಕಿರುವ ಶಕ್ತಿಯನ್ನ ಗಮನಿಸದೇ ಹೋಗಿದ್ದರೆ, ಹಸಿದ ಹೊಟ್ಟೆಗೆ ಅನ್ನಕೊಟ್ಟು ಸಂಗೀತಭ್ಯಾಸ ಮಾಡಿಸದೇ ಹೋಗಿದ್ದರೆ, ಇವತ್ತು ಸೂರ್ಯಕಾಂತ್
ಗಾನಭೀಷ್ಮ ಎಸ್ ಪಿ.ಬಿಯವರು ಹುಟ್ಟುಹಾಕಿದ ವೇದಿಕೆಗೆ ಬರುತ್ತಿರಲಿಲ್ಲ. ಮಾತು ಬಂದರೂ ಮೂಖರಾಗಿರುವವರಿಗೆ ಸ್ಪೂರ್ತಿಯಾಗುತ್ತಿರಲಿಲ್ಲ.
ಎಲ್ಲಾ ಇದ್ದು ಏನು ಇಲ್ಲವೆಂದು ಕೊರಗುತ್ತಿರುವ ಎಷ್ಟೋ ಮಂದಿಗೆ ಕಲ್ಬುರ್ಗಿಯ ಸೂರ್ಯಕಾಂತ್ ಸ್ಪೂರ್ತಿಯಾಗಿದ್ದಾರೆ. ಆತ್ಮವಿಶ್ವಾಸವೊಂದಿದ್ದರೆ ನ್ಯೂನತೆಗೆ ಮಾತ್ರವಲ್ಲ ದೇವರಿಗೆ ಸೆಡ್ಡುಹೊಡೆದು ಸಾಧನೆ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ. ಮಾತು ಕೈ ಕೊಟ್ಟರೂ ಕಂಠವನ್ನ ಶಾರ್ಪ್ ಮಾಡಿಕೊಂಡಿರುವ ಸೂರ್ಯಕಾಂತ್, ತಮ್ಮ ಧ್ವನಿಯ ಮೂಲಕ ಕೇಳುಗರನ್ನ ಕಟ್ಟಿಹಾಕ್ತಾರೆ, ಮನಸ್ಸನ್ನ ಹಗುರಾಗಿಸ್ತಾರೆ, ಹೃದಯಕ್ಕೆ ಇಂಪು ಪ್ಲಸ್ ತಂಪು ನೀಡ್ತಾರೆ. ಜೊತೆಗೆ ಭಾವುಕರನ್ನಾಗಿ ಮಾಡುತ್ತಾರೆ. ಹೀಗೆ ಸಂಗೀತದ ಚಿಕಿತ್ಸೆ ನೀಡುತ್ತಾ ಸವಾರಿ ಹೊರಟಿರುವ ಸೂರ್ಯಕಾಂತ್, ‘ ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ ಅಂತ ಹಾಡಿ ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಗುರುಕಿರಣ್ ರನ್ನ ಭಾವುಕರನ್ನಾಗಿಸಿದ್ದಾರೆ. ಹರಿದು ಹೋಗಿರುವ ನನ್ನ ಹೃದಯಕ್ಕೆ ಸಂಗೀತದ ಮೂಲಕ ಹೊಲಿಗೆ ಹಾಕಿಬಿಟ್ಟ. ಇನ್ಮೇಲೆ ಸೂರ್ಯಕಾಂತ್ ನನ್ನ ತಮ್ಮನಿದ್ದಂತೆ ಅವನ ಬೆನ್ನಿಗೆ ನಾನು ನಿಲ್ತೇನೆ ಎಂದಿದ್ದಾರೆ ರಘು ದೀಕ್ಷಿತ್.
ಹಾಡು ಎಲ್ಲರೂ ಹಾಡ್ತಾರೆ. ಆದರೆ, ಭಾವಪರವಶರಾಗಿ ಹಾಡುವವರು ತುಂಬಾ ಅಪರೂಪ. ಆ ಅಪರೂಪದವರಲ್ಲಿ ಸೂರ್ಯಕಾಂತ್ ಕೂಡ ಒಬ್ಬರು ಎನ್ನುವುದು ಪ್ರೂ ಆಗಿದೆ. ‘ಪವಡಿಸು ಪರಮಾತ್ಮ’ ಹಾಡಿನ ಮೂಲಕ ಸ್ವರಸಾಮ್ರಾಜ್ಯದ ದಿಗ್ಗಜರು ಮಾತ್ರವಲ್ಲ ಸ್ವರ್ಗದಲ್ಲಿ ಕುಳಿತು ಎದೆತುಂಬಿ ಹಾಡುವೆನು ಕಾರ್ಯಕ್ರಮ ವೀಕ್ಷಿಸುತ್ತಿರುವ ಗಾನಗಾರುಡಿಗ, ಸ್ವರಭೀಷ್ಮ ಎಸ್. ಪಿ ಬಾಲಸುಬ್ರಹ್ಮಣ್ಯಂ
ಅವರು ಮೆಚ್ಚುವಂತೆ ಭಾವಪೂರ್ಣವಾಗಿ ಹಾಡಿದ್ದಾರೆ. ಇಷ್ಟೊಂದು ಭಾವ ಭಕ್ತಿ ಕಲಿಸಿದ್ದು ಪಂಚಾಕ್ಷರಿ ಅಣ್ಣಿಗೇರಿಯವರು. ಶಿಕ್ಷಕರ ದಿನಾಚರಣೆ ಅಂಗವಾಗಿ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು.
ಗುರುಗಳು ಹಾರ್ಮೋನಿಯಂ ನುಡಿಸಿದರೆ, ಶಿಷ್ಯ ಸೂರ್ಯಕಾಂತ್ ಭಕ್ತಿಪೂರ್ವಕ ಹಾಡಿನ ಮೂಲಕ ಗುರುಭಕ್ತಿ ತೋರಿಸಿದರು.
ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತಾರೇ. ಈ ಮಾತಿನಂತೆ ನಡೆದ ಕಾರಣಕ್ಕೆ ಸೂರ್ಯಕಾಂತ್ ಸೂರ್ಯನಂತೆಯೇ ಧಗಧಗಿಸುತ್ತಿದ್ದಾರೆ. ಸೂರ್ಯಕಾಂತ್ ನಂತೆಯೇ ಸಹಸ್ರಾರು ಪ್ರತಿಭೆಗಳು ಪಂಚಾಕ್ಷರಿ ಅಣ್ಣಿಗೇರಿಯವರ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುತ್ತಿದ್ದಾರೆ. ಪುಟ್ಟರಾಜ ಗವಾಯಿಗಳ ಗುರುಕುಲದಿಂದ ಲಕ್ಷ ಲಕ್ಷ ಪ್ರತಿಭೆಗಳು ಹೊರಬರುತ್ತಿದ್ದಾರೆ. ಸಂಗೀತ ಲೋಕವನ್ನು ಬೆಳಗುತ್ತಿದ್ದಾರೆ.
ಕನ್ನಡ ನೆಲದಲ್ಲಿ ಅವಿತಿರುವ ಸಂಗೀತ ಪ್ರತಿಭೆಗಳು ಹೊರಬರಬೇಕು. ಕರುನಾಡಿನಲ್ಲಿ ಕನ್ನಡ ಕಂಠ ಮೊಳಗಬೇಕು ಮತ್ತು ಬೆಳಗಬೇಕು ಎನ್ನುವ ಮಹದಾಸೆಯಿತ್ತು. ಆ ದಿವ್ಯಕನಸಿನಂತೆ ಎಷ್ಟೋ ಪ್ರತಿಭೆಗಳು ಎದೆತುಂಬಿ ಹಾಡುವೆನು ವೇದಿಕೆಯಿಂದ ಬೆಳಕಿಗೆ ಬಂದರು. ಸಂಗೀತ ಲೋಕದಲ್ಲಿ ಮೆರವಣಿಗೆ ಹೊರಟರು. ಈಗ ಮತ್ತೊಂದು ತಂಡ ಸ್ವರಪರೀಕ್ಷೆ ಎದುರಿಸಿ ಕಂಠದ ಜೊತೆ ಕಾದಾಟಕ್ಕೆ ಇಳಿದಿದೆ. ದಕ್ಷಿಣ ಭಾರತದ ಅಗ್ರ ಸಂಗೀತ ಪರಂಪರೆ ಮುಂದುವರೆದಿದೆ. ಕನ್ನಡ ನಾಡಿನ ಪ್ರತಿಭೆಗಳನ್ನ ಪ್ರೋತ್ಸಾಹಿಸುವ, ಬೆಳೆಸುವ ಕಾಯಕ ಎಸ್ ಬಿಯವರ ಕನಸಿನಂತೆ ನೆರವೇರುತ್ತಿದೆ. ಮತ್ತಷ್ಟು ಮಗದಷ್ಟು ಗಾನ ಪ್ರತಿಭೆಗಳು ಕರುನಾಡಿಗೆ ಕೊಡುಗೆಯಾಗಿ ಸಿಗಲಿವೆ.
ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ