ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ವ ಸುದೀಪ್,ಮಂಗಳವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಭೇಟಿ ಮಾಡಿದ್ದಾರೆ. ವಿಧಾನ ಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಗಳನ್ನು ಸದ್ದಿಲ್ಲದೆ ಭೇಟಿ ಮಾಡಿರುವ ಸುದೀಪ್ ಕುತೂಹಲ ಕೆರಳಿಸಿದ್ದಾರೆ. ಅಷ್ಟಕ್ಕೂ, ಕಿಚ್ಚಸುದೀಪ್, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ವೈಯಕ್ತಿಕ ಕಾರಣಕ್ಕೋ ಅಥವಾ ಚಿತ್ರರಂಗದ ಪರವಾಗಿಯೋ ಗೊತ್ತಿಲ್ಲ. ಆದರೆ, ಸಿನಿಮಾ ಲೋಕದ ಏಳು- ಬೀಳಿನ ಕುರಿತಾಗಿಯೇ ಸಿಎಂ ಜತೆಗೆ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಸಿಎಂ ಭೇಟಿಯ ಕುರಿತು ನಟ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿಎಂ ಭೇಟಿ ಮಾಡಿದ್ದನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್, ಭೇಟಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ. ಬೆಸ್ಟ್ ವಿಷಸ್ ಆಲ್ವೇಸ್ ಎಂದು ಕಮೆಂಟ್ ಮಾಡಿದ್ದಾರೆ. ಈ ಮಧ್ಯೆ ನಟ ಸುದೀಪ್ ತಮ್ಮನ್ನು ಭೇಟಿ ಮಾಡಿದ್ದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಭೇಟಿಯ ವೇಳೆ ಚಿತ್ರ ರಂಗದ ಅನೇಕ ಸಂಗತಿಗಳ ಕುರಿತು ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಲಾಯಿತು ಎಂದಿದ್ದಾರೆ.
ನಿರ್ದಿಷ್ಟವಾಗಿ ಯಾವವಿಚಾರ ಕುರಿತು ಚರ್ಚೆ ನಡೆಯಿತು ಎನ್ನುವುದನ್ನು ಅವರು ಕೂಡ ಹೇಳಿಕೊಂಡಿಲ್ಲ, ಆದರೆ ಕೊರೊನಾ ಮೂರನೇ ಅಲೆಯ ಅವತಾರ ನೋಡಿಕೊಂಡು ಆದಷ್ಟು ಬೇಗ ಚಿತ್ರಮಂದಿರಕ್ಕೆ 100 ಅನುಮತಿ ಕೊಡುವಂತೆ ಕೇಳಿಕೊಂಡಿರ್ತಾರೆ ಅದಂತೂ ಗ್ಯಾರಂಟಿ. ಕಿಚ್ಚನ ಕೋಟಿಗೊಬ್ಬ 2ಹಾಗೂ ವಿಕ್ರಾಂತ್ ರೋಣ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ಸಜ್ಜಾಗುತ್ತಿವೆ. ತಮ್ಮ ಹುಟ್ಟುಹಬ್ಬಕ್ಕೂ ಎರಡು ದಿನ ಮುಂಚಿತವಾಗಿ ಸಿಎಂ ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.