“ಟಗರು” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಷ್ಟೇ ಅಲ್ಲ, ಅಲ್ಲಿದ್ದ ಡಾಲಿ ಅಲಿಯಾಸ್ ಧನಂಜಯ್ ಹಾಗೂ ಚಿಟ್ಟೆ ಅಲಿಯಾಸ್ ವಸಿಷ್ಠ ಸಿಂಹ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಂತಹ ಚಿತ್ರ. ಈಗ “ಹೆಡ್ಬುಷ್”ನಲ್ಲಿ ಈ ಜೋಡಿ ಸೇರಿ ಮೋಡಿ ಮಾಡಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿಯೇ ನಡೆದಿದೆ.
ಡಾಲಿ-ಚಿಟ್ಟೆ ಫ್ಯಾನ್ಸ್ ಕುಣಿದು ಕುಪ್ಪಳಿಸುವ, ಪಟಾಕಿ ಹಚ್ಚಿ ಕೇಕೆ ಹೊಡೆದು ಸಂಭ್ರಮಿಸುವ ಸುದ್ದಿ ಇದು. ಇಂತಹದ್ದೊಂದು ಬಡಾ ಖಬರ್ನ ಕೇಳೋದಕ್ಕಾಗಿಯೇ, ಇಂತಹದ್ದೊಂದು ಕ್ಷಣಕ್ಕಾಗಿಯೇ ಇವರಿಬ್ಬರ ಫ್ಯಾನ್ಸ್ ಕಾತುರರಾಗಿ ಕಾಯ್ತಿದ್ದರು. ಕೊನೆಗೆ ಆ ಕೌತುಕದ ಕ್ಷಣಕ್ಕೆ ಬಿಗ್ ಬ್ರೇಕ್ ಬಿದ್ದಿದೆ. “ಟಗರು” ನಂತರ ಡೆಡ್ಲಿ ಕಾಂಬೋ ಮತ್ತೆ ಜೊತೆಯಾಗಿದೆ. ಅದೇ ಈ ಹೊತ್ತಿನ ಸುದ್ದಿ.
“ಟಗರು” ಸಿನಿಮಾ ಖ್ಯಾತಿಯ ಡಾಲಿ ಮತ್ತು ಚಿಟ್ಟೆನಾ ಒಟ್ಟಿಗೆ ನೋಡಬೇಕು ಎನ್ನುವುದು ಇವರಿಬ್ಬರ ಅಭಿಮಾನಿಗಳ ಬಹುದೊಡ್ಡ ಕನಸು. ಆ ಕನಸಿನ ಸಾಕಾರಕ್ಕಾಗಿ ಫ್ಯಾನ್ಸ್ ಎದುರು ನೋಡ್ತಿದ್ದರು. ಫೈನಲೀ, ಆ ದಿವ್ಯ ಘಳಿಗೆ ಕೂಡಿ ಬಂದಿದೆ. “ಟಗರು” ಅಖಾಡದಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಧಗಧಗಿಸಿ, ಬೆಳ್ಳಿತೆರೆ ಅಂಗಳದಲ್ಲಿ ಧೂಳೆಬ್ಬಿಸಿದ ಡಾಲಿ-ಚಿಟ್ಟೆ ಜೋಡಿ ಈಗ ಪುನಃ “ಹೆಡ್ಬುಷ್’ಗಾಗಿ ಒಂದಾಗಿದೆ. “ಟಗರು” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಷ್ಟೇ ಅಲ್ಲ, ಅಲ್ಲಿದ್ದ ಡಾಲಿ ಅಲಿಯಾಸ್ ಧನಂಜಯ್ ಹಾಗೂ ಚಿಟ್ಟೆ ಅಲಿಯಾಸ್ ವಸಿಷ್ಠ ಸಿಂಹ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಂತಹ ಚಿತ್ರ. ಈಗ “ಹೆಡ್ಬುಷ್”ನಲ್ಲಿ ಈ ಜೋಡಿ ಸೇರಿ ಮೋಡಿ ಮಾಡಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಜೋರಾಗಿಯೇ ನಡೆದಿದೆ.
`ಹೆಡ್ಬುಷ್’ ಟೀಮ್ಗೆ ಲೂಸ್ ಮಾದ ಯೋಗಿ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದರು. ಇದೀಗ, ಚಿಟ್ಟೆ ಸರದಿ. ಗೆಳೆಯ ಕಮ್ ಕೋಸ್ಟಾರ್ ಡಾಲಿಯ ಬಹುನಿರೀಕ್ಷಿತ ಸಿನಿಮಾಗೆ ಸೇರಿಕೊಂಡಿರುವ ಕುರಿತಾಗಿ ಖಾಸಗಿ ಪತ್ರಿಕೆಗೆ ಚಿಟ್ಟೆ ಅಲಿಯಾಸ್ ವಸಿಷ್ಟ ಎನ್.ಸಿಂಹ ಸಂದರ್ಶನ ನೀಡಿದ್ದಾರೆ. ಡಾಲಿ-ಚಿಟ್ಟೆ ಜುಗಲ್ಬಂಧಿನಾ ಬಿಗ್ಸ್ಕ್ರೀನ್ ಮೇಲೆ ಮತ್ತೆ ನೋಡೋದಕ್ಕೆ ಫ್ಯಾನ್ಸ್ ಬಯಸಿದ್ದರು. ಯಾವಾಗ ಒಂದಾಗ್ತೀರಿ ಅಂತ ಕೇಳ್ತಾನೆ ಇದ್ದರು. ಒಂದೊಳ್ಳೆ ಸ್ಕ್ರಿಪ್ಟ್ಗಾಗಿ ನಾವಿಬ್ಬರು ಕಾಯ್ತಿದ್ದೆವು, ಈಗ ಸ್ಕ್ರಿಪ್ಟ್ ಜೊತೆ ಒಂದೊಳ್ಳೆ ಟೀಮ್ ಕೂಡ ಸಿಕ್ಕಿದೆ ಎಂದಿದ್ದಾರೆ. ಈಗಾಗಲೇ, ಹೆಡ್ಬುಷ್ ಅಖಾಡಕ್ಕೆ ಧುಮ್ಕಿ ಒಂದೆರಡು ಸೀನ್ಗಳಲ್ಲಿ ಖದರ್ ತೋರಿಸಿದ್ದಾರೆ.
ಹೆಡ್ಬುಷ್' ಡಾಲಿ ಧನಂಜಯ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಭೂಗತ ದೊರೆ ಎಂ.ಪಿ.ಜಯರಾಜ್ರ ಜೀವನಾಧರಿತ
ಚಿತ್ರ ಇದಾಗಿದ್ದು, ಡಾನ್ ಪಾತ್ರದಲ್ಲಿ ಡಾಲಿ ಅಟ್ಟಹಾಸ ಮೆರೆಯಲಿದ್ದಾರೆ. ಧನಂಜಯ್ ಜೊತೆಗೆ ಹೆಡ್ಬುಷ್ ಟೀಮ್ ಸೇರಿಕೊಂಡಿರುವ ಲೂಸ್ ಮಾದ ಯೋಗಿ ಹಾಗೂ ಚಿಟ್ಟೆ ವಸಿಷ್ಟ ಸಿಂಹರದ್ದು ಯಾವ್ ರೀತಿಯ ಪಾತ್ರ ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ಡಾನ್ ಡಾಲಿ ಜೊತೆ ಚಿಟ್ಟೆ ಹಾಗೂ ಯೋಗಿ ಕೈ ಜೋಡಿಸ್ತಾರಾ ಅಥವಾ ಭೂಗತ ಪಾತಕಿ ವಿರುದ್ಧ ತಿರುಗಿ ಬೀಳ್ತಾರಾ ಎನ್ನುವ ಕೂತೂಹಲ ಸದ್ಯಕ್ಕೆ ಗುಟ್ಟಾಗಿದೆ.ಹೆಡ್ಬುಷ್’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಡಾಲಿ ಅಂಡ್ ಯೋಗಿ ಕಾಂಬಿನೇಷನ್ ದೃಶ್ಯಗಳನ್ನ ಸೆರೆಹಿಡಿಯೋದ್ರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಭೂಗತ ಜಗತ್ತಿನ ದೊರೆಯ ಬಯೋಪಿಕ್ ಆದ ಹೆಡ್ಬುಷ್’ಗೆ ಅಗ್ನಿಶ್ರೀಧರ್ ಕಥೆ-ಚಿತ್ರಕಥೆ ರಚಿಸಿದ್ದಾರೆ. ಯುವ ಪ್ರತಿಭೆ ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಆ ದಿನಗಳು ಚಿತ್ರಕ್ಕೆ ಕಥೆ ಕೆತ್ತಿಕೊಟ್ಟು ಸಿನಿರಸಿಕರನ್ನ ಮಾತ್ರವಲ್ಲದೇ ಬಿಗ್ಸ್ಕ್ರೀನೇ ಬೆಚ್ಚಿಬೀಳುವಂತೆ ಮಾಡಿದ ನಿರ್ದೇಶಕ ಅಗ್ನಿ ಶ್ರೀಧರ್,
ಹೆಡ್ಬುಷ್’ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಶೇಕ್ ಆಗುವಂತಹ ಕಥೆ ರಚಿಸ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಟಗರು ಜೋಡಿ ಒಂದಾಗಿರುವುದಕ್ಕೆ ಹೆಡ್ಬುಷ್’ ಮೇಲೆ ಕೂತೂಹಲ ಜಾಸ್ತಿಯಾಗ್ತಿದೆ. ಮಲ್ಟಿಲಾಂಗ್ವೇಜ್ನಲ್ಲಿ ತೆರೆಗೆ ತರಬೇಕು, ಎರಡು ಚಾಪ್ಟರ್ಗಳಾಗಿ ನಿರ್ಮಾಣ ಮಾಡ್ಬೇಕು ಎನ್ನುವ ಪ್ಲ್ಯಾನ್ ಚಿತ್ರತಂಡದ್ದು. ಅದೇ ಪ್ರಕಾರವಾಗಿಹೆಡ್ಬುಷ್’ ಟೀಮ್ ಮುನ್ನುಗುತ್ತಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಅತೀ ದೊಡ್ಡ ತಾರಾಬಳಗವಿರುವ ಹೆಡ್ಬುಷ್ಗೆ ಸೌತ್ ಸುಂದರಿ ಪಾಯಲ್ ರಜಪೂತ್ ಜೊತೆಯಾಗುತ್ತಿದ್ದಾರೆ. ಡಾನ್ ಡಾಲಿ ಜೊತೆ ಡ್ಯುಯೆಟ್ ಹಾಡಲಿದ್ದಾರೆ.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ